ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ಆರಂಭಕ್ಕೆ ಕ್ಷಣಗಣನೆ ಎದುರಾಗಿದ್ದು, ಬಲಗಾಲಿಟ್ಟು ಮನೆ ಪ್ರವೇಶಿಸಲು ಸ್ಪರ್ಧಿಗಳು ಕಾತರಿಂದ ಕಾಯುತ್ತಿದ್ದಾರೆ. ಅದೇ ರೀತಿ ವೀಕ್ಷಕರು ಸಹ ಬಿಗ್ ಬಾಸ್ ವೀಕ್ಷಣೆಗೆ ತುದಿಗಾಲಲ್ಲಿ ನಿಂತಿದ್ದಾರೆ. ವಾಹಿನಿ ಸಹ ಸ್ಪರ್ಧಿಗಳ ಜರ್ನಿ ವಿಟಿ ಬಿಡುಗಡೆ ಮಾಡುವ ಮೂಲಕ ಕಿಕ್ಕೇರಿಸುತ್ತಿದೆ. ಇದೆಲ್ಲದ ಮಧ್ಯೆ ಸ್ಪರ್ಧಿಗಳ ಗ್ರ್ಯಾಂಡ್ ಎಂಟ್ರಿ ಹೇಗಿರಲಿದೆ ಎಂಬ ಕುತೂಹಲ ಕಾಡುತ್ತಿದೆ.
Advertisement
ಹೌದು ಬಿಗ್ ಬಾಸ್ 8ರ 2ನೇ ಇನ್ನಿಂಗ್ಸ್ ಮುಂದುವರಿದ ಭಾಗವೇ ಅಥವಾ ಪುನರಾರಂಭವೇ ಎಂಬ ಪ್ರಶ್ನೆ ಸಹ ಇದೇ ವೇಳೆ ಮೂಡಿದ್ದು, ಈ ಕುರಿತು ವಾಹಿನಿಯ ವಿಟಿಯಲ್ಲಿ ಸಹ ತಲೆಯಲ್ಲಿ ಹುಳ ಬಿಟ್ಟಿದೆ. ಅರ್ಧವಾಗಿರುವ ಕನಸು ಮುಂದುವರಿಯುತ್ತಾ ಅಥವಾ ಹೊಸ ಕನಸೇ ಆರಂಭವಾಗುತ್ತಾ ಎಂದಿಂದೆ. ಹೀಗಾಗಿ ಹಲವರಲ್ಲಿ ಗೊಂದಲ ಉಂಟಾಗಿದ್ದು, ಇದಕ್ಕೆ ಬುಧವಾರ ಸಂಜೆ 6ಕ್ಕೆ ಪ್ರಸಾರವಾಗುವ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ಮಹಾಸಂಚಿಕೆಯಲ್ಲೇ ಉತ್ತರ ಸಿಗಬೇಕಿದೆ. ಆದರೆ ಸ್ಪರ್ಧಿಗಳು ಮಾತ್ರ ಫುಲ್ ತಯಾರಾಗಿದ್ದಾರೆ.
Advertisement
Advertisement
ಒಂದರ ಹಿಂದೆ ಒಂದರಂತೆ ಸ್ಪರ್ಧಿಗಳ ಜರ್ನಿ ವಿಟಿಯನ್ನು ಸಹ ಬಿಡುಗಡೆ ಮಾಡಲಾಗುತ್ತಿದೆ. ಆದರೆ ಸ್ಪರ್ಧಿಗಳ ಎಂಟ್ರಿ, ಹೊಸಬರ ಎಂಟ್ರಿ, ಅಲ್ಲದೆ ಈಗಿರುವ ಸ್ಪರ್ಧಿಗಳು ಯಾರಾದ್ರೂ ಮಿಸ್ ಆಗ್ತಾರಾ ಎಂಬುದರ ಬಗ್ಗೆ ಈ ವರೆಗೆ ಸ್ಪಷ್ಟನೆ ಸಿಕ್ಕಿಲ್ಲ. ಆದರೆ ಎರಡನೇ ಇನ್ನಿಂಗ್ಸ್ ಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಗ್ರ್ಯಾಂಡ್ ಎಂಟ್ರಿ ಮೂಲಕ ಸ್ಪರ್ಧಿಗಳು ಮತ್ತೆ ಬಿಗ್ ಮನೆಗೆ ಕಳುಹಿಸುವುದು ಮಾತ್ರ ಪಕ್ಕಾ.
Advertisement
ಇನ್ನೂ ಸಂತಸದ ಸಂಗತಿ ಎಂದರೆ ಎಲ್ಲ ಸ್ಪರ್ಧಿಗಳನ್ನು ಕಿಚ್ಚ ಸುದೀಪ್ ಮಾತನಾಡಿಸಲಿದ್ದಾರಂತೆ. ಬಳಿಕ ಸ್ವತಃ ಅವರೇ ಮನೆಯೊಳಗೆ ಕಳುಹಿಸಿಕೊಡಲಿದ್ದಾರೆ. ಹೊಸ ಸ್ಪರ್ಧಿಗಳು ಭಾಗವಹಿಸಿದರೆ ಅವರನ್ನೂ ಕಿಚ್ಚ ಪರಿಚಯಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಂದಹಾಗೆ ಬಿಗ್ ಬಾಸ್ ಸೀಸನ್ 8 ಅರ್ಧಕ್ಕೆ ನಿಲ್ಲುವುದಕ್ಕೂ ಮೊದಲು ಅನಾರೋಗ್ಯದಿಂದ ಹಾಗೂ ಲಾಕ್ಡೌನ್ನಿಂದ ಕಿಚ್ಚ ವಾರಾಂತ್ಯದ ಶೋನಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಕೊನೇಯ ಕೆಲ ವಾರಗಳಲ್ಲಿ ಕಿಚ್ಚನ ಅನುಪಸ್ಥಿತಿ ಕಾಡುತ್ತಿತ್ತು.
ಕಳೆದ ಬಾರಿಗಿಂತ ಬಿಗ್ ಬಾಸ್ ಹೊಸ ಸ್ವರೂಪದಲ್ಲಿ ಮೂಡಿ ಬರಲಿದ್ದು, ಹಲವು ಬದಲಾವಣೆಗಳನ್ನು ಸಹ ಮಾಡಿಕೊಳ್ಳುತ್ತಿದೆ. ಟಾಸ್ಕ್, ಹರಟೆ, ಜಗಳ, ಕಾಮಿಡಿ ಹೀಗೆ ಎಲ್ಲ ರೀತಿಯಲ್ಲಿ ಮನರಂಜಿಸಲು ವಾಹಿನಿ ತಯಾರಿ ನಡೆಸಿದೆ. ಆದರೆ ಯಾವೆಲ್ಲ ಬದಲಾವಣೆ ಇರಲಿದೆ, ಸ್ಪರ್ಧಿಗಳಲ್ಲಿ ಕಿಕ್ ಹೇಗೆ ತುಂಬುಲಿದೆ, ಈ ಹಿಂದಿಗಿಂತ ವಿಭಿನ್ನವಾಗಿ ಯಾವ ರೀತಿ ಮಸಾಲೆ ಬೆರೆಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕೊರೊನಾ ಹಿನ್ನೆಲೆ ನೆಚ್ಚಿನ ರಿಯಾಲಿಟಿ ಶೋ ಅರ್ಧಕ್ಕೆ ನಿಂತಿತ್ತು. ಇದರಿಂದಾಗಿ ವೀಕ್ಷಕರಲ್ಲಿ ಭಾರೀ ಬೇಸರ ಮನೆ ಮಾಡಿತ್ತು. ಬಿಗ್ ಮನೆಯಿಂದ ಹೊರ ಹೋಗಲು ಸ್ಪರ್ಧಿಗಳಿಗೆ ಸಹ ಅಷ್ಟೇ ಬೇಸರವಾಗಿತ್ತು. ಇದೀಗ ಮತ್ತೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿರುವುದಕ್ಕೆ ಫುಲ್ ಖುಷಿಯಾಗಿದ್ದಾರೆ. ಈ ಮೂಲಕ ಸ್ಪರ್ಧಿಗಳು ಅರ್ಧವಾಗಿದ್ದ ತಮ್ಮ ಕನಸನ್ನು ಹೊಸ ರೀತಿಯಲ್ಲಿ ಪೂರ್ಣಗೊಳಿಸಿಕೊಳ್ಳಲಿದ್ದಾರೆ. ಆದರೆ ಯಾವ ರೀತಿ ರಂಜಿಸಲಿದ್ದಾರೆ ಎಂಬುದನ್ನು ನೋಡಲು ಕಾಯಲೇಬೇಕಿದೆ.