ಬೆಂಗಳೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆ ಇಂದು ನಡೆಯಿತು. ಆದರೆ ಕೋವಿಡ್-19 ಭಯದಿಂದ 27,022 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ.
ರಾಜ್ಯದಲ್ಲಿ ಒಟ್ಟು 5,95,997 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಆದರೆ 5,68,975 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆದಿದ್ದಾರೆ. ಜೊತೆಗೆ ಹೊರ ರಾಜ್ಯದ 1,889 ವಿದ್ಯಾರ್ಥಿಗಳ ಪರೀಕ್ಷೆ ಬರೆದರೆ, 18,529 ವಿದ್ಯಾರ್ಥಿಗಳು ಅಂತರ್ ಜಿಲ್ಲೆಯಲ್ಲಿ ಪರೀಕ್ಷೆ ಬರೆದಿದ್ದಾರೆ ಎಂದು ಪಿಯುಸಿ ಬೋರ್ಡ್ ಅಧಿಕೃತ ಮಾಹಿತಿ ನೀಡಿದೆ.
Advertisement
Advertisement
ಯಾವ ಜಿಲ್ಲೆ ಎಷ್ಟು ಗೈರು?:
ಕೊರೊನಾ ಭೀತಿಯಿಂದಾಗಿ ಪರೀಕ್ಷೆಗೆ ಅನೇಕ ವಿದ್ಯಾರ್ಥಿಗಳು ಗೈರಾಗಿದ್ದಾರೆ. ಅದರಲ್ಲೂ ದೇಶದಲ್ಲಿಯೇ ಕೊರೊನಾ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದ ಜಿಲ್ಲೆ ಕಲಬುರಗಿ ಹಾಗೂ ಸಿಲಿಕಾನ್ ಸಿಟಿ ಬೆಂಗಳೂರಿನ ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆ ಗೈರಾಗಿದ್ದಾರೆ.
Advertisement
ಬೆಂಗಳೂರು ಉತ್ತರ – 1646
ಬೆಂಗಳೂರು ದಕ್ಷಿಣ- 1675
ಬೆಂಗಳೂರು ಗ್ರಾಮಾಂತರ- 341
ರಾಮನಗರ- 488
ಬಳ್ಳಾರಿ- 1261
ಚಿಕ್ಕೋಡಿ- 1359
ಬೆಳಗಾವಿ- 1044
ಬಾಗಲಕೋಟೆ- 696
Advertisement
ಬಿಜಾಪುರ- 1476
ಬೀದರ್- 899
ದಾವಣಗೆರೆ- 1292
ಚಿತ್ರದುರ್ಗ- 1040
ಚಿಕ್ಕಮಗಳೂರು- 377
ಗದಗ- 669
ಹಾವೇರಿ- 457
ಧಾರವಾಡ- 917
ಕಲಬುರಗಿ- 1750
ಯಾದಗಿರಿ- 568
ಹಾಸನ- 535
ಚಿಕ್ಕಬಳ್ಳಾಪುರ- 442
ಕೋಲಾರ್- 730
ಚಾಮರಾಜನಗರ- 268
ಮೈಸೂರು- 1401
ಮಂಡ್ಯ- 682
ಉತ್ತರ ಕನ್ನಡ- 435
ಕೊಪ್ಪಳ- 463
ರಾಯಚೂರು- 1347
ದಕ್ಷಿಣ ಕನ್ನಡ- 466
ಉಡುಪಿ- 163
ಶಿವಮೊಗ್ಗ- 538
ತುಮಕೂರು- 1457
ಕೊಡಗು- 140
ಪರೀಕ್ಷೆ ಮುಕ್ತಾಯದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪಿಯುಸಿ ನಿರ್ದೇಶಕ ಡಾ.ರೇಜು, ಮಾರ್ಚ್ ನಲ್ಲಿ ನಡೆಯಬೇಕಿದ್ದ ಪರೀಕ್ಷೆ ಇಂದು ಸುಸೂತ್ರವಾಗಿ ನಡೆದಿದೆ. ಯಾವುದೇ ಸಮಸ್ಯೆ ಆಗಿಲ್ಲ. 5.95 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅಗತ್ಯ ಮುಂಜಾಗ್ರತಾ ಕ್ರಮಗಳನ್ನ ಎಲ್ಲಾ ಕೇಂದ್ರದಲ್ಲಿ ಮಾಡಿದ್ದೆವು. ಸ್ಯಾನಿಟೈಸರ್, ಮಾಸ್ಕ್, ಥರ್ಮಲ್ ಸ್ಕ್ಯಾನಿಂಗ್ ಮಾಡಿದ್ದೇವೆ. ಯಾವುದೇ ಸಮಸ್ಯೆ ಇಲ್ಲದೆ ಪರೀಕ್ಷೆ ಮುಕ್ತಾಯವಾಗಿದೆ. ಪರೀಕ್ಷೆಗೆ ಗೈರಾದವರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.