– ಲಾಕ್ಡೌನ್ ಘೋಷಣೆಯಿಂದ ಸೋಕು ಹರಡುವ ವೇಗ ಇಳಿಕೆ
– ಐಸಿಯು, ವೆಂಟಿಲೇಟರ್ ಕೊರತೆ ಕಾಡಬಹುದು
ನವದೆಹಲಿ: ನವೆಂಬರ್ ವೇಳೆಗೆ ಭಾರತ ಕೋವಿಡ್ 19 ಪ್ರಕರಣಗಳ ಸಂಖ್ಯೆ ಗರಿಷ್ಠ ಮಟ್ಟ ತಲುಪುವ ಸಾಧ್ಯತೆಯಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ಹೇಳಿದೆ.
ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಂಶೋಧಕರ ತಂಡವನ್ನು ರಚಿಸಿತ್ತು. ಐಸಿಎಂಆರ್ ರಚನೆ ಮಾಡಿರುವ ‘ಆಪರೇಷನ್ಸ್ ರಿಸರ್ಚ್ ಗ್ರೂಪ್’ ನಡೆಸಿದ ಸಾಂಖ್ಯಿಕ ಅಧ್ಯಯನ ತಿಳಿಸಿದೆ.
Advertisement
Advertisement
ವರದಿಯಲ್ಲಿ ಏನಿದೆ?
ಸದ್ಯ ಈಗ 10 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪ್ರತಿದಿನ ದಾಖಲಾಗುತ್ತಿದೆ. ಮುಂದೆ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. ಲಾಕ್ಡೌನ್ ಘೋಷಣೆಯಿಂದಾಗಿ ಸೋಂಕು ಹರಡುವ ವೇಗ ಇಳಿಕೆಯಾಗಿದೆ.
Advertisement
#COVID19India Update#COVID19 Recovery rate crosses 50%, more than half of infected patients have been cured????
Maharashtra, Tamil Nadu, Delhi & Gujarat together account for more than 2.09 lakh of ~ 3.21 lakh people infected so far & nearly two-thirds of 1.49 lakh active cases https://t.co/98JhY52XxU pic.twitter.com/d48lFQTzKY
— PIB in Maharashtra ???????? (@PIBMumbai) June 14, 2020
Advertisement
ಭಾರತದಲ್ಲಿ ಜುಲೈ ವೇಳೆಗೆ ಸೋಂಕಿತರ ಸಂಖ್ಯೆ ಗರಿಷ್ಠ ಮಟ್ಟ ತಲುಪಬೇಕಿತ್ತು. ಆದರೆ 8 ವಾರಗಳ ಲಾಕ್ಡೌನ್ ಘೋಷಣೆಯಿಂದಾಗಿ ಸೋಂಕು ಗರಿಷ್ಠ ಮಟ್ಟಕ್ಕೆ ಹೋಗುವುದು 34ರಿಂದ 76 ದಿನಗಳಷ್ಟು ಮುಂದಕ್ಕೆ ಹೋಗಿದೆ. ಮುಂದಕ್ಕೆ ಹೋಗಿರುವ ಕಾರಣ ಅಗತ್ಯ ವೈದ್ಯಕೀಯ ಮೂಲಸೌಕರ್ಯಗಳನ್ನು ಹೆಚ್ಚಿಸಿಕೊಳ್ಳಲು ಸಮಯ ಸಿಕ್ಕಿದಂತಾಗಿದೆ. ಲಾಕ್ಡೌನ್ನಿಂದಾಗಿ ಸೋಂಕಿತರ ಸಂಖ್ಯೆ ಶೇ.69ರಿಂದ ಶೇ.97ರಷ್ಟು ಕಡಿಮೆಯಾಗಿದೆ.
????Total #COVID19 Cases in India (as on June 14, 2020)
▶️46.54% Active cases (149,348)
▶️50.6% Cured/Discharged/Migrated (162,379)
▶️2.86% Deaths (9,195)
Total COVID-19 confirmed cases = Active cases+Cured/Discharged/Migrated+Deaths
Via @MoHFW_INDIA pic.twitter.com/3iw9CLuicN
— #IndiaFightsCorona (@COVIDNewsByMIB) June 14, 2020
ಗರಿಷ್ಠ ಮಟ್ಟ ತಲುಪುವ ಸಂದರ್ಭದಲ್ಲಿ ತೀವ್ರ ನಿಗಾ ಘಟಕ(ಐಸಿಯು), ವೆಂಟಿಲೇಟರ್, ಐಸೋಲೇಷನ್ ಹಾಸಿಗೆಗಳ ಕೊರತೆ ಕಾಡಬಹುದು. ಹೀಗಾಗಿ ಲಸಿಕೆ ಬರುವವರೆಗೂ ಸೋಂಕಿತರ ಪತ್ತೆ, ತಪಾಸಣೆ, ಕ್ವಾರಂಟೈನ್, ಐಸೊಲೇಷನ್ ಮಾಡುತ್ತಲೇ ಇರಬೇಕು ಎಂದು ಎಂದು ತಿಳಿಸಿದೆ.
✅India's #COVID19 recovery rate crosses 50% for the first time; improves to 50.60% as on June 14, 2020.
????Steady improvement in India's COVID-19 recovery rate since #lockdown initiation on March 25, 2020????#IndiaFightsCorona@ICMRDELHI
Via @MoHFW_INDIA pic.twitter.com/fiGYIOtVyh
— #IndiaFightsCorona (@COVIDNewsByMIB) June 14, 2020
17 ಹೈ ರಿಸ್ಕ್ ವರ್ಗಗಳನ್ನ ಸಮೀಕ್ಷೆ ನಡೆಸಿ:
17 ವರ್ಗದ ಜನರನ್ನು ಹೈ ರಿಸ್ಕ್ ಜನರೆಂದು ಐಸಿಎಂಆರ್ ಹೇಳಿದ್ದು ಅವರನ್ನು ತಪಸಾಣೆಗೆ ಒಳಪಡಿಸಿ ಎಂದು ಐಸಿಎಂಆರ್ ರಾಜ್ಯ ಸರ್ಕಾರಗಳಿಗೆ ತಿಳಿಸಿದೆ. ಎಚ್ಐವಿ, ಉಸಿರಾಟ ತೊಂದರೆ, ಕ್ಷಯ, ಡಯಾಲಿಸಿಸ್ ಮಾಡಿಸಿಕೊಳ್ಳುವ ರೋಗಿಗಳು, ಕಂಟೈನ್ಮೆಂಟ್ ವಲಯದಲ್ಲಿರುವ ಪ್ರತಿಯೊಬ್ಬ ವ್ಯಕ್ತಿ, ವೈದ್ಯಕೀಯ ಸಿಬ್ಬಂದಿ, ಭದ್ರತಾ ಸಿಬ್ಬಂದಿ, ಮಾಧ್ಯಮದ ವರದಿಗಾರರು, ಛಾಯಾಗ್ರಾಹಕರು, ಪೊಲೀಸರು, ನಗರದಿಂದ ವಲಸೆ ಬಂದ ಗ್ರಾಮೀಣ ಜನ, ಮಾರುಕಟ್ಟೆಗೆ ಭೇಟಿ ನೀಡುತ್ತಿರುವ ರೈತರು, ವ್ಯಾಪಾರಿಗಳು, ಚಾಲಕರು, ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ, ಬ್ಯಾಂಕ್, ಅಂಚೆ, ದೂರವಾಣಿ ಸಿಬ್ಬಂದಿ, ವಿಮಾನಯಾನ ಸಿಬ್ಬಂದಿ, ವೃದ್ಧಾಶ್ರಮ, ಅನಾಥಶ್ರಮಗಳಲ್ಲಿರುವ ಸಿಬ್ಬಂದಿ, ಜೈಲಿನಲ್ಲಿರುವ ಕೈದಿಗಳನ್ನು ಸಮೀಕ್ಷೆ ನಡೆಸುವಂತೆ ಸೂಚಿಸಿದೆ.
#CoronaVirusUpdates:#COVID19 testing status update:@ICMRDELHI stated that 56,58,614 samples tested so far.
1,51,432 sample tested in 24 hours#StaySafe pic.twitter.com/QA64xxI1ag
— #IndiaFightsCorona (@COVIDNewsByMIB) June 14, 2020
ಸದ್ಯ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಗಿಂದ ಡಿಸ್ಚಾರ್ಜ್ ಆದವರ ಸಂಖ್ಯೆಯೇ ಹೆಚ್ಚಿದೆ. 3,33,012 ಮಂದಿಗೆ ಸೋಂಕು ಬಂದಿದ್ದರೆ 1,69,691 ಮಂದಿ ಗುಣಮುಖರಾಗಿದ್ದಾರೆ. 1,53,762 ಸಕ್ರಿಯ ಪ್ರಕರಣಗಳಿದ್ದು, 9,520 ಮಂದಿ ಮೃತಪಟ್ಟಿದ್ದಾರೆ. ಆತಂಕದ ಸಂಗಂತಿ ಏನೆಂದರೆ ಪ್ರತಿ ದಿನವೂ ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಭಾನುವಾರ ಒಂದೇ ದಿನ 14,718 ಮಂದಿಗೆ ಸೋಂಕು ತಗಲಿದ್ದು, 408 ಮಂದಿ ಮೃತಪಟ್ಟಿದ್ದಾರೆ.
State-wise details of Total Confirmed #COVID19 cases
(till 14 June, 2020, 08:00 AM)
➡️States with 1-500 confirmed cases
➡️States with 501-5500 confirmed cases
➡️States with 5500+ confirmed cases
➡️Total no. of confirmed cases so far
Via @MoHFW_INDIA pic.twitter.com/xjdrhCjd2w
— #IndiaFightsCorona (@COVIDNewsByMIB) June 14, 2020
ಕರ್ನಾಟಕದಲ್ಲಿಒಟ್ಟು 7,000 ಮಂದಿಗೆ ಮಂದಿಗೆ ಸೋಂಕು ಬಂದಿದ್ದರೆ, 3,955 ಮಂದಿ ಗುಣಮುಖರಾಗಿದ್ದಾರೆ. 2,956 ಸಕ್ರಿಯ ಪ್ರಕರಣಗಳಿದ್ದು, 86 ಮಂದಿ ಮೃತಪಟ್ಟಿದ್ದಾರೆ.