ಲಕ್ನೋ: ಬೆಂಗಳೂರು ಗಲಭೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಸಂಬಂಧಿ ನವೀನ್ ತಲೆಗೆ 51 ಲಕ್ಷ ಘೋಷಣೆ ಮಾಡಿದ್ದ ಮುಸ್ಲಿಂ ನಾಯಕನನ್ನು ಮೀರತ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಶಹಜೀಬ್ ರಿಜ್ವಿ ಸಮಾಜವಾದಿ ಪಕ್ಷದ ಮಾಜಿ ಸದಸ್ಯ ಹಾಗೂ ಸಾಮಾಜಿಕ ಕಾರ್ಯಕರ್ತನಾಗಿದ್ದು, ಈತನನ್ನು ಮೀರತ್ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
Advertisement
Advertisement
ಮೀರತ್ ನ ಫಲ್ವಾಡಾ ಪಟ್ಟಣದ ರಸೂಲ್ಪುರ ಗ್ರಾಮದ ನಿವಾಸಿಯಾಗಿರುವ ರಿಜ್ವಿ, ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದನು. ವಿಡಿಯೋದಲ್ಲಿ ಆತ, ಫೇಸ್ಬುಕ್ ನಲ್ಲಿ ಸಮುದಾಯದ ಬಗ್ಗೆ ಬರೆದುಕೊಂಡಿರುವ ನವೀನ್ ತಲೆಯನ್ನು ತಂದವರಿಗೆ 51 ಲಕ್ಷ ಕೊಡುವುದಾಗಿ ಘೋಷಣೆ ಮಾಡಿದ್ದನು. ಈ ವಿಡಿಯೋ ಭಾರೀ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸರು ರಿಜ್ವಿಗಾಗಿ ತೀವ್ರ ಹುಡುಕಾಟ ನಡೆಸಿದ್ದು, ಇದೀಗ ಆತನನ್ನು ಬಂಧಿಸಿದ್ದಾರೆ.
Advertisement
Advertisement
ಕಾಂಗ್ರೆಸ್ ಶಾಸಕರ ಸಂಬಂಧಿಯ ಪೋಸ್ಟ್ ನಿಂದಾಗಿ ಮುಸ್ಲಿಂ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದೆ. ಅದಕ್ಕೆ ಪ್ರತಿಯಾಗಿ ಆತನ ತಲೆ ತಂದವರಿಗೆ 51 ಲಕ್ಷ ಕೊಡುವುದಾಗಿ ಘೋಷಿಸಿದ್ದನು. ಈ ಸಂಬಂಧ ನನ್ನನ್ನು ಬೆಂಬಲಿಸುವವರು ಹಣ ಸಂಗ್ರಹಿಸಿ ಕೊಡಿ ಎಂದು ಕೂಡ ರಿಜ್ವಿ ವಿಡಿಯೋದಲ್ಲಿ ಹೇಳಿದ್ದಾನೆ. ಸದ್ಯ ರಿಜ್ವಿಯನ್ನು ಬಂಧಿಸಿರುವ ಮಾಹಿತಿ ನಿಡಿದ ಮೀರತ್ ನ ಪೊಲೀಸ್ ವರಿಷ್ಠಾಧಿಕಾರಿ, ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 153(ಎ)(ಎರಡು ಗುಂಪುಗಳ ನಡುವೆ ವೈಷಮ್ಯಕ್ಕೆ ಪ್ರಚೋದನೆ) ಹಾಗೂ 505(2) (ಕೋಮು ಸಂಘರ್ಷಕ್ಕೆ ಪ್ರೇರೇಪಣೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
₹51 lakhs declared for beheading Naveen, nephew of Congress MLA from Bengaluru. The announcement was made by "social activist" Shahzeb Rizvi from Uttar Pradesh. He is said to be associated with Samajwadi Party. Interestingly, the Congress continues to maintain absolute silence. pic.twitter.com/YZzAHZxz7A
— Priti Gandhi – प्रीति गांधी (@MrsGandhi) August 13, 2020
ಈ ಹಿಂದೆ ಸಮಾಜವಾದಿ ಪಕ್ಷದ ನಾಯಕನಾಗಿದ್ದ ರಿಜ್ವಿ, ಈಗ ರಾಜಕಾರಣದಿಂದ ದೂರ ಉಳಿದಿದ್ದಾನೆ. ಸಮಾಜವಾದಿ ಪಕ್ಷದ ಅಲ್ಪಸಂಖ್ಯಾತ ಘಟಕದ ಉತ್ತರಪ್ರದೇಶ ರಾಜ್ಯ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದನು. ಪಕ್ಷ ತೊರೆದ ಬಳಿಕ ಆತ ತಾನು ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಂಡಿದ್ದಾನೆ. ಇದನ್ನೂ ಓದಿ: ವಿಡಿಯೋ: ನವೀನ್ ತಲೆ ತಂದವ್ರಿಗೆ 51 ಲಕ್ಷ ಕೊಡ್ತೀನಿ- ಮುಸ್ಲಿಂ ನಾಯಕ ಘೋಷಣೆ
इस बार भी वीडियो बना, पर इस बार इन्होंने नहीं बल्कि पुलिस ने इनका वीडियो बनाया, पुलिस इनसे गाड़ी में चलने को कह रही, पर ये ज़िद किए बैठे हैं कि पैदल ही जाएंगे, गाड़ी में क़तईनहीं जाएंगे। https://t.co/aIgMNSYZZt pic.twitter.com/PTmu0PDJJx
— Dr. Shalabh Mani Tripathi (@shalabhmani) August 14, 2020