ಬೆಂಗಳೂರು: ನವರಸ ನಾಯಕ ಜಗ್ಗೇಶ್ ಅವರು ಸಿನಿರಂಗಕ್ಕೆ ಬಂದು 40 ವರ್ಷಗಳಾಗಿರುವ ಸಂತೋಷವನ್ನು ಟ್ವೀಟ್ ಮಾಡುವ ಮೂಲಕವಾಗಿ ತಿಳಿಸಿದ್ದಾರೆ.
ನಾಯಕ, ನಿರ್ಮಾಪಕ, ರಾಜಕಾರಣಿಯಾಗಿರುವ ಜಗ್ಗೇಶ್ ಅವರು ನವರಸ ನಾಯಕ ಎಂದೇ ಸ್ಯಾಂಡಲ್ವುಡ್ನಲ್ಲಿ ಹೆಸರು ಮಾಡಿದ್ದಾರೆ. ಉತ್ತಮವಾದ ನಟನಾ ಶೈಲಿಯಿಂದ ಅಭಿಮಾನಿಗಳನ್ನು ರಂಜಿಸಲು ಪ್ರಾರಂಭಿಸಿ ಇದೀಗ 4ಂ ವರ್ಷ ಪೂರೈಸಿದ್ದಾರೆ. ತಮ್ಮ ಸಿನಿಮಾ ರಂಗದ ಜರ್ನಿಯನ್ನು ಟ್ವೀಟ್ ಮಡುವ ಮೂಲಕವಾಗಿ ನೆನಪಿಸಿಕೊಂಡು ಹಲವರಿಗೆ ಪ್ರೀತಿಯಿಂದ ಧನ್ಯವಾದಗಳನ್ನು ತಿಳಿಸಿದ್ದಾರೆ.
Advertisement
ಟ್ವೀಟರ್ನಲ್ಲಿ ಏನಿದೆ?
1980 ನವೆಂಬರ್ 17ಕ್ಕೆ ನಿಸಿರಂಗಕ್ಕೆ ಬಂದಿದ್ದೇನೆ. 2020 ನವೆಂಬರ್ 17ಕ್ಕೆ ನನ್ನ ಸಿನಿರಂಗದ ಪ್ರಯಾಣಕ್ಕೆ 40 ವರ್ಷವಾಯಿತ್ತು. ಈ ಬೆಳವಣಿಗೆಗೆ ಪ್ರೋತ್ಸಾಹಿಸಿದ ನಿರ್ದೇಶಕರು ಮತ್ತು ನಿರ್ಮಾಪಕರು ಹಾಗೂ ಭುಜತಟ್ಟಿದ ಅಂದಿ ನನ್ನ ಕಲಾ ಕುಟುಂಬ, ಮಾಧ್ಯಮ, ಕನ್ನಡ ಮನಸ್ಸುಗಳು, ಅಪಮಾನಿಸಿದ ಸ್ನೇಹ ಹಾಗೂ ಗೆಲ್ಲುವೆ ಹೋಗು ಕರಿಯ ಎಂದು ಹರಸಿದ ಅಮ್ಮ, ಜೊತೆಗೆ ನಿಂತ ಪತ್ನಿ ಪರಿಮಳ, ಕೋಮಲ್ ಮತ್ತು ರಾಯರದಯೆಗೆ ಆ ಜನ್ಮ ಋಣಿ ಹರಸಿ ಎಂದು ಟ್ವೀಟ್ ಮಾಡುವ ಮೂಲಕವಾಗಿ ಸಂತೋಷವನ್ನು ಹಂಚಿಕೊಂಡಿದ್ದಾರೆ.
Advertisement
Advertisement
ನಟನಾಗಿ, ಹಾಸ್ಯನಟನಾಗಿ ಕನ್ನಡದ ಬೆಳ್ಳಿತೆರೆಯಲ್ಲಿ ಮಿನುಗಿದ ಜಗ್ಗೇಶ್ ಅದ್ಭುತ ಹಾಸ್ಯ ನಟ ಎಂಬುದರಲ್ಲಿ ಎರಡು ಮಾತಿಲ್ಲ. ತಮ್ಮದೇ ಆದ ಹಾವ-ಭಾವದಿಂದಾಗಿಯೇ ಕನ್ನಡ ಸಿನಿರಂಗದಲ್ಲಿ ಹಾಸ್ಯ ಚಕ್ರವರ್ತಿ ಎಂದು ಅಭಿಮಾನಿಗಳಿಂದ ಬಣ್ಣಿಸಿಕೊಂಡಿಸಿದ್ದಾರೆ. ತುಮಕೂರು ಜಿಲ್ಲೆಯ ತುರುವಕೆರೆ ತಾಲೂಕಿನ ಮಾಯಾಸಂದ್ರದವರಾದ ಜಗ್ಗೇಶ್ ಬಾಲ್ಯದ ನಂತರದ ದಿನಗಳನ್ನ ಬೆಂಗಳೂರಿನಲ್ಲಿಯೇ ಕಳೆದ್ರು. ಶ್ರೀರಾಂಪುರದಲ್ಲಿ ಭವಿಷ್ಯವನ್ನು ಅರಸುತ್ತಾ ನೆಲೆನಿಂತರು.
Advertisement
1980 ನವಂಬರ್ 17ಕ್ಕೆ ಸಿನಿರಂಗಕ್ಕೆ ನಾ ಬಂದು
ಇಂದಿಗೆ 2020 ನವಂಬರ್ 17ಕ್ಕೆ
40ವರ್ಷ.
ಈ ಬೆಳವಣಿಗೆಗೆ ಪ್ರೋತ್ಸಾಹಿಸಿದ
ನಿರ್ದೇಶಕ ನಿರ್ಮಾಪಕ ಭುಜತಟ್ಟಿದ ಅಂದಿನ ನನ್ನ ಕಲಾಕುಟುಂಬ,ಮಾಧ್ಯಮ
ಕನ್ನಡದ ಮನಸ್ಸುಗಳು!
ಅಪಮಾನಿಸಿದ ಸ್ನೇಹಕ್ಕೆ,ಗೆಲ್ಲುವೆ ಹೋಗು ಕರಿಯ ಎಂದ ಹರಸಿದ ಅಮ್ಮ,ಜೊತೆನಿಂತ ಪರಿಮಳ,ಕೋಮಲ್ ರಾಯರದಯೆಗೆ ಆಜನ್ಮ ಋಣಿ!
ಹರಸಿ???? pic.twitter.com/zAK5o2oVYd
— ನವರಸನಾಯಕ ಜಗ್ಗೇಶ್ (@Jaggesh2) November 17, 2020
ಜಗ್ಗೇಶ್ಗೆ ಬಣ್ಣದ ಲೋಕಕ್ಕೆ ಕಾಲಿಡಬೇಕೆಂಬ ಮಹದಾಸೆಯಿತ್ತು. ಈ ಸೆಳೆತವೇ ಜಗ್ಗೇಶ್ ಅವರನ್ನು ಬಣ್ಣದಲೋಕಕ್ಕೆ ಕರೆತಂತ್ತು. ಮೊದಲ ಬಾರಿಗೆ ಅನಂತನಾಗ್ ಮತ್ತು ಲಕ್ಷ್ಮೀ ಅಭಿನಯದ ‘ಇಬ್ಬನಿ ಕರಗಿತು’ ಚಿತ್ರದಲ್ಲಿ ಪುಟ್ಟ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ಜಗ್ಗೇಶ್ ತಮ್ಮ ಸಿನಿಯಾನವನ್ನು ಆರಂಭಿಸಿದರು. 1983ರಲ್ಲಿ ಮೂಡಿಬಂದ ‘ಇಬ್ಬನಿ ಕರಗಿತು’ ಚಿತ್ರ ಸಾಯಿಸುತೆ ಅವರ ಕಾದಂಬರಿಯಾಧಾರಿತ ಸಿನಿಮಾ. ಕೆ.ವಿ. ಲೋಕೇಶ್, ಸುಂದರ್ ಕೃಷ್ಣ ಅರಸ್, ಮುಸುರಿ ಕೃಷ್ಣಮೂರ್ತಿತಿ ಪೋಷಕ ನಟರಾಗಿ ಕಾಣಿಸಿಕೊಂಡರು. ಅಲ್ಲಿಂದ ಆರಂಭವಾದ ಜಗ್ಗೇಶ್ ಸಿನಿಯಾನ ಇದೀಗ 40 ವರ್ಷಗಳನ್ನೇ ಪೂರೈಸಿದೆ. ಸದ್ಯ ನವರಸ ನಾಯಕನಿಗೆ ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆಯೇ ಹರಿದು ಬರುತ್ತಿದೆ.