ಚೆನ್ನೈ: ನೂತನ ವಿವಾಹಿತರರಿಗೆ ಉಡುಗೊರೆಯಾಗಿ ಎಲ್ಪಿಜಿ ಸಿಲಿಂಡರ್ ಮತ್ತು ಪೆಟ್ರೋಲ್ ನೀಡಿದ ಸ್ನೇಹಿತರ ಬಳಗದ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement
ಪ್ರತಿದಿನ ಎಲ್ಪಿಜಿ ಗ್ಯಾಸ್ ಮತ್ತು ಪೆಟ್ರೋಲ್ ದರ ಏರಿಕೆಯ ಪರಿಣಾಮವಾಗಿ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ತಮಿಳುನಾಡಿನ ಚೆನ್ನೈನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ವಧು ವರರ ಸ್ನೇಹಿತರ ತಂಡ ಎಲ್ಪಿಜಿ ಸಿಲಿಂಡರ್ ಮತ್ತು ಒಂದು ಕ್ಯಾನ್ ಪೆಟ್ರೋಲ್ನ್ನು ನೀಡುವ ಮೂಲಕ ವಿಭಿನ್ನ ಉಡುಗೊರೆ ನೀಡಿದ್ದಾರೆ. ಈ ವೀಡಿಯೋ ಇದೀಗ ನೆಟ್ಟಿಗರ ಆಹಾರವಾಗಿದೆ.
Advertisement
Advertisement
ಸ್ನೇಹಿತರ ಬಳಗ ಮದುವೆ ಉಡುಗೊರೆಯಾಗಿ ಗ್ಯಾಸ್ ಮತ್ತು ಪೆಟ್ರೋಲ್ ಗಿಫ್ಟ್ ನೀಡುತ್ತಿದ್ದ ವೀಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಇದು ಯೋಗ್ಯವಾದ ಉಡುಗೊರೆ, ಎಂದು ಹೋಗಲಿದ್ದಾರೆ.
Advertisement
Couple gets Petrol, Gas Cylinder and Onions as a Wedding Gift in Tamilnadu. pic.twitter.com/Wczs2EgQSx
— Shivangi Thakur (@thakur_shivangi) February 18, 2021
ದೇಶದಲ್ಲಿ ಪ್ರತಿದಿನ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿದ್ದು, 100 ಸನಿಹಕ್ಕೆ ಬಂದು ನಿಂತಿದೆ. ಗ್ಯಾಸ್ ಬೆಲೆ 800 ರೂಪಾಯಿ ಆಗಿರುದರಿಂದಾಗಿ ನೂತನ ವಿವಾಹಿತರಿಗೆ ಸ್ನೇಹಿತರು ಮೌಲ್ಯಯುತವಾದ ಉಡುಗೊರೆ ನೀಡಿ ಫೋಟೋ ತೆಗೆಸಿಕೊಂಡಿದ್ದಾರೆ.