– ಉಪಕಾರ ಸ್ಮರಣೆ ಇಲ್ಲದೆ ಹೀಗೆ ಮಾತಾಡ್ತಿದ್ದಾರೆ, ಮಾತಾಡಲಿ
ಬೆಂಗಳೂರು: ಬಿಜೆಪಿ ಸರ್ಕಾರ 2 ಸಾವಿರ ಕೋಟಿ ರೂ. ಲೂಟಿ ಮಾಡಿದೆ ಎಂದು ಕಾಂಗ್ರೆಸ್ ಆರೋಪದ ಬೆನ್ನಲ್ಲೇ ರಾಜಕೀಯ ಕೆಸರೆರೆಚಾಟ ಮತ್ತೆ ಮುನ್ನೆಲೆಗೆ ಬಂದಿದೆ. ಸಚಿವ ಸುಧಾಕರ್ ಅಧಿಕಾರದ ಅಹಂಕಾರದಿಂದ ಮಾತಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಕಿಡಿಕಾರಿದ್ದಾರೆ.
Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾಭಾರತ ಏಕೆ ತರಬೇಕು..?, ದ್ವಾಪರಯುಗದಲ್ಲಿ ನಡೆದಿರುವುದನ್ನ ಹೀಗೇಕೆ ತರಬೇಕು..? ಕೌರವರು ಆಗಲು ಕೂಡ ಇವರು ನಾಲಾಯಕ್ಕಿಲ್ಲ. ಪಾಂಡವರು ಅಂದಾಕ್ಷಣಾ ಇವರೇನೋ ಧರ್ಮರಾಯರೋ ಎಂದು ಸಿದ್ದರಾಮಯ್ಯ ವಿರೋಧ ಪಕ್ಷವನ್ನು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಡಿಕೆಶಿಯನ್ನು ದುರ್ಯೋಧನನಿಗೆ ಹೋಲಿಸಿದ ಸುಧಾಕರ್, ಅಶೋಕ್
Advertisement
ನ್ಯಾಯ, ನೀತಿ ಇದ್ದರೆ ಅದು ಮಹಾಭಾರತ ರಾಮಾಯಣದ ಪಾಠಗಳಿಂದ ಕಲಿಬೇಕಷ್ಟೆ. ನಾನು ಅಂಬೇಡ್ಕರ್, ನಾನು ಗಾಂಧಿ ಅಂತೆಲ್ಲ ಅಂದುಕೊಳ್ಳೋದಲ್ಲ. ಗಾಂಧಿ ಗಾಂಧಿಯೇ, ಅಂಬೇಡ್ಕರ್ ಅಂಬೇಡ್ಕರ್ ರೇ ಎಂದು ತಿಳಿಸಿದ್ದಾರೆ.
Advertisement
Advertisement
ಅಧಿಕಾರ ಇದೆ ಅಂತ ಬಾಯಿಗೆ ಬಂದಂಗೆ ಮಾತಾಡಬಾರದು. ನಂಗೇ ಪಾಠ ಹೇಳಿಕೊಡೋದಾ, ಅಧಿಕಾರದ ಅಹಂನಿಂದ ಸುಧಾಕರ್ ಮಾತಾಡ್ತಿರೋದು. ಅಧಿಕಾರ ಬಂದ ಮೇಲೆ ಹೀಗೆಲ್ಲ ಮಾತಾಡ್ತಿದ್ದಾರೆ. ಅಪ್ರೂವ್ ಅಂದ್ರೇನೂ, ಸ್ಯಾಂಕ್ಷನ್ ಅಂದ್ರೇನೂ, ಎಕ್ಸ್ಪೆಂಡಿಚರ್ ಅಂದ್ರೇನೂ ಎಲ್ಲ ಗೊತ್ತಿಲ್ಲ ನಂಗೆ. ಇವೆಲ್ಲ ಗೊತ್ತಿಲ್ಲದೇ ನಾನು 13 ಬಜೆಟ್ ಮಂಡಿಸಿಬಿಟ್ಟೆನಲ್ರಯ್ಯಾ? ಎಂದು ಸಿದ್ದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಕೊರೊನಾ ಹೆಸರಲ್ಲಿ ಬಿಜೆಪಿ ಸರ್ಕಾರದಿಂದ 2 ಸಾವಿರ ಕೋಟಿ ಲೂಟಿ
ಮಂಜೂರಾತಿ, ಪ್ರಸ್ತಾವನೆ, ಖರ್ಚು ಗೊತ್ತಿಲ್ಲದೆ ನಾನು ಅವನಿಗೆ ಟಿಕೆಟ್ ಕೊಡಿಸಿದ್ದು. ಅವನು ಮಂತ್ರಿ ಆಗಿದ್ದು ಯಾವಾಗ..?, ನಾನು ಮಂತ್ರಿ ಆಗಿದ್ದು ಯಾವಾಗ..?, ನಾನು ರಾಜ್ಯ ಸಚಿವ, ಕ್ಯಾಬಿನೆಟ್ ಸಚಿವ, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ ಆಗಿದ್ದೆ. ನನಗೆ ಪ್ರಸ್ತಾವನೆ, ಮಂಜೂರಾತಿ, ಖರ್ಚು ಗೊತ್ತಿಲ್ಲದೆ 13 ಬಜೆಟ್ ಮಂಡಿಸಿದ್ದೇನೆ ಅಲ್ವಾ ಎಂದು ವ್ಯಂಗ್ಯವಾಡಿದ ಸಿದ್ದರಾಮಯ್ಯ, ಉಪಕಾರ ಸ್ಮರಣೆ ಇಲ್ಲದೆ ಹೀಗೆ ಮಾತಾಡ್ತಿದ್ದಾರೆ, ಮಾತಾಡಲಿ ಎಂದು ಶಿಷ್ಯನ ವಿರುದ್ಧ ಗರಂ ಆದರು.
ಕಾರ್ಮಿಕ ಇಲಾಖೆಯಲ್ಲಿ ಸಾವಿರ ಕೋಟಿ ಅಕ್ರಮ ಆಗಿದೆ. ಆದರೆ ಸಾವಿರ ಕೋಟಿ ಖರ್ಚಾಗಿದೆ ಅಂತ ಹೇಳಿದ್ದಾರೆ. ಫುಡ್ ಪಾಕೆಟ್ ಹಂಚಿಕೆಯಲ್ಲಿ ಅಕ್ರಮ ಆಗಿದೆ. ಸಚಿವರು ಸರ್ಕಾರದ ಭಾಗ. ನಾನು ದಾಖಲೆ ಸಹಿತ ಆರೋಪ ಮಾಡಿದ್ದೇನೆ. 14 ದಾಖಲೆ ಕೊಟ್ಟು ಆರೋಪ ಮಾಡಿದ್ದು, ಆದ್ರೆ ಅವರು ಭಂಡತನದಿಂದ ಸತ್ಯ ಅಲ್ಲ ಅಂತಿದ್ದಾರೆ. ಹೀಗಾಗಿ ಈ ಸಂಬಂಧ ನ್ಯಾಯಾಂಗ ತನಿಖೆ ಮಾಡಲಿ ಅಂತ ಆಗ್ರಹಿಸುತ್ತೇನೆ. ಸತ್ಯ ಹೊರಬರಲಿ, ನ್ಯಾಯಾಂಗ ತನಿಖೆ ಮುಂದೆ ನಾವು ಎಲ್ಲವನ್ನೂ ಕೊಡ್ತೀವಿ ಎಂದು ಇದೇ ವೇಳೆ ಆಗ್ರಹಿಸಿದ್ದಾರೆ. ಇದನ್ನು ಓದಿ: 2019ರಲ್ಲಿ ಚಂದ್ರಲೋಕದಿಂದ ವೆಂಟಿಲೇಟರ್ ಬಂದಿತ್ತಾ -ಕಾಂಗ್ರೆಸ್ ಆರೋಪಕ್ಕೆ ಅಶೋಕ್ ತಿರುಗೇಟು
ತನಿಖೆಯೇ ಮಾಡಲ್ಲ ಅನ್ನೋದು ಅವರ ಭಂಡತನ ಅಲ್ವಾ?, ಈಗಲೂ ನಾನು ಸಿಟ್ಟಿಂಗ್ ಜಡ್ಜ್ ರಿಂದ ತನಿಖೆ ಮಾಡಿ ಅಂತ ಒತ್ತಾಯಿಸುತ್ತೀನಿ. ಜ್ಯುಡಿಷಿಯಲ್ ಕಮಿಷನ್ ಮಾಡಲ್ಲ ಅಂದ್ರೆ ಕಳ್ಳತನ ಮಾಡಿದ್ದಾರೆ ಅಂತ ಅರ್ಥ. ಸರ್ಕಾರ ಅವರದ್ದೇ ಅಲ್ವಾ, ಸಮ್ಮಿಶ್ರ ಸರ್ಕಾರದಲ್ಲಿ ಈ ತರ ಆಗಿದ್ದರೆ ತನಿಖೆ ಮಾಡಿಲಿ. ನಾವು ಕೊಟ್ಟ ದಾಖಲೆಗಳೆಲ್ಲ ಯಾವುವು, ಸರ್ಕಾರಿ ಡಾಕ್ಯುಮೆಂಟ್ ಗಳೇ ಅಲ್ವಾ ಎಂದು ಹೇಳಿದ್ದಾರೆ.
4 ಲಕ್ಷಕ್ಕೆ 50ಸಾವಿರ ವೆಂಟಿಲೇಟರ್ ತೆಗೆದುಕೊಂಡಿರೋದು ಸುಳ್ಳಾ..?. ಸುಳ್ಳು ಅಂತ ಹೇಳಲಿ. ಬೆಂಝ್ ಕಾರೂ ಇದೆ ಅನ್ನೋದು ಗೊತ್ತಿದೆ. ಹಾಗಾದ್ರೆ ಕೇಂದ್ರ ಸರ್ಕಾರ 4 ಲಕ್ಷಕ್ಕೆ ಏಕೆ ತಗೊಂಡಿದ್ರು..? ಅವರು ಏಕೆ 18 ಲಕ್ಷ ಕೊಟ್ಟು ತೆಗೆದುಕೊಳ್ಳಲಿಲ್ಲ..? ಮೊದಲು 324 ಕೋಟಿ ಅಂತ ಹೇಳಿದ್ದು ಏಕೆ..? ನಿನ್ನೆ 2118 ಕೋಟಿ ಖರ್ಚಾಗಿದೆ ಅಂತ ಹೇಳಿದ್ದು ಏಕೆ..? ನಾನು 4 ಸಾವಿರ ಕೋಟಿ ಆರೋಪ ಮಾಡಿದ್ಮೇಲೆ ಈಗ 2118 ಕೋಟಿ ಅಂತಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು. ಇದನ್ನು ಓದಿ: 2019ರಲ್ಲಿ ನೀವು ಮಂಗಳ ಗ್ರಹದಲ್ಲಿ ಇದ್ರಾ: ಅಶೋಕ್ಗೆ ಸಿದ್ದು ಪ್ರಶ್ನೆ