ಬೆಂಗಳೂರು: ನಾಳೆಯಿಂದ ಕೆ.ಆರ್.ಮಾರ್ಕೆಟ್ ಹಾಗೂ ಕಲಾಸಿಪಾಳ್ಯ ಮಾರ್ಕೆಟ್ಗಳು ತೆರೆಯಲಿದೆ. ಸುಮಾರು 6 ತಿಂಗಳಿನಿಂದ ಬಂದ್ ಆಗಿದ್ದ ಮಾರುಕಟ್ಟೆಗಳು ತೆರೆಯಲಿದ್ದು, ವ್ಯಾಪಾರಿಗಳ ಸಂತಸಕ್ಕೆ ಕಾರಣವಾಗಿದೆ.
ಮಾರುಕಟ್ಟೆ ತೆರೆಯಲು ಬಿಬಿಎಂಪಿಯಿಂದಲೂ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಹೂ, ಹಣ್ಣು, ತರಕಾರಿ ವ್ಯಾಪಾರಿಗಳು ಸೇರಿ ಎಲ್ಲಾ ರೀತಿಯ ವ್ಯಾಪಾರಕ್ಕೆ ಅನುವು ಮಾಡಿಕೊಡಲಾಗುತ್ತಿದ್ದು, ಹೂ ವ್ಯಾಪಾರ ನಡೆಯುವ ಸ್ಥಳದಲ್ಲಿ ಕೆಲವೊಂದು ನಿರ್ಬಂಧ ಹೇರಲು ಚಿಂತನೆ ನಡೆಸಲಾಗಿದೆ.
Advertisement
Advertisement
ಕೇಂದ್ರ ಸರ್ಕಾರದಿಂದ ದೊಡ್ಡ ಮಾರ್ಕೆಟ್ಗಳಲ್ಲಿ ವ್ಯಾಪಾರಕ್ಕೆ ಅನುಮತಿ ನೀಡಿದ ಹಿನ್ನೆಲೆ ಮಾರುಕಟ್ಟೆ ಮತ್ತೆ ತೆರೆಯಲು ಸಿದ್ಧತೆ ನಡೆಸಲಾಗುತ್ತಿದೆ. ಪ್ರತಿ ದಿನ ಲಕ್ಷಾಂತರ ವ್ಯಾಪಾರ ವಹಿವಾಟು ನಡೆಯುವ ಕೆಆರ್ ಮಾರ್ಕೆಟ್ ಹಾಗೂ ಕಲಾಸಿ ಪಾಳ್ಯ ಮಾರುಕಟ್ಟೆಗಳಲ್ಲಿ ಸ್ವಚ್ಚತೆ ಹಾಗೂ ಸ್ಯಾನಿಟೈಸ್ ಕಾರ್ಯ ಸಂಪೂರ್ಣವನ್ನು ಬಿಬಿಎಂಪಿ ಪೂರ್ಣಗೊಳಿಸುತ್ತಿದೆ.
Advertisement
ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ಅವರು ಕೂಡ ಇಂದು ಎರಡು ಮಾರುಕಟ್ಟೆಗಳಿಗೆ ಭೇಟಿ ನೀಡಿ ಹಲವು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. ಆಯುಕ್ತರಿಗೆ ಬಿಬಿಎಂಪಿ ಹಲವು ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾಥ್ ನೀಡಿದರು. ಈ ವೇಳೆ ಮಾತನಾಡಿದ ಬಿಬಿಎಂಪಿ ಆಯುಕ್ತರು, ಐದು ತಿಂಗಳಿಂದ ಬಂದ್ ಆಗಿದ್ದ ಕೆಆರ್ ಮಾರುಕಟ್ಟೆ ನಾಳೆಯಿಂದ ವ್ಯಾಪಾರ ವಹಿವಾಟು ಶುರು ಮಾಡಲಿವೆ. ಜುಲೈ ತಿಂಗಳಿಂದ ಇಲ್ಲಿಗೆ ಪಾಸಿಟಿವ್ ರೇಟ್ ಶೇ.24 ರಿಂದ ಶೇ.15ಕ್ಕೆ ಇಳಿಕೆಯಾಗಿದೆ. ಜೀವ ಬಹಳ ಮುಖ್ಯ ಆದರೆ ಜೀವನ ಸಹ ಮುಖ್ಯ ಹಾಗಾಗಿ ಪುನರ್ ಆರಂಭ ಆಗಬೇಕಿದೆ. ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕಿದ್ದು, ಮಾರಾಟ ಮಾಡುವ ವ್ಯಾಪಾರಿಗಳು ಹಾಗೂ ಗ್ರಾಹಕರು ಮಾಸ್ಕ್ ಕಡ್ಡಾಯವಾಗಿರುತ್ತೆ ಎಂದರು.
Advertisement
ಪ್ರತಿ ಅಂಗಡಿಯವರು ಪ್ರತ್ಯೇಕವಾಗಿ ಸ್ಯಾನಿಟೈಸರ್ ಹೊಂದಿರಬೇಕು. ಇಂದು ಮಧ್ಯರಾತ್ರಿಯಿಂದನೇ ಕೆಆರ್ ಮಾರುಕಟ್ಟೆ ವ್ಯಾಪಾರಕ್ಕೆ ಅನುವು ಮಾಡಿಕೊಡಲಾಗಿದೆ. ಅಂಗಡಿಗಳನ್ನು ಕ್ಲೀನ್ ಮಾಡಿಕೊಳ್ಳುವ ಅಗತ್ಯ ಇದ್ದು, ಈಗಾಗಲೇ ಅಂಗಡಿ ತೆರೆಯಲು ಅವಕಾಶ ಕೇಳಿದ್ದಾರೆ. ಸ್ಮಾಟ್ ಸಿಟಿ ಯೋಜನೆಯಡಿಯಲ್ಲಿ ಹಲವು ಕಾಮಗಾರಿಗಳನ್ನು ಕೈಗೊಂಡಿದ್ದು ಎಲ್ಲವೂ ಕೊನೆಯ ಹಂತದಲ್ಲಿವೆ ಎಂದರು.