ಬೆಂಗಳೂರು: ಸ್ಯಾಂಡಲ್ ವುಡ್ ನಟ, ರೋರಿಂಗ್ ಸ್ಟಾರ್ ಶ್ರೀಮುರಳಿ ಕಾಲಿಗೆ ಗಾಯವಾಗಿದೆ.
ಮದಗಜ ಚಿತ್ರೀಕರಣದ ಸಾಹಸ ದೃಶ್ಯ ಶೂಟಿಂಗ್ ವೇಳೆ ಮೊಣಕಾಲಿಗೆ ಗಾಯಗಳಾಗಿದೆ. 15 ದಿನ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದು, ಅವರ ಆರೋಗ್ಯ ಸುಧಾರಿಸುತ್ತಿದೆ.
Advertisement
Advertisement
ಶ್ರೀಮುರುಳಿ ಹುಟ್ಟುಹಬ್ಬದಂದು ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿತ್ತು. ಆ ಬಳಿಕ ಟೀಸರ್ ಅಭಿಮಾನಿ ಬಳಗಕ್ಕೆ ಸಖತ್ ಕಿಕ್ ಕೊಟ್ಟಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫಸ್ಟ್ ಲುಕ್ ಟೀಸರ್ ಧೂಳೆಬ್ಬಿಸಿದ್ದು, ಎರಡೇ ಗಂಟೆಯಲ್ಲಿ ಮೂರು ಲಕ್ಷಕ್ಕೂ ಅಧಿಕ ವ್ಯೂವ್ಸ್ ಪಡೆದುಕೊಂಡಿತ್ತು.
Advertisement
Advertisement
ಪಕ್ಕಾ ಮಾಸ್ ಅಂಡ್ ಆಕ್ಷನ್ ಓರಿಯೆಂಟೆಡ್ ಮದಗಜ ಸಿನಿಮಾಕ್ಕೆ ಎಸ್. ಮಹೇಶ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದು, ಉಮಾಪತಿ ಶ್ರೀನಿವಾಸ್ ಗೌಡ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರತಂಡ ವಾರಣಾಸಿ ಹಾಗೂ ಮೈಸೂರಿನಲ್ಲಿ ಚಿತ್ರೀಕರಣ ಮುಗಿಸಿದೆ. ಚಿತ್ರದಲ್ಲಿ ರೋರಿಂಗ್ ಸ್ಟಾರ್ ಗೆ ಜೋಡಿಯಾಗಿ ಸ್ಯಾಂಡಲ್ವುಡ್ ಚೆಲುವೆ ಆಶಿಕಾ ರಂಗನಾಥ್ ನಟಿಸಿದ್ದು, ನವೀನ್ ಕುಮಾರ್ ಛಾಯಾಗ್ರಹಣ ‘ಮದಗಜ’ ಚಿತ್ರಕ್ಕಿದೆ.