ಬೆಂಗಳೂರು: ಕೊರೊನಾ ಸಕಂಷ್ಟದಿಂದಾಗಿ ಇಷ್ಟು ದಿನ ಬರೀ ಪಾರ್ಸೆಲ್ಗೆ ಅವಕಾಶವಿದ್ದ ಹೋಟೆಲ್ನಲ್ಲಿ ನಾಳೆಯಿಂದ ಕೂತು ತಿನ್ನುವ ಅವಕಾಶಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
Advertisement
ಕೊರೊನಾ ಎರಡನೇ ಅಲೆಯ ಹೊಡೆತಕ್ಕೆ ಸಿಲುಕ್ಕಿದ್ದ ರಾಜ್ಯ ನಿಧಾನವಾಗಿ ಸಹಜ ಸ್ಥಿತಿಗೆ ಬರುತ್ತಿದೆ. ಲಾಕ್ಡೌನ್ ಬಳಿಕ ರಾಜ್ಯ ಸರ್ಕಾರ ಮತ್ತೆ ಅನ್ಲಾಕ್ ಪ್ರಕ್ರಿಯೆ 2.0ಗೆ ಹೊಸ ಮಾರ್ಗಸೂಚಿಯನ್ನ ಬಿಡುಗಡೆ ಮಾಡಿದೆ. ಇದನ್ನೂ ಓದಿ: ಭಾನುವಾರದ ಬಾಡೂಟಕ್ಕೆ ಮಾಡಿ ಪೋರ್ಕ್ ಫ್ರೈ
Advertisement
Advertisement
ಸರ್ಕಾರ ಶೇ.50 ರಷ್ಟು ಮಾತ್ರ ಟೇಬಲ್ ಸರ್ವಿಸ್ಗೆ ಅವಕಾಶ ನೀಡಿದೆ. ನಾಳೆಯಿಂದ ಟೇಬಲ್ ಸರ್ವಿಸ್ ನೀಡಲು ಹೋಟಲ್ಗಳು ಸಜ್ಜಾಗುತ್ತವೆ. ಹೋಟಲ್ ಮಾಲೀಕರು ಮತ್ತು ಸಿಬ್ಬಂದಿ ಹೋಟೆಲ್ನಲ್ಲಿ ಸಾಮಾಜಿಕ ಅಂತರಕ್ಕೆ ಟೇಬಲ್ ಹಾಕಿ ಶೇ 50 ರಷ್ಟು ಮಾತ್ರ ಚೇರ್ ವ್ಯವಸ್ಥೆ ಮಾಡುತ್ತಿದ್ದಾರೆ. ಇದನ್ನೂ ಓದಿ: 16 ಜಿಲ್ಲೆಗಳಲ್ಲಿ ಸಂಜೆ 5ರವರೆಗೆ ಅನ್ಲಾಕ್- ನಿಯಮಗಳೇನು?
Advertisement
ಸರ್ಕಾರದ ನಿರ್ಧಾರದಿಂದ ಸಂತಸಗೊಂಡಿರೋ ಹೋಟಲ್ ಮಾಲೀಕರು ಸರ್ಕಾರದ ಗೈಡ್ ಲೈನ್ ಪ್ರಕಾರ ಸರ್ವಿಸ್ ನೀಡಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ನಾಳೆಯಿಂದ ಹೋಟೆಲ್ನಲ್ಲಿಯೇ ಕುಳಿತು ಆಹಾರವನ್ನು ಸವಿಯಬಹುದಾಗಿದೆ.