ಗದಗ: ಮಲಪ್ರಭಾ ನದಿಯ ದಡದಲ್ಲಿ ಬೃಹತ್ ಮೊಸಳೆ ಕಾಣಿಸಿಕೊಂಡಿದ್ದು, ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.
ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರ ಬಳಿಯ ಮಲಪ್ರಭಾ ನದಿಯಲ್ಲಿ ಬೃಹತ್ ಮೊಸಳೆ ಪ್ರತ್ಯಕ್ಷವಾಗಿದೆ. ನದಿಯಲ್ಲಿ ಬೃಹದ್ದಾಕಾರದ ಮೊಸಳೆ ಕಂಡು ಸ್ಥಳಿಯರು ಭಯಭೀತರಾಗಿದ್ದಾರೆ. ನದಿ ದಡದ ಪೊದೆಯೊಂದರಲ್ಲಿ ವಿಶ್ರಾಂತಿ ಪಡೆದಿರುವುದನ್ನು ಸ್ಥಳೀಯ ಯುವಕರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
Advertisement
Advertisement
ಈ ಹಿಂದೆ ಮಲಪ್ರಭಾ ನದಿ ಪ್ರವಾಹಕ್ಕಿಡಾಗಿತ್ತು. ಪ್ರವಾಹದ ಅಬ್ಬರಕ್ಕೆ ಮೊಸಳೆ ನದಿಗೆ ಬಂದಿರುವ ಶಂಕೆ ವ್ಯಕ್ತವಾಗುತ್ತಿದೆ. ಹೊಳೆಆಲೂರ ಭಾಗದ ಅನೇಕ ಕಡೆಗಳಲ್ಲಿ ಪದೇ ಪದೆ ಮೊಸಳೆಗಳು ಕಾಣಿಸಿಕೊಳ್ಳುತ್ತಿದ್ದು, ನದಿಯಲ್ಲಿ ಮೂರ್ನಾಲ್ಕು ಮೊಸಳೆಗಳು ಇರಬಹುದು ಎನ್ನಲಾಗುತ್ತಿದೆ. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಈ ಹಿನ್ನೆಲೆ ನದಿ ತೀರಕ್ಕೆ ಯಾರೂ ಹೋಗದಂತೆ ಗ್ರಾಮದಲ್ಲಿ ಢಂಗೂರ ಸಾರಿ ಎಚ್ಚರಿಕೆ ನೀಡಲಾಗಿದೆ.