ಚಿಕ್ಕಬಳ್ಳಾಪುರ: ಬಡವರ ಪಾಲಿನ ಊಟಿ, ಪ್ರೇಮಿಗಳ ಪಾಲಿನ ಪ್ರೇಮಧಾಮ-ಸ್ವರ್ಗಧಾಮ ನಂದಿಗಿರಿಧಾಮದಲ್ಲಿ ರೋಪ್ ವೇ ನಿರ್ಮಾಣ ಮಾಡಲು ಸ್ಥಳ ಪರಿಶೀಲನೆ ನಡೆಸಿ ಸಾಧಕ ಭಾದಕಗಳ ಬಗ್ಗೆ ಪರಿಶೀಲಿಸುತ್ತಿರುವುದಾಗಿ ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ ತಿಳಿಸಿದ್ದಾರೆ.
Advertisement
ವಿಶ್ವವಿಖ್ಯಾತ ನಂದಿಗಿರಿಧಾಮದ ಗಾಂಧಿ ನಿಲಯದಲ್ಲಿ ಕಳೆದ ರಾತ್ರಿ ವಾಸ್ತವ್ಯ ಹೂಡಿದ್ದ ಸಚಿವರು, ಇಂದು ಬೆಳಗ್ಗೆ ಚುಮು, ಚುಮು ಚಳಿ ನಡುವೆ ನಂದಿಗಿರಿಧಾಮ ತಪ್ಪಲಿನ ಪೊಲೀಸ್ ಚೆಕ್ ಪೋಸ್ಟ್ ಬಳಿ ರೋಪ್ ವೇ ನಿರ್ಮಾಣಕ್ಕೆ ಉದ್ದೇಶಿಸಿ ಮೀಸಲಿರಿಸಿರುವ ಜಮೀನು ಪರಶೀಲನೆ ನಡೆಸಿದರು. ಈ ಸಂದರ್ಭ ಈ ಜಮೀನಿನಲ್ಲಿ ಹಲವು ವರ್ಷಗಳಿಂದ ನಾವು ಉಳುಮೆ ಮಾಡಿಕೊಂಡು ಬರುತ್ತಿದ್ದು ಈ ಜಮೀನು ತಮಗೆ ಸೇರಬೇಕು ಎಂದು ಕೆಲ ರೈತರು ಸಚಿವರಿಗೆ ಮನವಿ ಮಾಡಿಕೊಂಡರು. ಆಗ ರೈತರ ಜೊತೆ ಸಮಾಧಾನದಿಂದ ಮಾತನಾಡಿದ ಸಚಿವರು ಚರ್ಚೆ ನಡೆಸಿ ಜಮೀನು ವಿವಾದ ಬಗೆಹರಿಸೋಣ ಎಂದು ಮನವೊಲಿಸಿದರು. ಇದನ್ನೂ ಓದಿ: ನಂದಿಗಿರಿಧಾಮಕ್ಕೆ ಪ್ರವಾಸಿಗರ ಕರೆದೊಯ್ಯಲು ಬಂತು ಹೊಸ ವಾಹನ
Advertisement
Advertisement
ರೋಪ್ ವೇ ನಿರ್ಮಾಣದ ಜಾಗದಲ್ಲಿ ಪಾಕಿರ್ಂಗ್ಗೂ ಸಹ ಜಾಗ ಮೀಸಲಿಡಲಾಗಿದ್ದು, ರೋಪ್ ವೇ ನಿರ್ಮಾಣ ಮಾಡುವಲ್ಲಿ ಪ್ರಖ್ಯಾತಿ ಪಡೆದಿರುವ ಖಾಸಗಿ ಸಂಸ್ಥೆಯೊಂದು ಈಗಾಗಲೇ ನಂದಿಬೆಟ್ಟದಲ್ಲಿ ರೋಪ್ ವೇ ನಿರ್ಮಾಣ ಸಂಬಂಧ, ಸಾಧಕ ಬಾಧಕಗಳ ಬಗ್ಗೆ ಪರೀಕ್ಷೆ ನಡೆಸುತ್ತಿದೆ. ಸಾಧಕ ಬಾಧಕಗಳ ಅಂತಿಮವಾದ ನಂತರ ಟೆಂಡರ್ ಕರೆದು 2 ವರ್ಷಗಳ ಒಳಗೆ ರೋಪ್ ವೇ ಕಾರ್ಯ ಮಾಡುವುದಾಗಿ ಯೋಗೇಶ್ವರ್ ತಿಳಿಸಿದರು. ಇದೇ ವೇಳೆ ನಂದಿಬೆಟ್ಟದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ, ನೀರಿನ ಸಮಸ್ಯೆಗೆ ಪರಿಹಾರ, ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ನೆಹರು ನಿಲಯದ ಸಭಾಂಗಣದಲ್ಲಿ ಚರ್ಚೆ ನಡೆಸಿದರು. ಇದಾದ ನಂತರ ನಂದಿಗಿರಿಧಾಮದ ಮಯೂರ ಹೋಟೆಲ್ ಸರ್ಕಲ್ ಬಳಿ ಇಂದು ಮತ್ತೊಂದು ಹೋಟೆಲ್ ಆರಂಭಕ್ಕೆ ಚಾಲನೆ ನೀಡಿದರು.
Advertisement