– ಕನ್ನಡಿಗರು ಯಾಕೆ ಇನ್ನೂ ಸುಮ್ಮನಿದ್ದಾರೆ
– ಹಾಲು ಕುಡಿಸಿ ನಾವು ಅವರಿಗೆ ಸ್ಕ್ರಿಪ್ಟ್ ಕೊಟ್ಟಿಲ್ಲ
ಬೆಂಗಳೂರು: ನಮ್ಮ ಶರ್ಟ್ ನಾವೇ ಹಾಕೋಬೇಕು, ನಮ್ಮ ಪ್ಯಾಂಟ್ ನಾವೇ ಹಾಕೋಬೇಕು. ರಾಜಕಾರಣದಲ್ಲಿ ಎಲ್ಲ ಇರುತ್ತೆ. ಆದರೆ ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಸದಾಶಿವ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಷಡ್ಯಂತ್ರ ಅಂತಾರೆ. ಷಡ್ಯಂತ್ರ ಮಾಡೋರು ಮಾಡ್ತಾರೆ. ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು. 24 ವರ್ಷ ಶಾಸಕರಾದವರು ಅಷ್ಟು ಗೊತ್ತಾಗಲ್ವಾ ದಡ್ಡರಾ…? ನಮ್ಮ ಶರ್ಟ್ ನಾವೇ ಹಾಕೋಬೇಕು, ನಮ್ಮ ಪ್ಯಾಂಟ್ ನಾವೇ ಹಾಕೋಬೇಕು ಎಂದು ಡಿಕೆಶಿ ವ್ಯಂಗ್ಯವಾಡಿದ್ದಾರೆ.
Advertisement
Advertisement
ಕಾಂಗ್ರೆಸ್ಸಿನವರು ನೀಚರು ಅಂದರೆ ಕಾಂಗ್ರೆಸ್ಸಿನವರು ಬಂದು ಶರ್ಟ್ ಹಾಕೋದು, ಪ್ಯಾಂಟ್ ಬಿಚ್ಚೋದು ಹೇಳಿ ಕೊಟ್ಟಿದ್ದಾರಾ..? ಸಚಿವರಾಗಿದ್ದ ರಮೇಶ್ ಜಾರಕಿಹೋಳಿ ಅವರೇ ಸಿಎಂ ಭ್ರಷ್ಟ ಅಂದಿದ್ದಾರೆ. ತನಿಖೆ ನಡೆಯಬೇಕಲ್ಲ. ಎಸಿಬಿಯವರು ಸ್ವಯಂ ಪ್ರೇರಿತ ದೂರು ದಾಖಲಿಸಬೇಕು. ವೀಡಿಯೋ ಫೇಕ್ ಅಂದಿದ್ದಾರೆ. ಏನೋ ಡಿಪ್ರೆಶನ್ ನಲ್ಲಿ ಇದ್ದಾರೆ. ಹೀಗಾಗಿ ಏನೋ ಹೇಳಿದ್ದಾರೆ ಎಂದು ತಿಳಿಸಿದರು.
Advertisement
ನಾನು ರಮೇಶ್ ಜಾಕಿಹೊಳಿಗೆ ಒಳ್ಳೆಯದನ್ನೇ ಬಯಸಿದವನು. ಆದರೆ ಹುಚ್ಚರ ತರ ಮಾತನಾಡೋಕೆ ಶುರು ಮಾಡಿದ ಮೇಲೆ ನಾನು ಮಾತಾಡೋದು ಬಿಟ್ಟೆ. ಅವರು ಬಿಟ್ಟು ಹೋದ ಮೇಲೆ ಮಾತನಾಡಿಲ್ಲ. ಮದುವೆಗೆ ಬಂದಾಗ ಮಾತನಾಡಿಸಿದ್ದೇನೆ ಅಷ್ಟೆ ಎಂದು ಡಿಕೆಶಿ ಹೇಳಿದರು.
Advertisement
ಯಡಿಯೂರಪ್ಪ ಭ್ರಷ್ಟಾಚಾರಿ ಅಂತ ಹೇಳಿದ್ದಾರೆ. ಮಾಧ್ಯಮಗಳ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಕನ್ನಡಿಗರ ಬಗ್ಗೆ ಅವಹೇಳನವಾಗಿ ಮಾತನಾಡಿದ್ದಾರೆ. ನಾನೊಬ್ಬ ಕನ್ನಡಿಗನಾಗಿ ಆ ಮಾತುಗಳು ಹೇಳಲ್ಲ. ಕನ್ನಡಿಗರು ಯಾಕೆ ಇನ್ನೂ ಸುಮ್ನೆ ಇದ್ದಾರೆ ಗೊತ್ತಿಲ್ಲ. ಬೆಳಗಾವಿ ಒಂದು ರಾಜ್ಯ ಅಂತ ಹೇಳಿದ್ದಾರೆ ಎಂದು ಡಿಕೆಶಿ ರಮೇಶ್ ಜಾರಕಿಹೊಳಿ ಹೆಸರು ಹೇಳದೇ ಕಿಡಿಕಾರಿದರು.
ಸ್ವಯಂಪ್ರೇರಿತ ದೂರು ದಾಖಲಾಗಬೇಕಿತ್ತು. ಕಾಂಗ್ರೆಸ್ಸಿನವರು ಶರ್ಟ್, ಪ್ಯಾಂಟು ಬಿಚ್ಚಿ ಎಂದು ಹೇಳಿ ಕೊಟ್ಟಿದ್ರಾ….?. ಕನ್ನಡಿಗರ ಬಗ್ಗೆ ಮಾತಾಡಿ ಎಂದು ಹೇಳಿಕೊಟ್ವಾ…? ನಾವೇನು ಸ್ಕ್ರಿಪ್ಟ್ ಕೊಟ್ವಾ. ಅವರ ಬಾಯಲ್ಲಿ ಬಂದಂತಹ ನುಡಿಮುತ್ತುಗಳು ಅದು. ಮಾಧ್ಯಮಗಳ ಬಗ್ಗೆ ಮಾತನಾಡಿ ಎಂದು ಹೇಳಿಕೊಟ್ವಾ..? ಯಡಿಯೂರಪ್ಪ ಭ್ರಷ್ಟಾಚಾರಿ ಎಂದು ಹಾಲಿ ಮಂತ್ರಿಗಳು ಆಗ ಹೇಳಿದ್ರು. ಹಾಲು ಕುಡಿಸಿ ಅವರಿಗೆ ನಾವು ಸ್ಕ್ರಿಪ್ಟ್ ಕೊಟ್ಟಿದ್ವಾ? ಇದೊಂದು ಫೇಕ್ ಆಗಿದ್ರೆ ತನಿಖೆ ಏಕೆ ಬೇಕು…? ರಾಜ್ಯದ ಜನರು ಡಡ್ಡರೇನ್ರಿ ಎಂದು ಡಿಕೆಶಿ ಸಿಡಿಮಿಡಿಗೊಂಡರು.