ಚಂಡೀಗಢ: ನವಜೋತ್ ಸಿಂಗ್ ಸಿಧು ಅವರು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಸಮಾರಂಭದಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ಕಾರ್ಯಕರ್ತರು ಬರುತ್ತಿದ್ದ, ಬಸ್ಗೆ ಅಪಘಾತವಾಗಿರುವ ಘಟನೆ ನಡೆದಿದೆ.
ಇಂದು ಬೆಳಿಗ್ಗೆ ಜಲಂಧರ್-ಬರ್ನಾಲಾ ರಸ್ತೆಯ ಮೊಗಾದ ಲೋಹರಾ ಚೌಕ್ ನಲ್ಲಿ ಎರಡು ಬಸ್ಸುಗಳು ಡಿಕ್ಕಿ ಹೊಡೆದ ಪರಿಣಾಮ 10 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೂವರು ಕಾಂಗ್ರೆಸ್ ಕಾರ್ಯಕರ್ತರು ಸಾವಿಗೀಡಾಗಿದ್ದಾರೆ.
Advertisement
Advertisement
ಬೆಳಿಗ್ಗೆ 7.30 ರ ಸುಮಾರಿಗೆ ಅಪಘಾತ ಸಂಭವಿಸಿದ್ದು, ಗಾಯಾಳುಗಳನ್ನು ಮೊಗಾದ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈವರೆಗೆ ಮೂರು ಜನರು ಸಾವನ್ನಪ್ಪಿದ್ದಾರೆ. ಬಲವಾಗಿ ಡಿಕ್ಕಿ ಹೊಡೆದ ಪರಿಣಾಮ ಕೆಲವು ಗಾಯಗೊಂಡವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹಿರಿಯ ವೈದ್ಯಕೀಯ ಅಧಿಕಾರಿ (ಎಸ್ಎಂಒ) ಡಾ. ಸುಖ್ಪ್ರೀತ್ ಬ್ರಾರ್ ಹೇಳಿದ್ದಾರೆ. ಇದನ್ನೂ ಓದಿ: ನೆಲಮಂಗಲದಲ್ಲಿ ರೌಡಿಶೀಟರ್ಗಳಿಗೆ ಖಡಕ್ ವಾರ್ನಿಂಗ್
Advertisement
Saddened to learn of the bus accident in Moga district in which 3 Congress workers have reportedly died & many persons are injured. Have directed DC Moga to immediately provide full medical treatment to all the injured and to send a report to the Government.
— Capt.Amarinder Singh (@capt_amarinder) July 23, 2021
Advertisement
ಅಪಘಾತದಲ್ಲಿ ಮೃತಪಟ್ಟವರು ಕಾಂಗ್ರೆಸ್ ಶಾಸಕ ಕುಲ್ಬೀರ್ ಸಿಂಗ್ ಜಿರಾ ಅವರ ಬೆಂಬಲಿಗರಾಗಿದ್ದಾರೆ. ಇವರು ಮೊಗಾದಿಂದ 15 ಕಿ.ಮೀ ದೂರದಲ್ಲಿರುವ ಜೀರಾದಿಂದ ಚಂಡೀಗಢದಲ್ಲಿರುವ ಪಂಜಾಬ್ ಕಾಂಗ್ರೆಸ್ ಭವನಕ್ಕೆ ರಾಜ್ಯ ಕಾಂಗ್ರೆಸ್ ಸಮಿತಿಯ ಸ್ಥಾಪನಾ ಸಮಾರಂಭಕ್ಕೆ ಬರುತ್ತಿದ್ದರು. ಅವರ ವಾಹನ ಡಿಕ್ಕಿ ಹೊಡೆದ ಪಂಜಾಬ್ ರೋಡ್ ವೇಸ್ ಬಸ್ ಜಲಂಧರ್ ಕಡೆಗೆ ಹೋಗುತ್ತಿತ್ತು.
Chandigarh: Punjab Congress president Navjot Singh Sidhu, CM Captain Amarinder Singh, party’s former state president Sunil Jakhar and party’s general secretary in-charge of the state, Harish Rawat share a stage during the installation of new Punjab Pradesh Congress Committee team pic.twitter.com/CncnJizZNp
— ANI (@ANI) July 23, 2021
ಮೊಗಾ ಜಿಲ್ಲೆಯಲ್ಲಿ ಬಸ್ ಅಪಘಾತದ ಬಗ್ಗೆ ತಿಳಿದು ದುಃಖವಾಯಿತು. ಇದರಲ್ಲಿ ಮೂವರು ಕಾಂಗ್ರೆಸ್ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ತಕ್ಷಣವೇ ಸಂಪೂರ್ಣ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಮತ್ತು ಸರ್ಕಾರಕ್ಕೆ ವರದಿ ಕಳುಹಿಸುವಂತೆ ಮೊಗಾ ಡಿಸಿಗೆ ನಿರ್ದೇಶನ ನೀಡಿದ್ದೇನೆ. ಮೃತರನ್ನು ನೆನೆದು ಸಂತಾಪ ವ್ಯಕ್ತಪಡಿಸಿದ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಟ್ವೀಟ್ ಮಾಡಿದ್ದಾರೆ.