– ಒಟ್ಟು 2,239 ಮಂದಿಗೆ 600 ಅಂಕ
– ದಕ್ಷಿಣ ಕನ್ನಡದ 445 ಮಂದಿಗೆ 600 ಅಂಕ
ಬೆಂಗಳೂರು: ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿದ್ದು ಎಲ್ಲ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ತಜ್ಞರ ಸಮಿತಿ ನೀಡಿದ ಶಿಫಾರಸ್ಸಿನ ಆಧಾರದಲ್ಲಿ ಫಲಿತಾಂಶವನ್ನು ಪ್ರಕಟ ಮಾಡಲಾಗಿದೆ.
Advertisement
ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಫಲಿತಾಂಶದ ಕುರಿತು ಮಾಹಿತಿ ನೀಡಿದ್ದಾರೆ. ದ್ವಿತೀಯ ಪಿಯುಸಿಯಲ್ಲಿ 38 ವಿಷಯಗಳಿವೆ. ಅಲ್ಲದೆ ಕೋವಿಡ್ ಪ್ರಕರಣಗಳು ಹೆಚ್ಚಾಗಿದ್ದ ಕಾರಣ ಪರೀಕ್ಷೆ ನಡೆಸಿಲ್ಲ. ಎಲ್ಲ ಮಕ್ಕಳನ್ನು ಪಾಸ್ ಮಾಡಲು ತೀರ್ಮಾನ ಮಾಡಲಾಯಿತು. ಅದರಂತೆ ಪ್ರಥಮ ಪಿಯುಸಿ, ಎಸ್ಎಸ್ಎಲ್ಸಿ ಯಲ್ಲಿ ಪಡೆದ ಅಂಕಗಳು, ದ್ವೀತಿಯ ಪಿಯುಸಿಯಲ್ಲಿನ ಅಸೆಸ್ಮೆಂಟ್ ಅಂಕಗಳು ಮತ್ತು ಶೇ.5ರಷ್ಟು ಗ್ರೇಸ್ ಅಂಕ ನಿಗದಿ ಮಾಡಲಾಗಿದೆ. ಯಾವುದೇ ಮಗುವಿಗೆ ಅನ್ಯಾಯ ಆಗದಂತೆ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
Advertisement
Advertisement
ಖಾಸಗಿ ಅಭ್ಯರ್ಥಿಗಳಿಗೂ ಮುಂದಿನ ದಿನಗಳಲ್ಲಿ ಪರೀಕ್ಷೆ ನಡೆಸಿ ಫಲಿತಾಂಶ ನೀಡಲಾಗುತ್ತದೆ. ತಜ್ಞರ ಸಮಿತಿ ಶಿಫಾರಸ್ಸಿನ ಆಧಾರದಲ್ಲಿ ಅಂಕಗಳ ಮಾನದಂಡವನ್ನು ಅನುಸರಿಸಿ ಫಲಿತಾಂಶ ಪ್ರಕಟ ಮಾಡಲಾಗಿದೆ. ಎಸ್ಎಸ್ಎಲ್ಸಿ ಯಲ್ಲಿ ಶೇ.45 ಅಂಕ, ವಿಷಯವಾರು ಅಂಕ ಹಾಗೂ ಪ್ರಥಮ ಪಿಯುಸಿ ಪರೀಕ್ಷೆಯ ಶೇ.45ರಷ್ಟು ಪ್ರತಿ ವಿಷಯವಾರು ಅಂಕ ಪಡೆಯಲಾಗಿದೆ. ಶೇ.10ರಷ್ಟು ದ್ವೀತಿಯ ಪಿಯುಸಿಯ ವಿದ್ಯಾರ್ಥಿ ಶೈಕ್ಷಣಿಕ ಚಟುವಟಿಕೆ ಗೆ ಇಂಟರ್ನಲ್ ಅಸೆಸ್ಮೆಂಟ್ ಅಂಕ ನೀಡಲಾಗಿದೆ. ಅದರ ಜೊತೆ ಪ್ರಥಮ ಪಿಯುಸಿ ಪಡೆದ ಅಂಕಗಳಿಗೆ ಶೇ.5 ಗ್ರೇಸ್ ಅಂಕ ನೀಡಿ ಫಲಿತಾಂಶ ನೀಡಲಾಗಿದೆ
Advertisement
ರಿಪೀಟರ್ಸ್ ಗಳನ್ನು ಪಾಸ್ ಮಾಡಲಾಗಿದೆ. ಕನಿಷ್ಠ ಉತೀರ್ಣ ಅಂಕ ಮತ್ತು ಶೇ.5ರಷ್ಟು ಗ್ರೇಸ್ ಅಂಕ ನೀಡಿ ಪಾಸ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. 3,35,138 ಬಾಲಕರು, 3,31,359 ಬಾಲಕಿಯರು ಸೇರಿ ಒಟ್ಟು 6,66,497 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಇದರಲ್ಲಿ 95,628 ಉನ್ನತ ಶ್ರೇಣಿ, 3,55,078 ಪ್ರಥಮ ದರ್ಜೆ, 1,47,055 ದ್ವಿತೀಯ ದರ್ಜೆ ಹಾಗೂ 68,729 ಜನ ತೃತೀಯ ದರ್ಜೆ ಹಾಗೂ ಜಸ್ಟ್ ಪಾಸ್ ಆಗಿದ್ದಾರೆ ಎಂದು ತಿಳಿಸಿದರು. ರಿಪೀಟರ್ಸ್ 76344 ಜನ ಉತ್ತೀರ್ಣರಾಗಿದ್ದಾರೆ.
600-600 ಅಂಕ ಪಡೆದ 5 ಜಿಲ್ಲೆಗಳ ವಿದ್ಯಾರ್ಥಿಗಳು:
ದಕ್ಷಿಣ ಕನ್ನಡ – 445
ಬೆಂಗಳೂರು ದಕ್ಷಿಣ – 302
ಬೆಂಗಳೂರು ಉತ್ತರ – 261
ಉಡುಪಿ- 149
ಹಾಸನ- 104
600-600 ಅಂಕ ಪಡೆದವರು:
ಕಲಾ ವಿಭಾಗ – 18
ವಾಣಿಜ್ಯ – 292
ವಿಜ್ಞಾನ – 1929
ಒಟ್ಟು ವಿದ್ಯಾರ್ಥಿಗಳು – 2239 ವಿದ್ಯಾರ್ಥಿಗಳು 600 ಅಂಕ