ಮಡಿಕೇರಿ: ನಾನು ಸಚಿವ ಸ್ಥಾನಕ್ಕಾಗಿ ಎಲ್ಲೂ ಹೋಗಲ್ಲ ಹೈಕಮಾಂಡ್ ಮೇಲೆ ನನಗೆ ವಿಶ್ವಾಸವಿದೆ ಕೇಂದ್ರದ ನಾಯಕರು ಜಿಲ್ಲಾವಾರು ಸಾಮಾಜಿಕ ನ್ಯಾಯವನ್ನು ಈ ಬಾರೀ ಒದಗಿಸಲಿದ್ದಾರೆ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Advertisement
ಸಚಿವ ಸ್ಥಾನಕ್ಕಾಗಿ ರಾಜ್ಯದ ಕೆಲ ನಾಯಕರು ಲಾಬಿ ನಡೆಸುತ್ತಿದ್ದರೆ, ಇತ್ತ ಕೊಡಗಿನ ಶಾಸಕ ಅಪ್ಪಚ್ಚು ರಂಜನ್ ಜಿಲ್ಲಾ ಕೇಂದ್ರದಲ್ಲಿಯೇ ಇದ್ದಾರೆ. ಸದ್ಯ ಮಡಿಕೇರಿಯಲ್ಲಿ ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಕೇಂದ್ರ ನಾಯಕರು ಮೂಲ ಬಿಜೆಪಿಗರನ್ನು ಈ ಬಾರೀ ಗುರುತಿಸಲಿದ್ದಾರೆ. ಜಿಲ್ಲೆಯಲ್ಲಿ ಪ್ರವಾಹದ ಆತಂಕ ಇದೆ. ಜೊತೆಗೆ ಕೋವಿಡ್ ಸೋಂಕು ಹೆಚ್ಚುತ್ತಿದೆ. ಇದನ್ನು ಜಿಲ್ಲೆಯಲ್ಲಿ ನಿಯಂತ್ರಿಸಬೇಕಾಗಿದೆ. ಮೊದಲು ಜನಪ್ರತಿನಿಧಿಗಳಾಗಿ ಜನರ ಸಮಸ್ಯೆ ಅರ್ಥ ಮಾಡಿಕೊಳ್ಳಬೇಕು. ಹೀಗಾಗಿ ನಾನು ಜಿಲ್ಲೆಯಲ್ಲೇ ಇದ್ದೇನೆ ಎಂದು ಹೇಳಿದರು.
Advertisement
Advertisement
ನಾನು ಹಿಂದೆ ಯುವಜನ ಮತ್ತು ಕ್ರೀಡಾ ಸಚಿವನಾಗಿದ್ದಾಗ ಸಾಕಷ್ಟು ಕೆಲಸ ಮಾಡಿದ್ದೇನೆ. ಕ್ರೀಡಾ ಇಲಾಖೆಗೆ 49 ಸಾವಿರ ಕೋಟಿ ರೂ. ಆಸ್ತಿ ಉಳಿಸುವ ಕೆಲಸ ಮಾಡಿದ್ದೇನೆ. ಇಂದಿಗೂ ರಾಜ್ಯಕ್ಕೆ ಒಂದು ಕ್ರೀಡಾ ನೀತಿ ಬೇಕಾಗಿದೆ. ಕ್ರೀಡಾ ವಿಶ್ವವಿದ್ಯಾನಿಲಯ ಬೇಕಾಗಿದೆ ಎಂದು ಶಾಸಕ ಅಪ್ಪಚ್ಚು ರಂಜನ್ ತಿಳಿಸಿದರು. ಇದನ್ನೂ ಓದಿ: ಮೃತ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ನೆರವು ನೀಡಿದ ಬಿಎಸ್ವೈ
Advertisement