ಬಿಗ್ ಬಾಸ್ ಕನ್ನಡ ಸೀಸನ್ 7ರ ಸ್ಪರ್ಧಿ ಆಗಿರುವ ನಟಿ ಚಂದನಾ ಅನಂತಕೃಷ್ಣ ಅವರು ಬಿಗ್ಬಾಸ್ ಮಿನಿ ಸೀಸನ್ಗೆ ಎಂಟ್ರಿಕೊಟ್ಟಿದ್ದಾರೆ. ಈ ವೇಳೆ ಅವರು ತಮ್ಮ ಹಳೆಯ ನೆನೆಪುಗಳನ್ನು ಇಟ್ಟುಕೊಂಡು ಅವರ ಜೊತೆಗೆ ಇರುವ ಸ್ಪರ್ಧಿಗಳಿಗೆ ಕೆಲವು ಸಲಹೆಯನ್ನು ಚಂದನಾ ನೀಡಿದ್ದಾರೆ.
Advertisement
ಬಿಗ್ಬಾಸ್ ಕನ್ನಡ ಸೀಸನ್ 7 ಸ್ಪರ್ಧಿ ಚಂದನಾ ಅನಂತಕೃಷ್ಣ ಮನೆಗೆ ಎಂಟ್ರಿಕೊಡುತ್ತಿದ್ದಂತೆ ಅಕುಲ್ ಬಾಲಾಜಿ ಅವರು ಸ್ವಾಗತಿಸಿದ್ದಾರೆ. ಈ ಮನೆಯ ಸ್ಪರ್ಧಿಗಳಿಗೆ ಏನಾದ್ರೂ ಸಲಹೆ ಕೊಡುತ್ತೀರಾ ಇದನ್ನು ಮಾಡಲೇ ಬೇಡಿ, ಮಾಡಬೇಕು ಎಂದು ಹೇಳುತ್ತೀರ. ಯಾಕೆ ಎಂದರೆ ನೀವು 84 ದಿನ ಈ ಹಿಂದೆ ಬಿಗ್ಬಾಸ್ ಮನೆಯಲ್ಲಿ ಇದ್ರಿ ಎಂದು ಕೇಳಿದ್ದಾರೆ. ಆಗ ಚಂದನ ನಾನು ಮಾಡಿದ ತಪ್ಪನ್ನು ನೀವು ಮಾಡಬೇಡಿ ಎಂದು ಬಿಗ್ ಬಾಸ್ ಮಿನಿ ಸೀಸನ್ನಲ್ಲಿ ಸಹ ಸ್ಪರ್ಧಿಗಳಿಗೆ ಕಿವಿಮಾತು ಹೇಳಿದ್ದಾರೆ.
Advertisement
Advertisement
ಆಗ ಸ್ಪರ್ಧಿಗಳು ಏನು ಎಂದು ಕೇಳಿದಾಗ ನಾನು ತುಂಬ ಕಾನ್ಶಿಯಸ್ ಆಗಿ, ಭಯದಿಂದ ಹೊರಗಡೆ ಹೇಗೆ ಕಾಣುತ್ತಿದ್ದೇನೆ ಎನ್ನುವುದು ಮನಸ್ಸಿನಲ್ಲಿ ಇಟ್ಟುಕೊಂಡೆ ಬಿಗ್ಬಾಸ್ ಮನೆಯಲ್ಲಿ 84 ದಿನಗಳ ಕಾಲ ಇದ್ದೆ. ಹೊರಗಡೆ ನಾನು ಹೇಗೆ ಕಾಣಿಸುತ್ತಿದ್ದೆ ಎಂಬ ಭಯದಲ್ಲಿಯೇ ಅಷ್ಟು ದಿನ ಕಳೆದೆ. ಈ ತಪ್ಪನ್ನು ನೀವು ಮಾಡಬೇಡಿ, ಚೆನ್ನಾಗಿ ಆಡಿ ಎಂದು ಚಂದನಾ ಅನಂತಕೃಷ್ಣ ಹೇಳಿದ್ದಾರೆ. ಇದನ್ನೂ ಓದಿ: ಮೇಕೆದಾಟು, ಮಹದಾಯಿ ಯೋಜನೆ ಪ್ರಾರಂಭಿಸುತ್ತೇವೆ: ಸಿಎಂ ಬೊಮ್ಮಾಯಿ
Advertisement
ಕೊರೊನಾ ವೈರಸ್ ಎರಡು ಅಲೆಗಳನ್ನು ಮುಗಿಸಿ ಬಿಗ್ಬಾಸ್ ಮನೆಗೆ ಬಂದಹಾಗೆ ಅನುಭವ ಇದೆ. ನನಗೆ ವಾಶ್ರೂಮ್ ತುಂಬ ಇಷ್ಟ, ಅಲ್ಲಿಯೇ ನಾನು ಹಾಡು ಹೇಳುತ್ತಾ ಜಾಸ್ತಿ ಇರುತ್ತಿದ್ದೆ. ನಾನು ತುಂಬ ಅಡಿಗೆ ಮಾಡಿದ್ದೇನೆ. ಏನೇನು ಸಾಮಗ್ರಿ ನೀಡುತ್ತಿದ್ರೋ ಅದರಲ್ಲಿ ಅಡುಗೆ ಮಾಡುತ್ತಿದ್ದೆವು ಎಂದು ಚಂದನಾ ಅನಂತಕೃಷ್ಣ ಹೇಳುತ್ತಾ ತಾವು ಬಿಗ್ಬಾಸ್ ಮನೆಯಲ್ಲಿ ಕಳೆದ ನೆನಪುಗಳನ್ನು ಮೆಲಕು ಹಾಕಿದ್ದಾರೆ.