ಧಾರವಾಡ: ನಾನು ರಾಜಕೀಯದ ಬಗ್ಗೆ ಏನೂ ಮಾತನಾಡಲ್ಲ. ಏನೇ ಇದ್ದರೂ ನಮ್ಮ ಪಕ್ಷದ ನಾಲ್ಕು ಗೊಡೆಗಳ ಮಧ್ಯೆ ಮಾತಾಡುತ್ತೇನೆ ಎಂದು ಶಾಸಕ ಅರವಿಂದ್ ಬೆಲ್ಲದ್ ಹೇಳಿದ್ದಾರೆ.
ಜೈಲಿನಿಂದ ಕೈದಿಯೊಬ್ಬ ಕರೆ ಮಾಡಿರುವ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಯುವರಾಜ್ ಎನ್ನುವವನ ಬಗ್ಗೆ ನಾನು ಹೇಳುವುದೆಲ್ಲ ಹೇಳಿದ್ದೇನೆ, ಉಳಿದದ್ದೆಲ್ಲವನ್ನು ಪೊಲೀಸರು ತನಿಖೆ ಮಾಡ್ತಾರೆ ಎಂದಿದ್ದಾರೆ.
Advertisement
Advertisement
ಸುತ್ತೂರು ಮಠಕ್ಕೆ ನಾನು ಸುತ್ತೂರು ಗುರುಗಳ ತಾಯಿ ಲಿಂಗೈಕ್ಯ ಆಗಿದ್ದಕ್ಕೆ ಭೇಟಿ ಮಾಡಿದ್ದು, ಲಿಂಗೈಕ್ಯ ಆದ ಸಂದರ್ಭದಲ್ಲಿ ನನಗೆ ಅಲ್ಲಿಗೆ ಹೋಗುವುದಕ್ಕೆ ಆಗಿರಲಿಲ್ಲ. ಬೆಂಗಳೂರಿನಿಂದ ಬರುವಾಗ ಗುರುಗಳಿಗೆ ಹಾಗೂ ಉಳಿದವರಿಗೆ ಭೇಟಿ ಮಾಡಿ ಮಾತಾಡಿ ಬಂದಿದ್ದೆನೆ ಎಂದು ಹೇಳಿದರು. ಇದನ್ನೂ ಓದಿ: ನನ್ನ ಫೋನ್ ಕದ್ದಾಲಿಕೆಯಾಗಿದೆ, ಜೈಲಿನಿಂದ ಕಾಲ್ ಬರುತ್ತೆ – ಬೆಲ್ಲದ್
Advertisement
Advertisement
ಶಾಸಕ ರೇಣುಕಾಚಾರ್ಯ ಅವರು ಪದೇ ಪದೇ ತಮ್ಮ ಮೇಲೆ ಆರೋಪ ಮಾಡುತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಶಾಸಕರು, ಎಲ್ಲ ಪ್ರಶ್ನೆಗೂ ನೋ ಕಾಮೆಂಟ್ಸ್ ಎಂದರು. ಇದನ್ನೂ ಓದಿ: ಬೆಲ್ಲದ್ ಫೋನ್ ಕದ್ದಾಲಿಕೆ ಪ್ರಕರಣ ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ತನಿಖೆ ಆಗಲಿ: ಸಿದ್ದರಾಮಯ್ಯ
ಬೆಲ್ಲದ್ ಆರೋಪವೇನು..?
ರಾಜ್ಯ ಬಿಜೆಪಿಯಲ್ಲಿ ತೀವ್ರ ಬೆಳವಣಿಗೆಯ ನಡುವೆಯೇ ಶಾಸಕ ಅರವಿಂದ್ ಬೆಲ್ಲದ್ ಅವರು ತಮ್ಮ ಫೋನ್ ಕದ್ದಾಲಿಕೆ ಮಾಡಲಾಗಿದೆ ಎಂಬ ಗಂಭೀರ ಆರೋಪವೊಂದನ್ನು ಮಾಡಿದ್ದರು. ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬೆಳವಣಿಗೆ ಆಗಿದೆ. ಇದರ ಬಗ್ಗೆ ನನಗೆ ಸಾಕಷ್ಟು ಕರೆ ಬಂದಿದೆ. ಕೆಲವು ದಿನದ ಹಿಂದೆ ಒಬ್ಬರು ಕಾಲ್ ಮಾಡಿ ನಾನು ಸ್ವಾಮಿ ಅಂದ್ರು, ಯಾವ ಸ್ವಾಮೀಜಿ ಅಂದರೆ ಯುವ ರಾಜಸ್ವಾಮೀಜಿ ಅಂದರು. ಬೇರೆ ನಂಬರ್ ನಿಂದ ಮತ್ತೆ ಕಾಲ್ ಮಾಡಿದರು ಎಂದು ತಿಳಿಸಿದ್ದರು.