ಬೆಂಗಳೂರು: ನಾನು ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಪಕ್ಷ ಕೊಟ್ಟಂತಹ ಕೆಲಸ ಮಾಡುತ್ತೇನೆ. ಈ ಹಿಂದೆ ಪಕ್ಷ ಸಂಘಟನೆಗೆ ರಾಜ್ಯಾದಾದ್ಯಂತ ಪ್ರವಾಸ ಮಾಡುವ ಕೆಲಸ ಮಾಡುತ್ತಿದ್ದೆ, ಈಗಲೂ ಅದನ್ನೇ ಮುಂದುವರಿಸುತ್ತೇನೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಬಸವರಾಜ ಬೊಮ್ಮಯಿ ಮಂತ್ರಿ ಮಂಡಲದಲ್ಲಿ ಯಾರು ಇರಬೇಕು ಅನ್ನೋದನ್ನ ರಾಷ್ಟ್ರೀಯ ನಾಯಕರ ಜೊತೆ ಚರ್ಚೆ ಮಾಡಿ ಅವರೇ ತೀರ್ಮಾನ ತೆಗೆದುಕೊಳ್ಳುತ್ತಾರೆ.ಬೊಮ್ಮಯಿಯವರು ತಮ್ಮ ಸಚಿವ ಸಂಪುಟದಲ್ಲಿ ಅತಿ ಹೆಚ್ಚು ಯುವಕರಿಗೆ ಆದ್ಯತೆ ಕೊಡ್ತಾರೆ ಅನ್ನೋ ವಿಶ್ವಾಸ ಇದೆ. ವಲಸಿಗ ಸಚಿವ ಸ್ಥಾನ ವಿಚಾರವನ್ನು ರಾಜ್ಯಾಧ್ಯಕ್ಷರು ಮತ್ತು ಮುಖ್ಯಮಂತ್ರಿಗಳು ತೀರ್ಮಾನ ಮಾಡ್ತಾರೆ. ಬೊಮ್ಮಾಯಿ ಸರ್ಕಾರದಲ್ಲಿ ಯಡಿಯೂರಪ್ಪ ಸ್ಥಾನಮಾನ ಏನು ಪ್ರಶ್ನೆಗೆ ಉತ್ತರ ನೀಡದ ವಿಜಯೇಂದ್ರ, ಯಡಿಯೂರಪ್ಪರನ್ನೆ ಕೇಳಿ ಎಂದು ತೆರಳಿದರು.
Advertisement
Advertisement
ರಾಜ್ಯದಲ್ಲಿ ನೂತನ ಮುಖ್ಯಮಂತ್ರಿ ಬೊಮ್ಮಾಯಿ ಪದಗ್ರಹಣ ಬಳಿಕ ಸಚಿವ ಸಂಪುಟದ ಸರ್ಕಸ್ ಆರಂಭವಾಗಿದೆ. ಸಿಎಂ ಪದಗ್ರಹಣ ಬಳಿಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮತ್ತು ನಳಿನ್ ಕುಮಾರ್ ಕಟೀಲ್ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಕೆಲ ಹೊತ್ತು ವಿದ್ಯಾಮಾನಗಳ ಕುರಿತು ಚರ್ಚೆ ನಡೆಸಿದರು. ಈ ವೇಳೆ ಸಚಿವಕಾಂಕ್ಷಿ ಶಾಸಕರಾದ ರೇಣುಕಾಚಾರ್ಯ, ತಿಪ್ಪಾರೆಡ್ಡಿ, ರಾಜೀವ್, ಮಾಡಲ್ ವಿರೂಪಾಕ್ಷಪ್ಪ ಸೇರಿದಂತೆ ಕೆಲ ಶಾಸಕರು ಉಭಯ ನಾಯಕರನ್ನ ಭೇಟಿ ಮಾಡಿದರು. ಇದೇ ವೇಳೆ ವಿಜಯೇಂದ್ರ ಮತ್ತು ಶಾಸಕ ಪ್ರೀತಂ ಗೌಡ ಸಹ ಜೊತೆಯಾಗಿ ಉಭಯ ನಾಯಕರನ್ನು ಭೇಟಿ ಮಾಡಿದ್ದಾರೆ. ಇದನ್ನೂ ಓದಿ: 2023ಕ್ಕೆ ವಿಜಯೇಂದ್ರರನ್ನ ಸಿಎಂ ಮಾಡಲು ಬೊಮ್ಮಾಯಿ ಆಯ್ಕೆ: ಆನಂದ್ ಆಸ್ನೋಟಿಕರ್