ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧನವಾಗಿರುವ ನಟಿ ಸಂಜನಾ, ರಾಗಿಣಿ, ರವಿಶಂಕರ್, ಲೂಮ್ ಪೆಪ್ಪರ್, ಪ್ರಶಾಂತ್ ರಂಕಾ, ರಾಹುಲ್ ಅವರನ್ನು ಮತ್ತೆ ಮೂರು ದಿನಗಳ ಕಾಲ ಸಿಸಿಬಿ ಪೊಲೀಸರ ಕಸ್ಟಡಿಗೆ ನ್ಯಾಯಾಲಯ ನೀಡಿದೆ. ಸೋಮವಾರದವರೆಗೂ ನಟಿ ರಾಗಿಣಿ, ಸಂಜನಾ ಸೇರಿದಂತೆ 6 ಮಂದಿ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲೇ ಉಳಿಯಲ್ಲಿದ್ದಾರೆ.
Advertisement
ಇಂದು ನಟಿ ರಾಗಿಣಿ ಮತ್ತು ಸಂಜನಾ ಅವರನ್ನು ಸಿಸಿಬಿ ಪೊಲೀಸರು ವಿಡಿಯೋ ಕಾನ್ಫರೆನ್ಸ್ ಮೂಲಕ 1ನೇ ಎಸಿಎಂಎಂ ಕೋರ್ಟ್ ಜಡ್ಜ್ ಮುಂದೆ ಹಾಜರ್ ಪಡಿಸಿದ್ದರು. ಈ ವೇಳೆ ವಿಚಾರಣೆಯನ್ನು ಮುಂದುವರಿಸಲು ಮತ್ತೆ 6 ದಿನ ಪೊಲೀಸ್ ಕಸ್ಟಡಿಗೆ ನೀಡಲು ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅಲ್ಲದೇ ಪ್ರಕರಣದಲ್ಲಿ ಇದುವರೆಗೂ ಆಗಿರುವ ತನಿಖೆಯ ಮಾಹಿತಿಯನ್ನು ಕೋರ್ಟಿಗೆ ಸಲ್ಲಿಸಿದ್ದರು. ಇದನ್ನೂ ಓದಿ: ಮತ್ತೆ 3 ದಿನ ಸಿಸಿಬಿ ಕಸ್ಟಡಿಗೆ ನಟಿ ರಾಗಿಣಿ
Advertisement
Advertisement
ಆರೋಪಿ ರವಿ ಶಂಕರ್ ನೀಡಿರುವ ಮಾಹಿತಿ ಮೇರೆಗೆ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ ಆರೋಪಿ ನೀಡಿರುವ ಹೇಳಿಕೆಗಳಿಗೆ ನಟಿ ರಾಗಿಣಿ, ಸಂಜನಾ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ವಿಚಾರಣೆಗೂ ಸಹಕಾರ ನೀಡುತ್ತಿಲ್ಲ. ಉದ್ದೇಶ ಪೂರ್ವಕವಾಗಿ ತನಿಖೆ ವಿಳಂಬ ಮಾಡುತ್ತಿದ್ದಾರೆ. ಅಲ್ಲದೇ ನ್ಯಾಯಾಂಗ ಬಂಧನಕ್ಕೆ ನೀಡಿದರೇ ಈಗಾಗಲೇ ನಡೆದಿರುವ ತನಿಖಾ ಅಂಶಗಳು ಲೀಕ್ ಹಾಗುವ ಸಾಧ್ಯತೆ ಇದೆ. ಈಗಾಗಲೇ ರಕ್ತ ಮಾದರಿ ಪರೀಕ್ಷೆಗೆ ನೀಡಲಾಗಿದ್ದು, ಆದರೆ ಆ ವರದಿ ಇನ್ನೂ ಬಂದಿಲ್ಲ ಎಂದು ಸಿಸಿಬಿ ಪೊಲೀಸರು ತಮ್ಮ ಮಾಹಿತಿಯನ್ನು ನೀಡಿದರು. ವಾದ ಪ್ರತಿವಾದ ಆಲಿಸಿ 45 ನಿಮಿಷ ಕಾಲ ತೆಗೆದುಕೊಂಡಿದ್ದ ಕೋರ್ಟ್ ಪೊಲೀಸರ ಮನವಿಯನ್ನು ಪುರಸ್ಕರಿಸಿ ಅಂತಿಮವಾಗಿ ಎಲ್ಲಾ 6 ಮಂದಿ ಆರೋಪಿಗಳನ್ನು 3 ದಿನಗಳವರೆಗೆ ಕಸ್ಟಡಿಗೆ ನೀಡಿದೆ. ಇದನ್ನೂ ಓದಿ: ನಾನು ರಾಗಿಣಿ ಒಟ್ಟಿಗೆ ಡ್ರಗ್ಸ್ ಸೇವನೆ ಮಾಡಿದ್ವಿ- ಸ್ಫೋಟಕ ಮಾಹಿತಿ ಬಿಚ್ಚಿಟ್ಟ ರವಿಶಂಕರ್
Advertisement
ನಟಿ ಸಂಜನಾ ಅವರನ್ನು 5 ದಿನ ಕಸ್ಟಡಿಗೆ ನೀಡಿದ್ದರೂ ನಾಳೆ 2ನೇ ಶನಿವಾರ ಮತ್ತು ಭಾನುವಾರ ಕೋರ್ಟಿಗೆ ರಜೆ ಇರುವುದರಿಂದ ಒಂದು ದಿನದ ಮುನ್ನವೇ ನ್ಯಾಯಾಧೀಶರ ಎದುರು ಹಾಜರು ಪಡಿಸಲಾಗಿತ್ತು. ನಟಿ ಸಂಜನಾ ಮೊಬೈಲ್ ಇನ್ನೂ ಸರಿಯಾಗಿ ರಿಟ್ರೀವ್ ಆಗಿಲ್ಲ. ಸಂಜನಾ ಆಸ್ಪತ್ರೆಯಲ್ಲಿ ಹೈಡ್ರಾಮಾ ಮಾಡಿದ್ರು. ರಕ್ತ ಮಾದರಿ ಪರೀಕ್ಷೆಗೆ ಜಗಳ ಮಾಡಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಅಸಹಕಾರ ತೋರಿ ಹೇಳಿದ್ದನೇ ಹೇಳುತ್ತಾರೆ. ನನಗೆ ಗೊತ್ತಿರೋದು ಹೇಳುತ್ತೀನಿ ಎಂದು ಹಾರಿಕೆ ಉತ್ತರ ನೀಡುತ್ತಾರೆ. ಈ ರೀತಿಯಲ್ಲಿ ಸಹಕಾರ ನೀಡಿಲ್ಲ ಎಂದರೇ ಯಾವುದೇ ತನಿಖೆ ಸಾಧ್ಯ ಇಲ್ಲ ಎಂದು ಹೇಳಿದ್ದೀರಿ. ಆದರೆ ನ್ಯಾಯಾಲಯದ ಆದೇಶಕ್ಕೂ ಗೌರವ ಕೊಡುತ್ತಿಲ್ಲ. ಮುಂಬೈನಲ್ಲಿ ಒಬ್ಬ ಆರೋಪಿಯ ಬಂಧನವಾಗಿದ್ದು, ಇತ್ತ ಡ್ರಗ್ಸ್ ಪ್ರಕರಣದಲ್ಲಿ ಇಡಿ ಈಗಷ್ಟೇ ಪ್ರಕರಣ ದಾಖಲಿಸಿಕೊಂಡಿದೆ. ತನಿಖೆ ಇನ್ನಷ್ಟು ಸಾಗಬೇಕಿದೆ. ಪ್ರಕರಣದ ತನಿಖೆ ಪಗ್ರತಿ ಹಂತದಲ್ಲಿರುವ ಕಾರಣದಿಂದ 5 ದಿನಗಳು ಕಸ್ಟಡಿಗೆ ನೀಡುವಂತೆ ಮನವಿ ಮಾಡಿತ್ತು. ಇದನ್ನೂ ಓದಿ: ‘ಗಂಡ-ಹೆಂಡತಿ’ ನಟಿ ಮದುವೆ ಸೀಕ್ರೆಟ್- ಮ್ಯಾರೇಜ್ ಆಗಿಲ್ಲ ಅಂತ ಸುಳ್ಳು ಹೇಳಿದ್ರಾ ಸಂಜನಾ?
ಇತ್ತ ರಾಗಿಣಿ ಪರ ವಕೀಲರು ತಮ್ಮ ವಾದ ಮಂಡಿಸಿ, ಈಗಾಗಲೇ 8 ದಿನ ಪೊಲೀಸ್ಟ್ ಕಸ್ಟಡಿಗೆ ನೀಡಲಾಗಿದೆ. ತನಿಖೆಗೆ ರಾಗಿಣಿ ಸಹಕರಿಸುತ್ತಿದ್ದಾರೆ. ಪ್ರಕರಣದಲ್ಲಿ ರಕ್ತ ಮಾದರಿಯ ಪರೀಕ್ಷೆ ಬಿಟ್ಟು ಬೇರೆ ಯಾವುದೇ ಪ್ರಗತಿ ಮಾಡಿಲ್ಲ. ನನ್ನ ಕಕ್ಷಿದಾರರು ಈಗಾಗಲೇ ತಮಗೇ ತಿಳಿದಿರುವ ಮಾಹಿತಿಯನ್ನು ತಿಳಿಸಿದ್ದಾರೆ. ನಿನ್ನೆ ವೈದ್ಯಕೀಯ ಪರೀಕ್ಷೆಗೂ ಸಹಕರಿಸಿದ್ದಾರೆ. ಆದ್ದರಿಂದ ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಮನವಿ ಮಾಡಿದ್ದರು. ರಾಗಿಣಿ ಅವರ ಆರೋಗ್ಯದ ಬಗ್ಗೆಯೂ ವಕೀಲರು ಕೋರ್ಟ್ ಗಮನಕ್ಕೆ ತಂದಿದ್ದರು.
ರಾಗಿಣಿ ಪರ ವಕೀಲರು ನ್ಯಾಯಾಂಗ ಬಂಧನಕ್ಕೆ ಕೋರಲು ಪ್ರಮುಖ ಕಾರಣವಿದ್ದು, ಈಗಾಗಲೇ ರಾಗಿಣಿ ಅವರು ಸಲ್ಲಿಕೆ ಮಾಡಿರುವ ಜಾಮೀನು ಅರ್ಜಿಯನ್ನು ನ್ಯಾಯಾಲಯ ಸೆ.14ಕ್ಕೆ ಮುಂದೂಡಿ, ಸಿಸಿಬಿಗೆ ನೋಟಿಸ್ ಜಾರಿ ಮಾಡಿದೆ. ಪೊಲೀಸರು ಸೋಮವಾರ ನ್ಯಾಯಾಲಯದಕ್ಕೆ ತನ್ನ ತನಿಖೆಯ ಮಾಹಿತಿಯನ್ನು ನೀಡಿ ಉತ್ತರಿಸಲಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಕಸ್ಟಡಿ ಮುಂದುವರಿದರೇ ಜಾಮೀನು ಪಡೆಯಲು ಸಂಕಷ್ಟ ಎದುರಾಗಲಿದೆ ಎಂಬ ಉದ್ದೇಶದಿಂದ ನ್ಯಾಯಾಂಗ ಬಂಧನಕ್ಕೆ ನೀಡಲು ವಕೀಲರು ಮನವಿ ಮಾಡಿದ್ದರು ಎನ್ನಲಾಗಿದೆ.