ನವದೆಹಲಿ: ಸಿಬಿಐ ಮಾಜಿ ನಿರ್ದೇಶಕರಾದ ರಂಜಿತ್ ಸಿನ್ಹಾ ಅವರಿಗೆ ನಿನ್ನೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇಂದು ಮೃತಪಟ್ಟಿದ್ದಾರೆ.
ಸಿಬಿಐ ನಿರ್ದೇಶಕ ರಣಜಿತ್ ಸಿನ್ಹಾ(68) ಕೋವಿಡ್19 ನಿಂದ ದೆಹಲಿಯಲ್ಲಿ ನಿಧನರಾಗಿದ್ದಾರೆ. ಕೊರೊನಾ ಇರುವುದು ನಿನ್ನೆ ರಾತ್ರಿಯಷ್ಟೇ ದೃಢಪಟ್ಟಿತ್ತು. ಮೂಲತಃ ಬಿಹಾರದವರಾದ ಸಿನ್ಹಾ 1974ನೇ ಇಸ್ವಿಯ ಐಪಿಎಸ್ ಬ್ಯಾಚ್ನವರಾಗಿದ್ದಾರೆ.
Advertisement
ರಂಜಿಲ್ ಸಿನ್ಹಾ ತಮ್ಮ 40 ನೇ ವರ್ಷಗಳ ವೃತ್ತಿಜೀವನದಲ್ಲಿ ರಾಂಚಿ, ಮಧುಬಾನಿ ಮತ್ತು ಸಹರ್ಸಾದ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಹಾಗೇ ಹಲವು ವಿವಾದಗಳಿಗೂ ಸಿಲುಕಿದ್ದರು. ಕೋಮುಗಲಭೆ, ಅಂತಾರಾಷ್ಟ್ರೀಯ ಗಡಿ ಸಮಸ್ಯೆಗಳು, ನಕ್ಸಲ್ ದಂಗೆ ಸೇರಿ ಹಲವು ರೀತಿಯ ಕಾನೂನು ಸುವ್ಯವಸ್ಥೆ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಹೆಸರುಗಳಿಸಿದ್ದರು.
Advertisement
Advertisement
2000ರಲ್ಲಿ ಜಮ್ಮು-ಕಾಶ್ಮೀರದಲ್ಲಿ ಉಗ್ರ ಪರಿಸ್ಥಿತಿಯನ್ನು ಕೂಡ ನಿರ್ವಹಣೆ ಮಾಡಿದ್ದಾರೆ. 2005ರಲ್ಲಿ ಕಾಶ್ಮೀರಿ ವ್ಯಾಲಿಯಲ್ಲಿ ಐಜಿ (ಕಾರ್ಯಾಚರಣೆ) ಆಗಿದ್ದರು. 2012ರಲ್ಲಿ ಸಿಬಿಐನ ನಿರ್ದೇಶಕರಾಗಿ ನೇಮಕರಾದರು. ಅದಕ್ಕೂ ಮೊದಲು ರೈಲ್ವೇ ರಕ್ಷಣಾ ದಳ (ಆರ್ಪಿಎಫ್) ಮತ್ತು ಇಂಡೋ-ಟಿಬೇಟಿಯನ್ ಪೊಲೀಸ್ (ಐಟಿಬಿಪಿ) ಮುಖ್ಯಸ್ಥರಾಗಿಯೂ ಕೆಲಸ ಮಾಡಿದ್ದಾರೆ.
Advertisement