ಹೈದರಾಬಾದ್: ನನಗೆ ಒಬ್ಬನೇ ಮಗ ಎಂದು ಹುತಾತ್ಮ ಯೋಧ ಕರ್ನಲ್ ಸಂತೋಷ್ ಬಾಬು ಅವರ ತಾಯಿ ಕಣ್ಣೀರಿಟ್ಟಿದ್ದಾರೆ.
ಭಾರತ-ಚೀನಾ ಮಧ್ಯೆ ಯುದ್ಧದ ಕಾರ್ಮೋಡ ಆವರಿಸುತ್ತಿದೆ. ಪದೇ ಪದೇ ಕಿರಿಕ್ ಮಾಡುವ ಚೀನಾ, ಯುದ್ಧೋನ್ಮಾದದಲ್ಲೇ ತೇಲಾಡುತ್ತಿದೆ. ಸೋಮವಾರ ರಾತ್ರಿ ನಡೆದ ದಾಳಿಯಲ್ಲಿ ಭಾರತೀಯ ಸೇನೆ ಕರ್ನಲ್ ಮತ್ತು ಇಬ್ಬರು ಸೈನಿಕರು ಹುತಾತ್ಮರಾಗಿದ್ದರು. ಇಂದು ರಾತ್ರಿ ಬಂದ ಮಾಹಿತಿ ಪ್ರಕಾರ ಒಟ್ಟು 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಇದನ್ನೂ ಓದಿ: ಚೀನಾದ 43 ಸೈನಿಕರು ಮಟಾಶ್- ಭಾರತದ 20 ಮಂದಿ ಯೋಧರು ಹುತಾತ್ಮ
Advertisement
Advertisement
ಮಾಧ್ಯಮಗಳ ಜೊತೆಗೆ ಮಾತನಾಡಿದ ಕರ್ನಲ್ ಸಂತೋಷ್ ಬಾಬು ಅವರ ತಾಯಿ ಮಂಜುಳಾ ಅವರು, ನನ್ನ ಸೊಸೆ ಹಾಗೂ ಮೊಮ್ಮಕ್ಕಳು ದೆಹಲಿಯಲ್ಲೇ ಇರುತ್ತಾರೆ. ಮಗನ ಸಾವಿನ ಸುದ್ದಿ ಕೇಳಿ ಒಂದು ಕಡೆ ದುಃಖವಾಗ್ತಿದೆ. ಮತ್ತೊಂದು ಕಡೆ ಸಂತೋಷವಾಗ್ತಿದೆ. ದೇಶಕ್ಕಾಗಿ ಮಗ ಪ್ರಾಣ ಕೊಟ್ಟ ಅನ್ನೋದು ಒಂದೆಡೆಯಾದರೆ, ಮಗನ ಅಗಲಿಕೆ ನೋವಿನ ಸಂಗತಿಯಾಗಿದೆ. ನನಗೆ ಒಬ್ಬನೇ ಮಗ ಎಂದು ಕಣ್ಣೀರಾದರು.
Advertisement
ಮಗನ ಸಾವಿನ ಸುದ್ದಿ ಸೊಸೆಗೆ ಸೋಮವಾರ ರಾತ್ರಿಯೇ ತಿಳಿದಿತ್ತು. ಆದರೆ ನಾನು ಆಘಾತಕ್ಕೆ ಒಳಗಾಗುತ್ತೇನೆ ಎಂದು ಹೇಳಿರಲಿಲ್ಲ. ಈಗ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ ಎಂದು ಭಾವುಕರಾದರು.
Advertisement
Like Chhatrapati Shivaji,Col #SantoshBabu,displayed unparalleled courage & strength to protect his motherland from intruders
His mother Smt Manjula Ji is just like Jijabai
She says as much I grieve for my son as a mother,am proud of him that he martyred in protecting motherland pic.twitter.com/BkIb5ENSte
— Y. Satya Kumar (సత్యకుమార్) (@satyakumar_y) June 16, 2020
ಹುತಾತ್ಮ ಕರ್ನಲ್ ಸಂತೋಷ್ ಬಾಬು ತೆಲಂಗಾಣದ ಸೂರ್ಯಪೇಟೆ ನಿವಾಸಿ. ಸಂತೋಷ್ ಅವರಿಗೆ 9 ವರ್ಷದ ಮಗಳು ಅಭಿಜ್ಞಾ ಮತ್ತು ಮಗ ನಾಲ್ಕು ವರ್ಷದ ಅನಿಲ್ ತೇಜ್ ಇದ್ದಾರೆ. ಸಂತೋಷ್ ಪ್ರಾಥಮಿಕ ಶಿಕ್ಷಣವನ್ನು ಸೂರ್ಯಪೇಟ್ನಲ್ಲಿ ಮುಗಿಸಿ ಪುಣೆಯಲ್ಲಿ ಡಿಗ್ರಿ ಮಾಡಿದ್ದರು. ಬಳಿಕ ಭಾರತೀಯ ಸೇನೆಗೆ ಆಯ್ಕೆಯಾಗಿದ್ದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಸಂತೋಷ್ ಅವರು ಮೊದಲು ತಮ್ಮ ದೇಶಸೇವೆ ಆರಂಭಿಸಿದ್ದರು. ಇತ್ತೀಚೆಗೆ ಹೈದರಾಬಾದ್ಗೆ ವರ್ಗಾವಣೆ ಕೇಳಿದ್ದರು. ಆದರೆ ನಡೆಸಿ ಕುತಂತ್ರಕ್ಕೆ ಸಂತೋಷ್ ಬಾಬು ಹುತಾತ್ಮರಾಗಿದ್ದಾರೆ.