ಹುಬ್ಬಳ್ಳಿ: ದಿನದಿಂದ ದಿನಕ್ಕೆ ಕೊರೊನಾ ಸೊಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಚಿಕಿತ್ಸೆಗೆ ಆಮ್ಲಜನಕ ಕೊರತೆ ನೀಗಿಸುವುದಕ್ಕಾಗಿ ಕೇಂದ್ರ ಸ್ವಾಮ್ಯದ ಸಾರ್ವಜನಿಕ ಉದ್ಯಮಗಳಿಂದ ಧಾರವಾಡ ಜಿಲ್ಲೆಗೆ 4 ಆಮ್ಲಜನಕ ಉತ್ಪಾದನಾ ಘಟಕಗಳ ಸ್ಪಾಪನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಆಮ್ಲಜನಕ ಘಟಕ ಸ್ಥಾಪನೆ ಕುರಿತಾಗಿ ಕೇಂದ್ರ ಪೆಟ್ರೋಲಿಯಂ ಸಚಿವ ಧಮೇಂದ್ರ ಪ್ರಧಾನ್ ಅವರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಪತ್ರ ಬರೆದು ಮನವಿ ಮಾಡಿದ್ದರು. ಜೋಶಿ ಪತ್ರಕ್ಕೆ ಸ್ಪಂದಿಸಿರುವ ಕೇಂದ್ರ ಸಚಿವ ಧಮೇಂದ್ರ ಪ್ರಧಾನ್ ಕೇಂದ್ರ ಸರ್ಕಾರದ ಸ್ವಾಮ್ಯದ ಎಂಆರ್ಪಿಎಲ್, ಒಎನ್ಜಿಸಿ ಕಂಪನಿಗಳಿಗೆ ತಕ್ಷಣ ಆಮ್ಲಜನಕ ಘಟಕ ಸ್ಥಾಪನೆ ಮಾಡುವಂತೆ ತಕ್ಷಣ ಆದೇಶಿಸಿದ್ದಾರೆ. ಈ ಮೂಲಕ ಧಾರವಾಡ ಜಿಲ್ಲೆಯಲ್ಲಿ ನಾಲ್ಕು ಆಕ್ಸಿಜನ್ ಉತ್ಪಾದನೆಯ ಘಟಕಗಳ ಸ್ಥಾಪನೆಗೆ ಅನುಮೋದನೆ ನೀಡಿದ್ದಾರೆ.
Advertisement
Advertisement
ನಾಲ್ಕು ಘಟಕಗಳ ಪೈಕಿ ಮೂರು ಘಟಕಗಳನ್ನು ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಹಾಗೂ ಇನ್ನೊಂದು ಘಟಕವನ್ನು ಧಾರವಾಡ ಜಿಲ್ಲಾ ಸಿವಿಲ್ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗುವುದು. ಪ್ರತಿ ಘಟಕವು ಪ್ರತಿ ನಿಮಿಷಕ್ಕೆ 1000 ಲೀಟರ್ ಆಮ್ಲಜನಕವನ್ನು ಉತ್ಪಾದಿಸಲಿವೆ.
Advertisement
Advertisement
ಈಗಾಗಲೇ ಸಂಬಂಧಪಟ್ಟ ಆಕ್ಸಿಜನ್ ತಯಾರಿಕಾ ಘಟಕಗಳಿಗೆ ಕಾರ್ಯಾರಂಭ ಮಾಡಲು ಆದೇಶಿಸಲಾಗಿದ್ದು, ಈ ಘಟಕಗಳ ಸ್ಪಾಪನೆಯಿಂದ ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಆಮ್ಲಜನಕ ಪೊರೈಕೆಯ ಅವಲಂಬನೆ ತಪ್ಪಲಿದೆ. ಅಲ್ಲದೇ 24*7 ಸತತವಾಗಿ ಆಮ್ಲಜನಕ ದೊರೆಯಲಿದೆ.
ತ್ವರಿತವಾಗಿ ಆಮ್ಲಜನಕ ಉತ್ಪಾದನಾ ಘಟಕಗಳ ಸ್ಥಾಪನೆಗೆ ಅನುಮೋದಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ, ಹಾಗೂ ಕೇಂದ್ರ ಸಚಿವ ಧಮೇಂದ್ರ ಪ್ರಧಾನ್ ಅವರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಧನ್ಯವಾದ ತಿಳಿಸಿದ್ದಾರೆ.