ಮಡಿಕೇರಿ: ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ್ ಅಚಾರ್ ಪುತ್ರಿಯರಿಬ್ಬರು ಹಿಂದೂ ಧರ್ಮವನ್ನು ತೊರೆದು ಅನ್ಯಧರ್ಮಕ್ಕೆ ಮತಾಂತರಗೊಂಡಿರುವುದು ರಾಜ್ಯ ಸರ್ಕಾರದ ಪರಿಹಾರದ ಹಣ ಪಡೆಯಲು ಇದೀಗ ಅಡ್ಡಿಯಾಗಿದೆ.
ಅಗಸ್ಟ್ 15 ರಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಇಬ್ಬರು ಪುತ್ರಿಯರಿಗೆ ತಲಾ 2.50 ಲಕ್ಷ ರೂ ನಂತೆ ಪರಿಹಾರ ಹಣ ನೀಡಿದ್ದರು. ಅಗಸ್ಟ್ 5 ರಂದು ಬ್ರಹ್ಮಗಿರಿ ಬೆಟ್ಟದ ಸಾಲಿನ ಗಜಗಿರಿ ಬೆಟ್ಟ ಕುಸಿದು ನಾರಾಯಣ ಅಚಾರ್, ಶಾಂತ ಅಚಾರ್, ಆನಂದ ತೀರ್ಥ ಸ್ವಾಮಿಜಿ, ರವಿ ಕಿರಣ್ ಮತ್ತು ಶ್ರೀನಿವಾಸ್ ಅದರು ಭೂ ಸಮಾಧಿಯಾಗಿದ್ದರು. ಈ ಪೈಕಿ ಶಾಂತ ಅಚಾರ್ ಮತ್ತು ಶ್ರೀನಿವಾಸ್ ಭಟ್ ಅವರ ಮೃತ ದೇಹಗಳು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.
Advertisement
Advertisement
ಆಸ್ಟ್ರೇಲಿಯಾ, ನ್ಯೂಜಿಲೆಂಡ್ ದೇಶದಲ್ಲಿ ನೆಲೆಸಿರುವ ನಾರಾಯಣ್ ಅಚಾರ್ ಮಕ್ಕಳು ವಿದೇಶದಿಂದ ಮರಳಿ ಬಂದ ಮೇಲೆ ತಮ್ಮ ಪಾಲಕರು ನಾಪತ್ತೆಯಾಗಿರುವ ಬಗ್ಗೆ ಭಾಗಮಂಡಲ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದರು. ಅದಕ್ಕೂ ಮೊದಲು ನಾರಾಯಣ್ ಅಚಾರ್ ಸಹೋದರಿಯ ಸುಶೀಲಾ ಅವರು ನಾಪತ್ತೆ ಅಗಿರುವ ಬಗ್ಗೆ ದೂರು ದಾಖಲು ಮಾಡಿದ್ರು.
Advertisement
Advertisement
ದೂರು ನೀಡುವ ಸಂದರ್ಭ ಪುತ್ರಿಯರು ಶಾರದ ಅಚಾರ್ ಮತ್ತು ನಮಿತಾ ಅಚಾರ್ ಎಂದು ತಮ್ಮ ಹೆಸರು ಉಲ್ಲೇಖ ಮಾಡಿದ್ರು. ಅದರ ಆಧಾರದ ಮೇಲೆ ರಾಜ್ಯ ಸರ್ಕಾರ ಪರಿಹಾರ ಹಣವನ್ನು ನಮಿತಾ ಶಾರದಾ ಅಚಾರ್ ಎಂದು ಹೆಸರು ಉಲ್ಲೇಖ ಮಾಡಿ ಹಂಚಿಕೆ ಮಾಡಿದ್ರು. ಹಣ ಹಂಚಿಕೆ ಮಾಡುವ ಸಂದರ್ಭ ಆನಂದ ತೀರ್ಥ ಸ್ವಾಮೀಜಿಯರ ಹಣವು ನಮಗೆ ಬರಬೇಕು ಎಂದು ಹೇಳಿದ್ರು.
ಇದೀಗ ಪರಿಹಾರದ ಚೆಕ್ ಅನ್ನು ಭಾಗಮಂಡಲದ ನಾಡ ಕಚೇರಿಗೆ ನಾರಾಯಣ್ ಅಚಾರ್ ಮಕ್ಕಳು ಚೆಕ್ ವಾಪಸ್ಸು ಮಾಡಿದ್ದಾರೆ. ನಮ್ಮ ಇಬ್ಬರ ಹೆಸರು ಬದಲು ಮಾಡಬೇಕು. ಶೆನೋನ್ ಫರ್ನಾಂಡೀಸ್ (ಶಾರದಾ ಅಚರ್), ನಮಿತಾ ನಜೇರತ್ ಎಂಬ ಹೆಸರಿಗೆ ಚೆಕ್ ನೀಡಬೇಕು ಎಂದು ಕೊರಿದ್ದಾರೆ. ಈ ಹಿನ್ನೆಲೆಯಲ್ಲಿ ಮಡಿಕೇರಿ ತಹಶೀಲ್ದಾರ್ ಮಹೇಶ್ ಚೆಕ್ ತಡೆಹಿಡಿದಿದ್ದಾರೆ. ಹೆಸರು ಬದಲಾವಣೆ ಮಾಡಿಕೊಂಡು ಇರುವುದಕ್ಕೆ ಸೂಕ್ತವಾದ ದಾಖಲೆಗಳನ್ನು ನೀಡಿ ಪರಿಹಾರದ ಹಣ ಪಡೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ.