ಬಿಗ್ಬಾಸ್ ಕಾರ್ಯಕ್ರಮ ಆರಂಭವಾಗಿ ಸೋಮವಾರಕ್ಕೆ ಐವತ್ತು ದಿನ ಮುಕ್ತಾಯಗೊಂಡಿದೆ. ಸದ್ಯ ನಿನ್ನೆ ಬಿಗ್ಬಾಸ್ ಮನೆಯ ಸ್ಪರ್ಧಿಗಳಿಗೆ ‘ನೆನಪುಗಳ ಮಾತು ಮಧುರ’ ಎಂಬ ಚಟುವಟಿಕೆಯನ್ನು ನೀಡಿದ್ದರು. ಅದರ ಅನುಸಾರ ಮನೆಯ ಸದಸ್ಯರು ಇಷ್ಟು ದಿನ ದೊಡ್ಮನೆಯಲ್ಲಿ ನಡೆದ ಮರೆಯಲಾಗದ ಹಾಗೂ ಮರೆಯಲು ಇಷ್ಟಪಡುವಂತಹ ಒಂದು ಘಟನೆಗಳನ್ನು ಹಂಚಿಕೊಳ್ಳುವಂತೆ ತಿಳಿಸಿದ್ದರು.
Advertisement
ಅದರಂತೆ ಈ ವಾರ ಕ್ಯಾಪ್ಟನ್ ಆಗಿ ಮಿಂಚುತ್ತಿರುವ ಅರವಿಂದ್, ನಾನು ಹೊರಗಡೆ ಇರುವಂತೆಯೇ ಇಲ್ಲಿಯೂ ಇದ್ದೇನೆ. ಎದುರುತ್ತರ ಮಾತನಾಡುವುದಾಗಲಿ, ಯಾವುದೇ ಘರ್ಷಣೆಯಾಗುತ್ತಿದ್ದರೆ ತುಪ್ಪ ಸುರಿಯುವುದು ಬಹಳ ಕಡಿಮೆ. ಯಾರು ಏನೇ ಹೇಳಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಅದು ನನಗೆ ಎಫೆಕ್ಟ್ ಕೂಡ ಆಗುವುದಿಲ್ಲ. ಆದರೆ ಕೆಲವೊಮ್ಮೆ ಮಿತಿ ಮೀರಿ ಪ್ರಶಾಂತ್ ಹಾಗೂ ನಿಧಿಗೆ ಕೆಲವು ಮಾತನ್ನು ಆಡಿದ್ದೇನೆ. ಅದನ್ನು ಮರೆಯಲು ಇಷ್ಟ ಪಡುತ್ತೇನೆ ಎಂದು ಹೇಳುತ್ತಾರೆ.
Advertisement
Advertisement
ನಂತರ ನನಗೆ ಮರೆಯುವುದಕ್ಕೆ ಆಗದೇ ಇರುವುದು ಎಂದರೆ ರಿಂಗ್. ಅಲ್ಲದೇ ರಿಂಗ್ ಸಿಕ್ಕಿ ಅರ್ಧ ಗಂಟೆಗೆ ಕಳೆದು ಹೋಗಿತ್ತು. ಆಗ ಇಡೀ ಮನೆ ಒಟ್ಟಾಗಿ ಸೇರಿಕೊಂಡು ರಿಂಗ್ ಹುಡುಕುವುದಕ್ಕೆ ಸಹಾಯ ಮಾಡಿದ್ದು, ನನಗೆ ಯಾವತ್ತಿಗೂ ಮರೆಯುವುದಕ್ಕೆ ಆಗುವುದಿಲ್ಲ. ದಿವ್ಯಾ ಉರುಡಗಗೆ 4 ರಿಂದ 5 ಗಂಟೆ ಈ ರೀತಿ ರಿಂಗ್ ಕಳೆದು ಹೋಗಿದೆ ಎಂಬುವುದು ಗೊತ್ತೆ ಇರಲಿಲ್ಲ. ನೀವು ಮಾಡಿದ ಹೆಲ್ಪ್ ಅನ್ನು ಎಂದು ಕೂಡ ಹೇಳಲು ಆಗುವುದಿಲ್ಲ. ಏಕೆಂದರೆ ಎಲ್ಲರೂ ನಿಮ್ಮದೇ ವಸ್ತು ಕಳೆದು ಹೋಗಿರುವಂತೆ ಹುಡುಕಿದ್ರಿ. ಈ ಗಿಫ್ಟ್ ಹಾಗೂ ನೀವು ಮಾಡಿರೋ ಸಹಾಯ ನನಗೆ ಎಂದಿಗೂ ಮರೆಯುವುದಕ್ಕೆ ಆಗುವುದಿಲ್ಲ.
Advertisement
ಹಾಗೆಯೇ ಇನ್ನು ಮುಂದಿನ ಐವತ್ತು ದಿನ ಉಳಿದುಕೊಂಡರೆ ಇದೇ ರೀತಿ ಮರೆಯಲಾಗದಂತಹ ಘಟನೆಗಳು ಜಾಸ್ತಿಯಾಗಲಿ, ದಿವ್ಯಾ ಉರುಡುಗ ಅಂತೂ ಮರೆಯಲಾಗದ ಸಾಕಷ್ಟು ನೆನಪುಗಳನ್ನು ಕೊಟ್ಟಿದ್ದಾಳೆ ಎಂದು ಹೇಳುತ್ತಾ ಕಿರುನಗೆ ಬೀರಿದರು.