– ಆರ್.ಟಿ ವಿಠ್ಠಲಮೂರ್ತಿ ಸಂತಾಪ
ಬೆಂಗಳೂರು: ‘ಹಾಯ್ ಬೆಂಗಳೂರು’ ಹಾಗೂ ‘ಓ ಮನಸೇ’ ಪತ್ರಿಕೆಯ ಸಂಪಾದಕ ರವಿ ಬೆಳಗ್ಗೆ ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಅವನು ನನ್ನ ಮಗ. ಅವನ ಅಗಲಿಕೆ ನನಗೆ ಸಹಿಸಲಾಗುತ್ತಿಲ್ಲ ಎಂದು ಹಿರಿಯ ಪತ್ರಕರ್ತೆ, ಸಾಹಿತಿ ವಿಜಯಮ್ಮ ಕಂಬನಿ ಮಿಡಿದಿದ್ದಾರೆ.
Advertisement
ಅವನು ಮೆಲೊಡಿ ಶಬ್ದಕ್ಕೆ ಅರ್ಥ ತುಂಬುತ್ತಿದ್ದ. ನಿತ್ಯ ಒಂದೊಂದು ಮಧುರ ಗಾನದ ವಿಡಿಯೋ, ಆಡಿಯೋ ಕಳಿಸುವ ಮೂಲಕ ಅಮ್ಮಾ ಇನ್ನೂ ಮಲಗಿಲ್ಲವೆ? ಇಷ್ಟು ನಿದ್ದೆಗೆಡ ಬೇಡ ಎಂದು ಆರೋಗ್ಯ ಜೋಪಾನ, ಎಲ್ಲಿಯೂ ಹೋಗಬೇಡ. ಇವತ್ತು ಶುಗರ್, ಬಿಪಿ ಎಷ್ಟಿದೆ ಅಂತೆಲ್ಲ ಕೇಳುತ್ತಾ ನನ್ನ ಬೆಳಗನ್ನು ಆವರಿಸುತ್ತಿದ್ದ. ರವೀ ರವೀ ಅಂತ ಪ್ರಶ್ನಾರ್ಥಕ ಚಿಹ್ನೆ ಹಾಕಿ ಕಣ್ಣೀರಾಕಿದ್ದಾರೆ. ಇದನ್ನೂ ಓದಿ: ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ಭಾಷ್ಯ ಬರೆದ ಮಾಂತ್ರಿಕನ ಬೆರಳುಗಳು ನಿಶ್ಚಲವಾಗಿವೆ: ಟಿ. ಗುರುರಾಜ್
Advertisement
Advertisement
ಹಿರಿಯ ಪತ್ರಕರ್ತ ಆರ್.ಟಿ ವಿಠ್ಠಲಮೂರ್ತಿ ಕೂಡ ಸಂತಾಪ ಸೂಚಿಸಿದ್ದು, ನನ್ನ ಬದುಕಿಗೆ ಅಣ್ಣನಾಗಿ ಸಿಕ್ಕ ಪತ್ರಕರ್ತ ರವಿ ಬೆಳಗೆರೆ ತೀರಿಕೊಂಡಿದ್ದಾರೆ. ಹಾಯ್ ಬೆಂಗಳೂರು ಪತ್ರಿಕೆಯ ಮೂಲಕ ನಾಡಿನಲ್ಲಿ ಸಂಚಲನವೆಬ್ಬಿಸಿದ ರವಿ ಬೆಳಗೆರೆ ಅವರ ನಿರ್ಗಮನ ನನಗೆ ಘಾಸಿಯುಂಟು ಮಾಡಿದೆ. ಹೇಳಿದರೆ ಬರೋಬ್ಬರಿ ಇಪ್ಪತ್ತಾರು ವರ್ಷಗಳ ಭಾಂದವ್ಯ. ಅವರು ಹಾಯ್ ಬೆಂಗಳೂರು ಆರಂಭಿಸಿದಾಗ ಜೊತೆಗಿದ್ದವರು. ನಾನು, ಸೀತಾನದಿ ಸುರೇಂದ್ರ ಈ ಪೈಕಿ ಸುರೇಂದ್ರ ಪತ್ರಿಕೆ ಆರಂಭವಾದ ಆರು ತಿಂಗಳಲ್ಲಿ ತೀರಿಕೊಂಡರು. ಆಗೆಲ್ಲ ಉಳಿದವರು ನಾವಿಬ್ಬರು ವಿಠ್ಠಲಮೂರ್ತಿ, ಕಷ್ಟಪಟ್ಟು ತೇರು (ಪತ್ರಿಕೆ) ಎಳೆದು ಬಿಡೋಣ ಎಂದು ಬೆಳಗೆರೆಯವರು ಹೇಳಿದ್ದರು. ಇದನ್ನೂ ಓದಿ: ನನಗೇನಾಗುತ್ತೆ, ಎಷ್ಟೋ ವರ್ಷ ಬದುಕಿರುತ್ತೇನೆ ಕಣ್ರೋ ಅಂದಿದ್ರು- ದೀಪಿಕಾ ದಾಸ್ ಕಣ್ಣೀರು
Advertisement
ತೇರು ಅಪೂರ್ವವಾಗಿ ಮುಂದಕ್ಕೆ ಹೋಯಿತು. ಮುಂದೆ ಭಾರತ-ಪಾಕಿಸ್ತಾನದ ನಡುವೆ ಯುದ್ಧವಾದಾಗ ನಾವಿಬ್ಬರೂ ಯುದ್ಧಪೀಡಿತ ಕಾಶ್ಮೀರದ ನೆಲಕ್ಕೆ ಕಾಲಿಟ್ಟೆವು. ನಂತರ ಗುಜರಾತ್ ನ ಭೂಕಂಪಪೋಡಿತ ಪ್ರದೇಶಗಳಿಗೆ ಹೇಳಿದರೆ ನೂರಾರು ನೆನಪುಗಳು. ಈಗ ಅವರೇ ನಿರ್ಗಮಿಸಿದ್ದಾರೆ. ಮನಸ್ಸು ಕಲ್ಲವಿಲಗೊಂಡಿದೆ. ಅವರಾತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಸಾವು ಬಂದು ಕರೆದಾಗ ಅತ್ಲಾಗೆ ನೋಡೋಣ ನಡಿ ಅಂತ ಹೊರಟುಬಿಟ್ಟಿದ್ದಾರೆನೋ: ಯೋಗರಾಜ್ ಭಟ್