ಮೈಸೂರು: ನನ್ನ ಪರವಾಗಿ ಸ್ವಾಮೀಜಿಗಳು ಮಾತನಾಡುತ್ತಿರುವುದು ಸಂತೋಷ. ಆದರೆ ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ನನ್ನ ಪರವಾಗಿ ಸ್ವಾಮೀಜಿಗಳು, ಸ್ನೇಹಿತರು ಮಾತನಾಡುತ್ತಾರೆ ಇದು ಖುಷಿ. ನಾನು ಸಚಿವನಾಗಬೇಕು, ಡಿಸಿಎಂ, ಸಿಎಂ ಆಗಬೇಕು ಅಪೇಕ್ಷೆ ಪಡುತ್ತಾರೆ. ನಾನು ರಾಜಕಾರಣಿ, ರಾಜಕಾರಣಿ ನಿರೀಕ್ಷೆ ಇರುತ್ತೆ. ಆದರೆ ಕೇಂದ್ರ ನಾಯಕರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದ ಎಂದು ಸ್ಪಷ್ಟಪಡಿಸಿದರು.
Advertisement
Advertisement
ನಾನು ಸಚಿವ ಸಂಪುಟಕ್ಕೆ ಸೇರುವುದು ಬಿಡುವುದು ಹೈಕಮಾಂಡ್ಗೆ ಬಿಟ್ಟ ವಿಚಾರ. ನೂತನ ಸಚಿವ ಸಂಪುಟದಲ್ಲಿ ಇರಬೇಕಾ ಇಲ್ಲವಾ ಎಂಬುದು ನಾನು ತೆಗೆದುಕೊಳ್ಳುವ ನಿರ್ಧಾರವಲ್ಲ ಎಂದು ಪ್ರತಿಕ್ರಿಯಿಸಿದರು.
Advertisement
ಬಿಜೆಪಿಯಲ್ಲಿ ಒಂದು ವ್ಯವಸ್ಥೆ ಇದೆ. ಸಿಎಂ, ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಕೇಂದ್ರ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಅವರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದನಾಗಿದ್ದೇನೆ ಎಂದರು. ಇದನ್ನೂ ಓದಿ : ವಿಮಾನದಲ್ಲಿ ಬೆಂಗಳೂರಿಗೆ ಬಂದು ಬೈಕ್ ಕಳ್ಳತನ – 33 ಬೈಕುಗಳು ವಶ
Advertisement
ಜಗದೀಶ್ ಶೆಟ್ಟರ್ ಅವರು ಹಿರಿಯರಾಗಿದ್ದಾರೆ. ತಮ್ಮ ಜೂನಿಯರ್ ಕೆಳಗೆ ಸಂಪುಟದಲ್ಲಿ ಇರುವುದಿಲ್ಲ ಎನ್ನುವ ತೀರ್ಮಾನ ಮಾಡಿದ್ದಾರೆ. ಇದಕ್ಕೂ ಕಟೀಲ್ ಅವರದ್ದು ಎನ್ನುವ ಆಡಿಯೋಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದರು.