ಹಾವೇರಿ: ಕೊಡಲಿಯಿಂದ ಕೊಚ್ಚಿ ರೌಡಿಶೀಟರ್ ನನ್ನ ಬರ್ಬರ ಹತ್ಯೆ ಮಾಡಿದ ಘಟನೆ ಹಾವೇರಿ ಜಿಲ್ಲೆ ಸವಣೂರು ಪಟ್ಟಣದ ಕಾರಡಗಿ ರಸ್ತೆಯಲ್ಲಿ ನಡೆದಿದೆ.
ಹಜರತ್ ಅಲಿ ಊರ್ಫ್ ಅನ್ವರ ಶೇಖ್ (35) ಹತ್ಯೆಯಾದ ರೌಡಿಶೀಟರ್ ಆಗಿದ್ದಾನೆ. ಇಮ್ರಾನ್ ಚೌಧರಿ(28) ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ. ಹಣ ವಿಚಾರೌಆಗಿ ನಡೆದ ಜಗಳ ಸಾವಿನಲ್ಲಿ ಅಂತ್ಯವಾಗಿದೆ. ಕೊಡಲಿಯಿಂದ ಕೊಚ್ಚಿ ರೌಡಿಶೀಟರ್ ನನ್ನ ಬರ್ಬರ ಹತ್ಯೆ ಮಾಡಲಾಗಿದೆ.
Advertisement
Advertisement
ಹಣಕಾಸಿನ ವಿಚಾರವಾಗಿ ಇಮ್ರಾನ್ ಜೊತೆ ಜಗಳಕ್ಕಿಳಿದು ಕೊಡಲಿಯಿಂದ ಹೊಡೆಯಲು ರೌಡಿಶೀಟರ್ ಹಜರತ್ ಅಲಿ ಅನ್ವರ ಶೇಖ್ ಯತ್ನಿಸಿದ್ದ. ಇಬ್ಬರು ಪರಸ್ಪರ ಜಗಳ ಮಾಡಿಕೊಂಡು ರೌಡಿಶೀಟರ್ ಕೈಯಲ್ಲಿ ಇದ್ದ ಕೊಡಲಿ ಕಸಿದುಕೊಂಡು ಇಮ್ರಾನ್ ಚೌಧರಿ ಹತ್ಯೆ ಮಾಡಿದ್ದಾನೆ. ಗೋವಾದಲ್ಲೂ ಹಲವು ಪ್ರಕರಣಗಳಲ್ಲಿ ಅನ್ವರ ಶೇಖ್ ಭಾಗಿಯಾಗಿದ್ದ. ಇದನ್ನೂ ಓದಿ: ಎಂಟಿಬಿ ಸಮಾಧಾನವಾಗಿದ್ದಾರೆ, ಆನಂದ್ ಸಿಂಗ್ ಬಗ್ಗೆ ಗೊತ್ತಿಲ್ಲ: ಈಶ್ವರಪ್ಪ
Advertisement
Advertisement
ಸ್ವಗ್ರಾಮಕ್ಕೆ ಆಗಮಿಸಿದ ಇಬ್ಬರು ಪರಸ್ಪರ ಜಗಳ ಮಾಡಿಕೊಂಡು ಕೊಲೆಯಲ್ಲಿ ಅಂತ್ಯವಾಗಿದೆ. ಕೊಲೆ ಮಾಡಿದ ಆರೋಪಿಯನ್ನ ಇಮ್ರಾನ್ ಚೌಧರಿಯನ್ನ ಸವಣೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಥಳಕ್ಕೆ ಎಸ್ಪಿ ಹನುಮಂತರಾಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.