ಚಿತ್ರದುರ್ಗ: ತಾಂತ್ರಿಕ ದೋಷದಿಂದ ರಿಲೀಸ್ ಗೂ ಮುನ್ನವೇ ಭಾರೀ ಸುದ್ದಿಯಾಗಿದ್ದ ಕೋಟಿಗೊಬ್ಬ-3 ಸಿನಿಮಾದ ಸುತ್ತ ಇದೀಗ ಮತ್ತೊಂದು ವಿವಾದ ಸುತ್ತಿಕೊಂಡಿದೆ. ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಫಿಲಂ ವಿತರಕರು ತಿರುಗಿಬಿದ್ದಿದ್ದಾರೆ.
ಚಿತ್ರದುರ್ಗದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕೋಟಿಗೊಬ್ಬ-3 ಚಿತ್ರ ವಿತರಣೆಗಾಗಿ 1 ಕೋಟಿ 90 ಲಕ್ಷಕ್ಕೆ ಅಗ್ರಿಮೆಂಟ್ ಮಾಡಿಕೊಂಡಿದ್ದೆವು. ಅವರು ಮುಂಗಡವಾಗಿ 60 ಲಕ್ಷ ಹಣ ಪಡೆದಿದ್ದರು. ಆದರೆ ನಮಗೆ ಚಿತ್ರವೂ ನೀಡದೆ ಇತ್ತ ಹಣವೂ ನೀಡದೆ ಧಮ್ಕಿ ಹಾಕುತ್ತಿದ್ದಾರೆಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಅಂದು ನನ್ನ ನಂಬಿ ಸಿನಿಮಾ ಮಂದಿರಕ್ಕೆ ಬಂದವ್ರಲ್ಲಿ ಕ್ಷಮೆ ಕೇಳುತ್ತೇನೆ: ಸುದೀಪ್
Advertisement
Advertisement
ರಾಜ್ಯದ ದಾವಣಗೆರೆ, ಚಿತ್ರದುರ್ಗ ಹಾಗೂ ಬಳ್ಳಾರಿ ಜಿಲ್ಲೆಗಳಿಗೆ ವಿತರಣೆಗಾಗಿ ಕುಮಾರ್ ಫಿಲಂಸ್ ಮೂಲಕ ಡಿಸ್ಟ್ರಿಬ್ಯೂಷನ್ ಪಡೆದಿದ್ದು, ಮಾರ್ಚ್ 31ಕ್ಕೆ ಕಾಳಿಂಗ ಹ್ಯಾಡ್ಸ್ ಮೂಲಕ ರಾಂಬಾಬು ಫಿಲಂಸ್ ಗೆ ಹಣ ಸಂದಾಯವಾಗಿದೆ. 45 ಲಕ್ಷ ಖಖಿಉS ಹಾಗೂ ಉಳಿದ ಹಣವನ್ನು ನಗದು ರೂಪದಲ್ಲಿ ನೀಡಲಾಗಿದೆ. ಈ ವೇಳೆ ಉಳಿದ ಹಣ ನೀಡದ ಕಾರಣ ಸಿನಿಮಾ ರಿಲೀಸ್ ಲೈಸನ್ಸ್ ಕೊಟ್ಟಿರಲಿಲ್ಲ ಎಂದರು. ಇದನ್ನೂ ಓದಿ: EXCLUSIVE: ಸಿನಿಮಾಗೂ ಸಿಗದೇ ಇರುವ ಪಬ್ಲಿಸಿಟಿ ರಿಲೀಸ್ ಆಗದ ದಿನ ಸಿಕ್ತು: ಕಿಚ್ಚ
Advertisement
Advertisement
ಆಗ ಸಿನಿಮಾ ಬಿಡಗಡೆ ಆಗದಿದ್ದಕ್ಕೆ ಕಿಚ್ಚ ಸುದೀಪ್ ಅಭಿಮಾನಿಗಳನ್ನು ಎತ್ತಿಕಟ್ಟಿ ನಮಗೆ ಬೆದರಿಸಿದ್ದಾರೆ. ಹಾಗೆಯೇ ಮರುದಿನ ಜಾಕ್ ಮಂಜುಗೆ ಸಿನಿಮಾ ವಿತರಣೆಗೆ ಅವಕಾಶ ನೀಡಿದ್ದು, ಆಗ ನನ್ನ ಹಣ ವಾಪಸ್ ನೀಡುವಂತೆ ಕೇಳು ಮೂಲಕ ಸೂರಪ್ಪಬಾಬು ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಸೂರಪ್ಪ ಬಾಬು ವಿರುದ್ಧ ಕುಮಾರ್ ಫಿಲಂಸ್ ನಿರ್ಮಾಪಕ ಕುಮಾರ್ ಹಾಗೂ ನಾನು ಚಿತ್ರದುರ್ಗ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದೇವೆ. ನಮ್ಮ ಜೀವಕ್ಕೆ ಪ್ರಾಣಭಯವಿದ್ದು, ನಮಗೆ ರಕ್ಷಣೆ ಒದಗಿಸಬೇಕು ಹಾಗೂ ಸಂಕಷ್ಟದಲ್ಲಿರುವ ನಮಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ನನ್ನ ಹಾಗೂ ಸೂರಪ್ಪ ಬಾಬು ಮಧ್ಯೆ ಮನಸ್ತಾಪ ಇರೋದು ನಿಜ: ಸುದೀಪ್