ಚಿಕ್ಕಮಗಳೂರು: ಜಿಲ್ಲೆಯಲ್ಲಿ ನಾಲ್ಕು ಪೊಲೀಸರಿಗೆ ಕೊರೊನಾ ಸೋಂಕು ತಗುಲಿರೋದು ಧೃಡವಾಗಿದೆ. ಪರಿಣಾಮ ನಲವತ್ತಕ್ಕೂ ಹೆಚ್ಚು ಪೊಲೀಸರಿಗೆ ಕೊರೊನಾ ಆತಂಕ ಹೆಚ್ಚಾಗಿದೆ.
ಈಗಾಗಲೇ ಕಾಫಿನಾಡಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಆರು ತಿಂಗಳಿಂದ ಜೈಲಿನಲ್ಲಿದ್ದ ಕೈದಿಗೂ ಕೊರೊನಾ ತಗುಲಿದ್ದು, ಆತನಿಗೆ ಸೋಂಕು ಹೇಗೆ ಬಂತು ಎಂದು ಹುಡುಕಾಡುವಷ್ಟರಲ್ಲಿಯೇ ಜಿಲ್ಲೆಯ ನಾಲ್ವರು ಪೊಲೀಸರಿಗೆ ಕೋವಿಡ್-19 ತಗುಲಿದೆ. ಇದೀಗ ಜಿಲ್ಲಾಡಳಿತತ ಜೊತೆಗೆ ಇತರೆ ಪೊಲೀಸರಿಗೆ ಕೊರೊನಾ ಢವ ಢವ ಶುರುವಾಗಿದೆ.
Advertisement
Advertisement
ಸೋಂಕಿತ ನಾಲ್ವರು ಪೊಲೀಸರು ಜೂ.17 ರಂದು ತರೀಕೆರೆ ಸರ್ಕಾರಿ ಆಸ್ಪತ್ತೆಯಲ್ಲಿ ಕೊರೊನಾ ಸಾಮುದಾಯಿಕ ಪರೀಕ್ಷೆಗೆ ಒಳಗಾಗಿ ಗಂಟಲ ದ್ರವ ನೀಡಿದ್ದರು. ಬಳಿಕ ಜೂ.17 ಹಾಗೂ 18 ರಂದು ಕೆಲಸಕ್ಕೆ ಹಾಜರಾಗಿ, ಮನೆಗೆ ಹೋಗಿದ್ದರು. ಸ್ನೇಹಿತರ ಜೊತೆ ಸೇರಿದ್ದರು. ಅಷ್ಟೆ ಅಲ್ಲದೆ ಜೂ.19 ರಂದು ತರೀಕೆರೆ ಡಿ.ವೈ.ಎಸ್.ಪಿ. ವ್ಯಾಪ್ತಿಯ ಸುಮಾರು 10ಕ್ಕೂ ಹೆಚ್ವು ಪೊಲೀಸ್ ಠಾಣೆಯ 40ಕ್ಕೂ ಹೆಚ್ವು ಪೊಲೀಸ್ ಸಿಬ್ಬಂದಿ, ಅಧಿಕಾರಿಗಳ ಜೊತೆ ಕ್ರೈಂ ಮೀಟಿಂಗ್ ಮಾಡಿದ್ದರು.
Advertisement
Advertisement
ಸಭೆಯಲ್ಲಿ ಪಾಸಿಟಿವ್ ಬಂದಿರೋ ಪೊಲೀಸರು ಸಹ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ. ಸಭೆಯಲ್ಲಿ ಭಾಗಿಯಾಗದ ಬಳಿಕ ಎಲ್ಲ ಪೊಲೀಸರು ತಮ್ಮ ತಮ್ಮ ಠಾಣೆಗಳಿಗೆ ತೆರಳಿ ಕೆಲಸಕ್ಕೆ ಹಾಜರಾಗಿದ್ದಾರೆ. ಈಗ ಈ ನಾಲ್ಕು ಪೊಲೀಸರ ಪಾಸಿಟಿವ್ ಕೇಸ್ ಸುಮಾರು ಹತ್ತು ಠಾಣೆಯ ನಲವತ್ತಕ್ಕೂ ಹೆಚ್ವು ಪೊಲೀಸರಿಗೆ ಭಯ ಹುಟ್ಟಿಸಿದೆ.