ಬೆಂಗಳೂರು: ಮುಖ್ಯಮಂತ್ರಿ ಚರ್ಚೆ ಬಗ್ಗೆ ಮಾಡಬೇಡ ಅಂತ ಸಿದ್ದರಾಮಯ್ಯ ಹೇಳಿದ್ದಾರೆ ಹಾಗಾಗಿ ಮುಂದಿನ ಸಿಎಂ ಹೇಳಿಕೆ ಬಗ್ಗೆ ನಾನು ಈಗ ಏನು ಹೇಳಲ್ಲ ಎಂದು ಶಾಸಕ ಜಮೀರ್ ಅಹಮ್ಮದ್ ಖಾನ್ ಹೇಳಿದ್ದಾರೆ. ಇದನ್ನೂ ಓದಿ: ಮಂಗಳ ಮುಖಿಯರಿಂದ ಗ್ರಾ.ಪಂ ಸದಸ್ಯನ ಮೇಲೆ ಹಲ್ಲೆ
ಸಿದ್ದರಾಮಯ್ಯ ನಿವಾಸದ ಬಳಿ ಮಾತನಾಡಿದ ಅವರು, ನಾನು ಓಪನ್ ಹಾರ್ಟೆಡ್ ಏನೇ ಹೇಳಿದರು ಓಪನ್ ಆಗಿ ಹೇಳುತ್ತೇನೆ. ಆದರೆ ನಮ್ಮ ನಾಯಕ ಸಿದ್ದರಾಮಯ್ಯ ಫುಲ್ ಸ್ಟಾಪ್ ಹಾಕಿ ಎಂದಿದ್ದಾರೆ ಹಾಗಾಗಿ ಹೇಳಿಕೆಗೆ ಫುಲ್ ಸ್ಟಾಪ್ ಹಾಕಿದ್ದೀನಿ.ನನ್ನ ಹೇಳಿಕೆ ಟೋಟಲಿ ಸ್ಟಾಪ್ ಎಂದಿದ್ದಾರೆ.
Advertisement
Advertisement
ನಮ್ಮದು ಹೈ ಕಮಾಂಡ್ ಪಕ್ಷ ನಮ್ಮ ಅಭಿಪ್ರಾಯ ಹಿಂದೆ ಹೇಳಿದ್ದೀನಿ. ಸಿದ್ದರಾಮಯ್ಯ ಹೇಳಿಕೆ ಬೇಡ ಆಂದಿದಾರೆ ಹಾಗಾಗಿ ಟೋಟಲ್ ಕಂಟ್ರೋಲ್ ಸಿದ್ದರಾಮಯ್ಯ ಸರ್ಕಾರದ ಕೆಲಸವನ್ನ ಜನ ನೆನೆಸಿಕೊಳ್ತಾರೆ. ಕಾಂಗ್ರೆಸ್ ಸರ್ಕಾರ ಬೇಕು ಎಂದು ಜನ ಹೇಳುತ್ತಿದ್ದಾರೆ. ನಾನಲ್ಲ, ನಮ್ಮಲ್ಲಿ ಸಾಕಷ್ಟು ಜನ ಅರ್ಹರಿದ್ದಾರೆ ಯಾರು ಸಿಎಂ ಆಗಬೇಕು ಅನ್ನೋದನ್ನ ಹೈ ಕಮಾಂಡ್ ತೀರ್ಮಾನ ಮಾಡುತ್ತಾರೆ ಎಂದು ನುಡಿದಿದ್ದಾರೆ.
Advertisement
Advertisement
ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಜನರ ಅಭಿಪ್ರಾಯ ಯಾರ ಪರವಾಗಿ ಇದೆ ಅವರು ಆಗುತ್ತಾರೆ. ನಮಗೆ ಮಾತನಾಡಬೇಡಿ ಎಂದು ನಮ್ಮ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ನಾನು ಆ ವಿಚಾರದ ಬಗ್ಗೆ ಮಾತನಾಡಲ್ಲ. ನಮ್ಮ ನಾಯಕರು ನನಗೆ ಹೇಳಿದ್ದಾರೆ ಎಂದಿದ್ದಾರೆ.
ಸಿಎಂ ಸ್ಥಾನದ ಬಗ್ಗೆ ಹಲವರು ಹೇಳುತ್ತಿದ್ದಾರೆ. ಲಿಂಗಾಯತರಲ್ಲಿ ನಮಗೆ ಕೊಡಿ ಅಂತ ಎಂ.ಬಿ.ಪಾಟೀಲ್ ಹೇಳ್ತಾರೆ. ಅಲ್ಪಸಂಖ್ಯಾತರಲ್ಲಿ ಸಿ.ಎಂ.ಇಬ್ರಾಹಿಂ ಅಂತಾರೆ. ತನ್ವೀರ್ ಸೇಟ್ ನಾನು ಮುಖ್ಯಮಂತ್ರಿ ಆಕಾಂಕ್ಷಿ ಅಂದಿದ್ದಾರೆ. ಮುಂದಿನ ಸಿಎಂ ಹೇಳಿಕೆ ಬಗ್ಗೆ ಟೋಟಲ್ ಕಂಟ್ರೊಲ್ ಅಂತ ಸಿದ್ದರಾಮಯ್ಯ ಹೇಳಿದ್ದಾರೆ ಹಾಗಾಗಿ ಮಾತನಾಡಲ್ಲ ಕಾಂಗ್ರೆಸ್ನ ಮುಂದಿನ ಮುಖ್ಯಮಂತ್ರಿಯನ್ನ ನಮ್ಮ ಹೈಕಮಾಂಡ್ ನಿರ್ಧರಿಸಲಿದೆ ಎಂದು ತಿಳಿಸಿದ್ದಾರೆ.