ನವದೆಹಲಿ: ಬಾಲಿವುಟ್ ನಟಿ, ಡ್ಯಾನ್ಸರ್ ಎಲಿ ಅವ್ರಾಮ್ ಮುಖ, ಕೈ-ಕಾಲು ಸೇರಿ ಈಡೀ ದೇಹಕ್ಕೆ ಬೀಟ್ರೂಟ್ ಹಚ್ಚಿಕೊಂಡು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.
29 ವರ್ಷದ ನಟಿ ಎಲಿ ಅವ್ರಾಮ್ಗೆ ಚರ್ಮದ ಚಿಕಿತ್ಸೆಗಾಗಿ ಮೈತುಂಬ ಬೀಟ್ರೂಟ್ ಜ್ಯೂಸ್ ಅನ್ನು ಹಚ್ಚಿಕೊಳ್ಳಲು ಅವರ ಮನೆಯ ಸಹಾಯಕಿ ಸಲಹೆ ನೀಡಿದ್ದಳು. ಇದರಿಂದಾಗಿ ಮೈತುಂಬ ಬೀಟ್ರೂಟ್ ಜ್ಯೂನ್ ಅನ್ನು ಹಚ್ಚಿಕೊಂಡ ನಟಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
Advertisement
Advertisement
ಬಿಕಿನಿಯಲ್ಲಿರುವ ಫೋಟೋಗಳನ್ನು ತಮ್ಮನ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಎಲಿ ಅವ್ರಾಮ್, ‘ಇದು ಬೀಟ್ರೂಟ್ ಅಂಗಡಿ’ ಎಂದು ಶೀರ್ಷಿಕೆ ಹಾಕಿದ್ದಾರೆ. ಜೊತೆಗೆ “ಬೀಟ್ರೂಟ್ನ ಪ್ರೀತಿಗಾಗಿ. ಇದು ಮನೆಯಲ್ಲಿ ನನ್ನ ಸಹಾಯಕಿ ಉಷಾ ಕಲ್ಪನೆ. ಈ ಅಲಂಕಾರ ನೋಡಿ ಅವಳು ನನ್ನನ್ನು ಅನ್ಯಲೋಕದವಳು ಎಂದು ಕರೆದಳು” ಎಂದು ಬರೆದುಕೊಂಡಿದ್ದಾರೆ.
Advertisement
ಎಲಿ ಅವ್ರಾಮ್ ಫೋಟೋಗಳಿಗೆ 99 ಸಾವಿರಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಕೆಲ ನೆಟ್ಟಿಗರು ತಮ್ಮದೇ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.
Advertisement
ಡ್ಯಾನ್ಸಿಂಗ್ ಕೌಶಲ್ಯದಲ್ಲಿ ಸಖತ್ ಹೆಸರು ಮಾಡಿರುವ ಎಲಿ ಅವ್ರಾಮ್ ಅನೇಕ ಸಿನಿಮಾ ಹಾಡುಗಳಿಗೆ ಸ್ಟೆಪ್ ಹಾಕಿದ್ದಾರೆ. ಸಲ್ಮಾನ್ ಖಾನ್ ನಿರೂಪಿಸಿದ ರಿಯಾಲಿಟಿ ಟಿವಿ ಶೋ ಬಿಗ್ಬಾಸ್ನ ಏಳನೇ ಆವೃತ್ತಿಯಲ್ಲಿ ಎಲಿ ಅವ್ರಾಮ್ ಭಾಗವಹಿಸಿದ್ದರು. ಅಷ್ಟೇ ಅಲ್ಲದೆ ಝಲಕ್ ದಿಕ್ಲಾ ಜಾ ಸೀಸನ್ 7ರ ಸ್ಪರ್ಧಿಯೂ ಆಗಿದ್ದಾರೆ. ಕಳೆದ ವರ್ಷ, ಅವರು ಟೈಪ್ ರೈಟರ್ ಮತ್ತು ಇನ್ಸೈಡ್ ಎಡ್ಜ್-2 ನಂತಹ ವೆಬ್ ಶೋಗಳಲ್ಲಿ ಕಾಣಿಸಿಕೊಂಡಿದ್ದರು.
https://www.instagram.com/p/CAz1kmMggFm/?utm_source=ig_embed