ನವದೆಹಲಿ: ಭಾರತ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ದಾಂಪತ್ಯ ಜೀವನದಲ್ಲಿ ಬಿರುಕು ಎದ್ದಿದೆ. ಪತ್ನಿ ಆಸ್ಟ್ರೇಲಿಯಾದ ಬಾಕ್ಸರ್ ಆಯೇಷಾ ವಿಚ್ಛೇದನ ಪಡೆದಿರೋದಾಗಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
Advertisement
ಧವನ್ 2012ರಲ್ಲಿ ಆಯೇಷಾರನ್ನು ಮದುವೆಯಾಗಿದ್ದರು. ಬಳಿಕ ಅನ್ಯೋನ್ಯವಾಗಿಯೇ ಇದ್ದ ದಂಪತಿ, ಇದೀಗ 8 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್ಬೈ ಹೇಳಿರುವುದಾಗಿ ಆಯೇಷಾ ಇನ್ಸ್ಟಾಗ್ರಾಮ್ನಲ್ಲಿ ಬಹಿರಂಗಪಡಿಸಿದ್ದಾರೆ. ‘ವಿಚ್ಛೇದನ ಬಹಳ ಕೆಟ್ಟ ಪದ ಎಂದು ನಾನು ಭಾವಿಸಿದ್ದೇನೆ. ಆದರೆ ನನ್ನ ಜೀವನದಲ್ಲಿ ಇದು ಎರಡನೇ ಬಾರಿ ಸಂಭವಿಸಿದೆ. ಮೊದಲ ಬಾರಿ ವಿಚ್ಛೇದನೆ ಪಡೆದಾಗ ನಾನು ತುಂಬಾ ಹೆದರಿದ್ದೆ ಜೊತೆಗೆ ಸೋತ ಅನುಭವವಾಗಿತ್ತು. ಆದರೆ ನಾನು ಏನೂ ತಪ್ಪು ಮಾಡಿಲ್ಲ ಎಂಬ ಭಾವನೆ ಬಂದಿತ್ತು’ ಎಂದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ರನ್ನಂತೆ ಏರುತ್ತಿದೆ ವಿರಾಟ್ ಕೊಹ್ಲಿ ಫಾಲೋವರ್ಸ್ ಸಂಖ್ಯೆ
Advertisement
View this post on Instagram
Advertisement
ಆಯೇಷಾಗೆ ಇದು ಎರಡನೇ ವಿಚ್ಛೇದನವಾಗಿದ್ದು, ಮೊದಲ ಗಂಡನಿಂದ ದೂರವಾದ ಬಳಿಕ ಧವನ್ ಅವರನ್ನು ವರಿಸಿದ್ದರು. ಆಯೇಷಾ ಈಗಾಗಲೇ ಮೂವರು ಮಕ್ಕಳಿದ್ದು, ಮೊದಲ ಗಂಡನಿಂದ ಇಬ್ಬರು ಹೆಣ್ಣು ಮಕ್ಕಳನ್ನು ಪಡೆದಿದ್ದರು. ನಂತರ ಧವನ್ ಮತ್ತು ಆಯೇಷಾ ದಂಪತಿಗೆ ಗಂಡು ಮಗು ಜನಿಸಿ, ಮಗನಿಗೆ ಜೊರಾವರ್ ಎಂದು ಹೆಸರಿಟ್ಟಿದ್ದರು. ಕೆಲದಿನಗಳ ಹಿಂದೆ ಇವರಿಬ್ಬರು ದಾಂಪತ್ಯ ಜೀವನದ ಬಗ್ಗೆ ವರದಿಯಾಗಿತ್ತು. ಆದರೆ ಇದೀಗ ಆಯೇಷಾ ಅವರ ಪೋಸ್ಟ್ ಮೂಲಕ ಸ್ಪಷ್ಟವಾಗಿದೆ. ಇದನ್ನೂ ಓದಿ: ವಿಶೇಷ ಅತಿಥಿಯನ್ನು ಹಿಡಿದುಕೊಂಡು ಪೃಥ್ವಿ ಶಾ ಪ್ರಯಾಣ
Advertisement