– ಮುಂಬೈ ಮೀರಿಸಿದ ಸಿಲಿಕಾನ್ ಸಿಟಿ
ಬೆಂಗಳೂರು: ಸ್ಯಾಂಡಲ್ವುಡ್ ನಶೆ ಗಲಾಟೆ ಮಧ್ಯೆ ಬೆಂಗಳೂರಿಗರು ಬೆಚ್ಚಿಬೀಳುವ ಸುದ್ದಿಯೊಂದು ಹೊರಬಿದ್ದಿದೆ.
ಇಡೀ ನಗರದಲ್ಲಿ ಈಗ ಕೊರೊನಾಸುರನ ಆರ್ಭಟ ಮುಂದುವರಿದಿದ್ದು, ದೇಶದಲ್ಲಿಯೇ ಬೆಂಗಳೂರು ಕೊರೊನಾ ಹಾಟ್ ಸ್ಪಾಟ್ ಆಗ್ತಿದೆ. ಈ ಮೂಲಕ ನಂಬರ್-2 ಕೊರೊನಾನಗರಿ ಎಂದೆನಿಸಿರುವ ಮುಂಬೈಯನ್ನೂ ಸಿಲಿಕಾನ್ ಸಿಟಿ ಮೀರಿಸಿದೆ.
Advertisement
Advertisement
ಕೊರೊನಾ ಕೇಸ್ ಬೆಂಗಳೂರಲ್ಲಿ ಎರಡು ಲಕ್ಷದ ಸನಿಹದಲ್ಲಿದೆ. ದಿನವೊಂದಕ್ಕೆ ಬೆಂಗಳೂರಲ್ಲಿ 3 ಸಾವಿರ ಕೇಸ್ಗಳು ದಾಖಲಾಗುತ್ತಿವೆ. 2 ಸಾವಿರಕ್ಕೂ ಅಧಿಕ ಮಂದಿಯನ್ನು ಹೆಮ್ಮಾರಿ ಬಲಿ ಪಡೆದುಕೊಂಡಿದೆ. ಹೀಗಾಗಿ ಐಟಿಬಿಟಿ ಸಿಟಿ ದೇಶದಲ್ಲಿಯೇ ಎರಡನೇ ಸ್ಥಾನಕ್ಕೆ ಬಂದು ನಿಂತಿದೆ.
Advertisement
Advertisement
ಮುಂಬೈನಲ್ಲಿ ಒಟ್ಟು ಪ್ರಕರಣ 1,73,596 ಇದ್ದರೆ ಅದರಲ್ಲಿ 1,34,066 ಮಂದಿ ಗುಣಮುಖರಾಗಿದ್ದಾರೆ. 39,530 ಸಕ್ರಿಯ ಪ್ರಕರಣಗಳಿವೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಟ್ಟು 1,80,283 ಕೊರೊನಾ ಪ್ರಕರಣಗಳಿದ್ದರೆ, 1,38,283 ಮಂದಿ ಗುಣಮುಖರಾಗಿದ್ದಾರೆ. ಇನ್ನು 42,000 ಪ್ರಕರಣಗಳಿವೆ.
ಮುಂಬೈಯನ್ನು ಬೆಂಗಳೂರು ಮೀರಿಸಿದ್ದು ಹೇಗೆ..?
ಕೊರೊನಾ ಕಂಟ್ರೋಲ್ಗೆ ಸರ್ಕಾರ ಮಾರ್ಗೋಪಾಯ ಕಂಡು ಹುಡುಕಿಲ್ಲ. ಅಲ್ಲದೆ ಯಾವುದೇ ರೀತಿ ತಲೆಕೆಡಿಸಿಕೊಂಡಿಲ್ಲ. ಮುಂಬೈನಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಬಗ್ಗೆ ನಿರಂತರ ಜಾಗೃತಿ ಮೂಡಿಸಲಾಗಿತ್ತು. ಬೆಂಗಳೂರಲ್ಲಿ ಪ್ರೈಮರಿ, ಸೆಕೆಂಡರಿ ಕಾಂಟೆಕ್ಟ್ ಟ್ರೇಸ್ಔಟ್ ನ್ನು ಸರ್ಕಾರ ಕೈಬಿಟ್ಟಿದೆ. ಬಸ್ಗಳಲ್ಲಿ ಎಷ್ಟು ಜನ ಪ್ರಯಾಣಿಸಿದ್ರೂ ನಿಗಾ ವಹಿಸುತ್ತಿಲ್ಲ.
ಸಭೆಗೆ ಎಷ್ಟು ಜನ ಹಾಜಾರಾದ್ರೂ ಕಣ್ಗಾವಲು ಇಲ್ಲ. ಮಾರ್ಕೆಟ್ಗಳಲ್ಲೆವೂ ಮುಕ್ತವಾಗಿವೆ. ಆರಂಭದಲ್ಲಿ ಕೊರೊನಾ ಅಂದ್ರೆ ಭಯ, ಆತಂಕದಲ್ಲಿದ್ದ ಜನರಿಗೆ ಈಗ ಕೊರೊನಾ ಸರ್ವೆ ಸಾಮಾನ್ಯ ಎನ್ನುವಂತಾಗಿದೆ. ಜನ ಕೂಡ ಕೊರೊನಾ ತಡೆಗಟ್ಟುವ ಸುರಕ್ಷತಾ ಮಾರ್ಗೋಪಾಯವನ್ನು ಪಾಲಿಸುತ್ತಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಕೇಸ್ ದಾಖಲಾಗುತ್ತಿವೆ.