ಬೆಂಗಳೂರು : ಬಿಬಿಎಂಪಿಯ ವಿಳಂಬ ಧೋರಣೆಗೆ ಬೇಸತ್ತು ನಮಗೆ ವಿಷ ಕೊಡಿ. ಕುಡಿದು ನಾವೇ ಸಾಯುತ್ತೇವೆ ಎಂದು ಮನೆ ಕಳೆದುಕೊಂಡ ಫಲಾನುಭವಿಗಳು ಕಣ್ಣೀರು ಹಾಕಿದ ಘಟನೆ ಕಮಲನಗರದಲ್ಲಿ ನಡೆದಿದೆ.
ಕಮಲನಗರದ ನಾಲ್ಕನೇ ಮುಖ್ಯರಸ್ತೆಯಲ್ಲಿ ಕಳೆದ ಒಂದು ವರ್ಷದ ಹಿಂದೆ ಬಿಬಿಎಂಪಿ ಸೇತುವೆ ನಿರ್ಮಾಣ ಕಾಮಗಾರಿಯನ್ನು ಆರಂಭಿಸಿತ್ತು. ಈ ವೇಳೆ ಅಕ್ಕಪಕ್ಕದ ಮನೆಗಳು ಬಿರುಕು ಬಿಟ್ಟಿದ್ದವು. ಬಿರುಕುಬಿಟ್ಟ ನಾಲ್ಕೈದು ಮನೆಯವರನ್ನುಶಿಫ್ಟ್ ಮಾಡಿ, ಬಾಡಿಗೆ ಮನೆಯಲ್ಲಿರಿ. ಇದರ ವೆಚ್ಚವನ್ನು ಬಿಬಿಎಂಪಿಯೇ ನೀಡಲಿದೆ ಎಂದು ಭರವಸೆ ಕೊಟ್ಟಿತ್ತು.
Advertisement
Advertisement
ಭರವಸೆ ಮಾತ್ರ ನೀಡಿತ್ತು. ಆದರೆ ಇವರೆಗೂ ಮನೆಕಳೆದುಕೊಂಡು ಕಣ್ಣೀರು ಹಾಕ್ತಿರುವ ಫಲಾನುಭವಿಗಳಿಗೆ ಪರಿಹಾರ ಹಣವನ್ನ ಪಾಲಿಕೆ ನೀಡಲಿಲ್ಲ. ಇದರಿಂದ ಬೇಸತ್ತಿರುವ ಫಲಾನುಭವಿಗಳು ನಮಗೆ ವಿಷ ಕೊಡಿ ಸಾಯುತ್ತೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement
ಸದ್ಯ ಸೇತುವೆ ನಿರ್ಮಾಣ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು, ಮತ್ತೆ ಕಾಮಗಾರಿ ಪುನರ್ ಆರಂಭವಾದರೆ ಮತ್ತಷ್ಟು ಮನೆಗಳು ಬಿರುಕು ಬಿಟ್ಟು ಕುಸಿಯುವ ಆತಂಕ ನಿರ್ಮಾಣವಾಗಿದೆ. ಈಗಾಗಲೇ ಒಂದು ಮನೆಗೆ ಕಬ್ಬಿಣದ ರಾಡ್ ಗಳಿಂದ ಸಪೋರ್ಟಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಪಾಲಿಕೆಯ ಈ ಅವೈಜ್ಞಾನಿಕ ಕಾಮಗಾರಿಗೆ ವಾರ್ಡ್ ಜನ ಹಿಡಿಶಾಪ ಹಾಕುತ್ತಿದ್ದಾರೆ.