– ಖಾತೆಗಳು ಶೀಘ್ರವೇ ಫ್ರೀಜ್ ಸಾಧ್ಯತೆ
ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಸೇರಿರುವ ನಟಿ ಸಂಜನಾ ಗಲ್ರಾನಿ ಹೆಸರಲ್ಲಿ ಬರೋಬ್ಬರಿ 11 ಬ್ಯಾಂಕ್ ಅಕೌಂಟ್ಗಳಿವೆ ಎಂಬ ಮಾಹಿತಿ ಹೊರಬಿದ್ದಿದೆ.
Advertisement
ಹೌದು. ನಟಿ ಸಂಜನಾ ಹೆಸರಲ್ಲಿ ಬರೋಬ್ಬರಿ 11 ಬ್ಯಾಂಕ್ ಅಕೌಂಟ್ಗಳಿವೆ. ಬಂಧನವಾಗುವ ಕೆಲ ದಿನಗಳ ಮೊದಲು ಹಣ ತೆಗೆದಿದ್ದರು. 11 ಖಾತೆಗಳಲ್ಲಿ ಈಗ 40 ಲಕ್ಷ ರೂಪಾಯಿ ಇದೆ. ಅರೆಸ್ಟ್ ಆಗುವ ಮೊದಲು ಸಂಜನಾ ಸಾಕಷ್ಟು ಹಣದ ವ್ಯವಹಾರ ನಡೆಸಿದ್ದರು. ಕೆಲವೊಂದು ಖಾತೆಗಳಿಗೆ ವಿದೇಶಗಳಿಂದಲೂ ಹಣ ಜಮೆ ಆಗಿರುವ ಶಂಕೆ ವ್ಯಕ್ತವಾಗುತ್ತಿದೆ. ಹೀಗಾಗಿ ಹಣ ಯಾರು ಹಾಕಿದ್ದಾರೆ ಎಂಬ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸ್ತಿದ್ದು, ಶೀಘ್ರವೇ ಸಂಜನಾ ಬ್ಯಾಂಕ್ ಖಾತೆಗಳು ಫ್ರೀಜ್ ಮಾಡುವ ಸಾಧ್ಯತೆಗಳಿವೆ.
Advertisement
Advertisement
ಸಂಜನಾ ಅವರು ಮನ್ಸೂರ್ ಖಾನ್ ಕಂಪನಿಯಲ್ಲಿ ಲಕ್ಷಾಂತರ ರೂಪಾಯಿ ಹೂಡಿದ್ದರಂತೆ. ಈ ಕುರಿತು ನಟಿ ವಿಚಾರಣೆಯ ವೇಳೆ ಮೋಸ ಹೋಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೆಚ್ಚಿನ ಬಡ್ಡಿ ಆಸೆಗೆ ಹಣ ಹೂಡಿದ್ದೆ, ನನ್ನ ಸ್ನೇಹಿತರು ಹಣ ಹೂಡಿದ್ದರು. ಆದರೆ ನನ್ನ ಹಣವೆಲ್ಲ ಐಎಂಎ ಕಂಪನಿ ಪಾಲಾಗಿದೆ ಎಂದು ಹಣಕಾಸು ವ್ಯವಹಾರದ ಬಗ್ಗೆ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
ಡ್ರಗ್ಸ್ ಕೇಸ್ ಬೆನ್ನು ಹತ್ತಿರೋ ಪೊಲೀಸರಿಗೆ ಸಿನಿಲೋಕದ ಡ್ರಗ್ಸ್ ಕೇಸ್ಗೆ ಸ್ಫೋಟಕ ಟ್ವಿಸ್ಟ್ ಕೂಡ ಸಿಕ್ಕಿತ್ತು. ನಟಿ ರಾಗಿಣಿ, ಸಂಜನಾ ಮೊಬೈಲ್ನಲ್ಲಿ ಸ್ಫೋಟಕ ಸಾಕ್ಷ್ಯ ದೊರೆತಿದೆ. ಅದೇನೆಂದರೆ ಡ್ರಗ್ಸ್ ಕೇಸ್ನಲ್ಲಿ ಬಂಧಿತರಾಗಿರುವ ಆರೋಪಿಗಳಿಂದ ಸೆಕ್ಸ್ ದಂಧೆ ನಡೆಯುತ್ತಿರುವ ಶಂಕೆ ವ್ಯಕ್ತವಾಗಿತ್ತು. ಬಂಧಿತ ಆರೋಪಿಗಳ ಮೊಬೈಲ್ನಲ್ಲಿ ಸೆಕ್ಸ್ ದಂಧೆ ಸಾಕ್ಷ್ಯ ದೊರಕಿದ್ಯಂತೆ. ಸೆಕ್ಸ್ ದಂಧೆಗಾಗಿಯೇ ಆರೋಪಿಗಳು ವಾಟ್ಸಾಪ್ ಗ್ರೂಪ್ ಮಾಡ್ಕೊಂಡಿದ್ದರು. ಆದರೆ ಡ್ರಗ್ಸ್ ಕೇಸ್ ಬಯಲಾಗ್ತಿದ್ದಂತೆ ವಾಟ್ಸಾಪ್ ಗ್ರೂಪ್ನ್ನೇ ಡಿಲೀಟ್ ಮಾಡಿದ್ದರು. ಬಂಧಿತ ನಟಿಯರ ಮೊಬೈಲ್ನಲ್ಲಿಯೂ ಸಾಕ್ಷ್ಯ ಸಿಕ್ಕಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು.
ಸೋಮವಾರವಷ್ಟೇ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಹಾಗೂ ಉಳಿದ ಆರೋಪಿಗಳ ಜಾಮೀನು ಅರ್ಜಿಯನ್ನು ಎನ್ಡಿಪಿಎಸ್ ಕೋರ್ಟ್ ವಜಾಗೊಳಿಸಿತ್ತು. ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ರಾಗಿಣಿ ಜಾಮೀನು ಅರ್ಜಿಯ ವಿಚಾರಣೆಯನ್ನ ನ್ಯಾಯಾಲಯ ಸೆಪ್ಟೆಂಬರ್ 21ರಂದು ನಡೆಸಿತ್ತು. ವಿಚಾರಣೆಯ ಬಳಿಕ ಆದೇಶವನ್ನು ನ್ಯಾಯಾಧೀಶರು ಕಾಯ್ದಿರಿಸಿದ್ದರು. ಇತ್ತ ಮತ್ತೋರ್ವ ನಟಿ ಸಂಜನಾ ಗಲ್ರಾನಿ ಜಾಮೀನು ಅರ್ಜಿಯ ವಿಚಾರಣೆ ಸೆಪ್ಟೆಂಬರ್ 24ರಂದು ನ್ಯಾಯಲಯ ಮುಂದೆ ಬಂದಿತ್ತು. ವಾದ- ಪ್ರತಿವಾದ ಆಲಿಸಿದ್ದ ನ್ಯಾಯಾಧೀಶರು ಇಂದು ಆದೇಶ ಕಾಯ್ದಿರಿಸಿದ್ದರು. ಈ ಎಲ್ಲ ಬೆಳವಣಿಗೆಗಳ ನಡುವೆ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಹಿನ್ನೆಲೆ ಇಬ್ಬರು ನಟಿಯರನ್ನು ವಿಚಾರಣೆ ನಡೆಸಲು ನ್ಯಾಯಾಲಯದಿಂದ ಐದು ದಿನ ಅನುಮತಿ ಪಡೆದುಕೊಂಡಿತ್ತು. ನ್ಯಾಯಾಲಯದ ಆದೇಶದ ಹಿನ್ನೆಲೆ ರಾಗಿಣಿ ಮತ್ತು ಸಂಜನಾ ಇಬ್ಬರು ಪರಪ್ಪನ ಅಗ್ರಹಾರದಲ್ಲಿಯೇ ಇಡಿ ವಿಚಾರಣೆ ಎದುರಿಸಿದ್ದರು.