– ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ಮಂದಿರದಲ್ಲಿ ಅಫ್ರಿದಿ
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ ಶಾಹಿದ್ ಅಫ್ರಿದಿ ಹಿಂದೂ ದೇವಾಯಗಳಿಗೆ ಭೇಟಿ ನೀಡಿ ಅಲ್ಲಿನ ಬಡವರಿಗೆ ಆಹಾರ ಹಂಚಿಕೆ ಮಾಡಿದ್ದಾರೆ.
ಕೊರೊನಾದಿಂದ ಇಡೀ ವಿಶ್ವವೇ ಸಂಕಷ್ಟಕ್ಕೆ ಸಿಲುಕಿದೆ. ಜನರು ಊಟವಿಲ್ಲದೇ ಪರಾದಾಡುವಂತೆ ಮಾಡಿದೆ. ಈ ಸಮಯದಲ್ಲಿ ಕೆಲ ಸೆಲೆಬ್ರಿಟಿಗಳು ಹಾಗೂ ಹಣವಂತರು ಬಡ ಜನರಿಗೆ ನೆರವಾಗುವ ಮೂಲಕ ಹೃದಯವಂತಿಕೆ ಮೆರೆಯುತ್ತಿದ್ದಾರೆ. ಈಗ ತನ್ನ ದೇಶ ಸಂಕಷ್ಟಕ್ಕೆ ಸಿಲುಕಿದೆ ಎಂದು ಶಾಹಿದ್ ಅಫ್ರಿದಿ ಅವರು ಕೂಡ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.
Advertisement
Advertisement
ಪಾಕಿಸ್ತಾನದಲ್ಲೂ ಕೊರೊನಾ ಹೆಚ್ಚಿರುವ ಕಾರಣ ಅಲ್ಲಿನ ಸೆಲೆಬ್ರಿಟಿಗಳು, ಕ್ರಿಕೆಟ್ ಆಟಗಾರರು ಅಲ್ಲಿನ ಬಡಜನರ ನೆರವಿಗೆ ಬರುತ್ತಿದ್ದಾರೆ. ಅಂತೆಯೇ ಶಾಹಿದ್ ಅಫ್ರಿದಿ ಅವರು ಕೂಡ ಪಾಕಿಸ್ತಾನ ಗ್ರಾಮೀಣ ಭಾಗಗಳಿಗೆ ತೆರಳಿ ಅಲ್ಲಿನ ಬಡವರಿಗೆ ಮತ್ತು ನಿರ್ಗತಿಕರಿಗೆ ಮೂಲಭೂತವಾಗಿ ಬೇಕಾದ ವಸ್ತುಗಳು, ಆಹಾರ ಕಿಟ್ಗಳನ್ನು ಒದಗಿಸುತ್ತಿದ್ದಾರೆ. ಜೊತೆಗೆ ತಮ್ಮ ಶಾಹಿದ್ ಅಫ್ರಿದಿ ಫೌಂಡೇಶನ್ ಕಡೆಯಿಂದ ಪಾಕಿಸ್ತಾನದ ಎಲ್ಲ ಕಡೆಗೂ ತೆರಳಿ ಬಡವರಿಗೆ ಸಹಾಯ ಮಾಡುತ್ತಿದ್ದಾರೆ.
Advertisement
We are in it together and we shall prevail together. Unity is our strength. Visited Sri Lakshmi Narain mandir along with @JK555squash President @SAFoundationN to deliver essential food items.
Ensuring #HopeNotOut
پاکستان بھر تک, آپ کے گھر تک
https://t.co/KGY2Gs2zUr pic.twitter.com/1VpOhSkc8L
— Shahid Afridi (@SAfridiOfficial) May 10, 2020
Advertisement
ಈ ವಿಚಾರವಾಗಿ ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಹಾಕಿರುವ ಅಫ್ರಿದಿ, ನಾವು ಒಟ್ಟಿಗೆ ಇದ್ದೇವೆ ಮತ್ತು ನಾವು ಒಟ್ಟಿಗೆ ಮೇಲುಗೈ ಸಾಧಿಸುತ್ತೇವೆ. ಏಕತೆ ನಮ್ಮ ಶಕ್ತಿ. ಅಗತ್ಯ ಆಹಾರ ಪದಾರ್ಥಗಳನ್ನು ತಲುಪಿಸಲು ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ಮಂದಿರ ಮತ್ತು ಭೇಟಿ ನೀಡಿದ್ದೆವು. ಎಂದು ಬರೆದುಕೊಂಡು ತಾವು ಹೋಗಿ ಆಹಾರ ಸಾಮಗ್ರಿ ನೀಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
I have been lucky to have worked with many brands for ads/promotion. Now working first hand with the ones suffering during #COVID2019 I have a proposal to al brands: I will work with brands for free personally – I just want ration and funds in return #DonateKaroNa @SAFoundationN pic.twitter.com/UI43gkBTmo
— Shahid Afridi (@SAfridiOfficial) April 13, 2020
ಜೊತೆಗೆ ಕೊರೊನಾದಿಂದ ಕಷ್ಟಕ್ಕೆ ಒಳಗಾಗಿರುವ ಜನರಿಗೆ ಸಹಾಯ ಮಾಡಲು ಇನ್ನೂ ಒಂದು ಹೆಜ್ಚೆ ಮುಂದೇ ಹೋಗಿರುವ ಅವರು, ಅಫ್ರಿದಿ ನಟಿಸಿರುವ ಜಾಹೀರಾತುಗಳ ಬ್ರಾಂಡ್ ಕಂಪನಿಗಳಿಗೆ ಕೂಡ ಜನರಿಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ. ನಾನು ಕೆಲಸ ಮಾಡಿದ ಬ್ರಾಂಡ್ ಕಂಪನಿಗಳು ನನಗೆ ಹಣ ನೀಡುವುದು ಬೇಡ. ಅದರ ಬದಲು ಫುಡ್ ಕಿಟ್ ನೀಡಿ ನಾನು ಅದನ್ನು ಬಡವರಿಗೆ ತಲುಪಿಸುತ್ತೇನೆ ಎಂದು ವಿಡಿಯೋ ಮಾಡಿ ಮನವಿ ಮಾಡಿಕೊಂಡಿದ್ದಾರೆ.
ಶಾಹಿದ್ ಅಫ್ರಿದಿ ಎಂಬ ಪೌಂಡೇಶನ್ ಆರಂಭಿಸಿರುವ ಅಫ್ರಿದಿ, ಈ ಪ್ರತಿಸ್ಠಾನದ ಕಡೆಯಿಂದ ಹಲವಾರ ಜನರಿಗೆ ಸಹಾಯ ಮಾಡುತ್ತಿದ್ದಾರೆ. ಈ ನಡುವೆ ಕೊರೊನಾ ಸಮಯದಲ್ಲಿ ಅಫ್ರಿದಿ ಫೌಂಡೇಶನ್ ಗೆ ಬೆಂಬಲ ನೀಡಿ ಎಂದು ಭಾರತದ ಕ್ರಿಕೆಟ್ ಆಟಗಾರರಾದ ಯುರಾಜ್ ಸಿಂಗ್ ಮತ್ತು ಹರ್ಭಜನ್ ಸಿಂಗ್ ಅವರು ಮನವಿ ಮಾಡಿದ್ದರು. ಈ ವಿಚಾರವಾಗಿ ಯುವ ಭಜ್ಜಿ ಮೇಲೆ ಸಿಡಿದೆದ್ದಿದ್ದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.