ಬೆಂಗಳೂರು: ಸ್ಯಾಂಡಲ್ವುಡ್ ನಟಿ ಮಯೂರಿ ಮಗು ಜೊತೆಗೆ ನಟ ಕಾರ್ತಿಕ್ ಜಯರಾಮ್ ಆಟವಾಡುತ್ತಾ ಕಾಲ ಕಳೆದಿದ್ದಾರೆ.
View this post on Instagram
Advertisement
ಮಯೂರಿ ಅವರ ಮಗ ಆರವ್ ಜೊತೆ ಜೆಕೆ ಖುಷಿಯಾಗಿ ಕಾಲ ಕಳೆದಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಶ್ವಿನಿ ನಕ್ಷತ್ರ ಧಾರಾವಾಹಿಯಲ್ಲಿ ಜೆಕೆ ಹಾಗೂ ಮಯೂರಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ವೃತ್ತಿಯನ್ನು ಹೊರತುಪಡಿಸಿ, ವೈಯಕ್ತಿಕ ಜೀವನದಲ್ಲಿ ಕಾರ್ತಿಕ್ ಜಯರಾಮ್ ಹಾಗೂ ಮಯೂರಿ ಆತ್ಮೀಯ ಸ್ನೇಹಿತರಾಗಿದ್ದಾರೆ.
Advertisement
View this post on Instagram
Advertisement
ಮಯೂರಿ ಅವರ ಮಗ ಆರವ್, ಕಾರ್ತಿಕ್ ಜಯರಾಮ್ ಅವರನ್ನು ಜೆಕೆ ಎಂದು ಕರೆದಿದ್ದಾನಂತೆ. ಹೀಗೆಂದು ಮಯೂರಿ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡು ಜೆಕೆ ಮಗುವನ್ನು ಮುದ್ದಾಡುತ್ತಾ, ಆಟವಾಡುತ್ತಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಲಿಂಗಾಯತರ ಧೀಮಂತ ನಾಯಕ ಬಿಎಸ್ವೈಯನ್ನು ಸಿಎಂ ಸ್ಥಾನದಿಂದ ಇಳಿಸಬೇಡಿ: ಎಂ.ಬಿ ಪಾಟೀಲ್
Advertisement
View this post on Instagram
ಮಯೂರಿ ಕೆಲವು ದಿನಗಳ ಹಿಂದೆ ಮಗ ಆರವ್ ಫೋಟೋಶೂಟ್ ಮಾಡಿಸಿದ್ದರು. ಈತ ಬಂದ ಮೇಲೆ ನಮ್ಮ ಜೀವನವೇ ಸಂಪೂರ್ಣ ಬದಲಾಗಿದೆ. ಎಂದು ಬರೆದುಕೊಂಡು ಫೋಟೋ ಹಂಚಿಕೊಂಡಿದ್ದರು. ಮಯೂರಿ ತಮ್ಮ ಮಗನ ಜೊತೆಗೆ ಕಾಲ ಕಳೆಯುತ್ತಿರುವ ಸುಂದರ ಕ್ಷಣಗಳ ಫೋಟೋವನ್ನು ಶೇರ್ ಮಾಡುತ್ತಿರುತ್ತಾರೆ. 2020 ಜೂನ್ 12 ರಂದು ತಮ್ಮ ಬಹುಕಾಲದ ಗೆಳೆಯ ಅರುಣ್ ಜೊತೆಗೆ ಮಯೂರಿ ದಾಂಪತ್ಯಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಮುದ್ದಾದ ಮಗುವಿನ ತಾಯಿಯಾದ ಮಯೂರಿ ಮಗುವಿನ ಆರೈಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.