ಗದಗ: ಸಂಗೀತದ ನಾಡು, ಹಸಿರು ಗಿರಿಗಳ ಸಾಲಿನ ಮುದ್ರಣ ಕಾಶಿಗೆ ಇದೀಗ ಪರಿಸರ ಮಾಲಿನ್ಯದಿಂದ ಮತ್ತೊಂದು ಕಿರೀಟ ಲಭಿಸಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಸಮೀಕ್ಷೆ ಪ್ರಕಾರ, ದೇಶದಲ್ಲೇ ಉತ್ತಮ ಗಾಳಿ ದೊರೆಯುವ ಸ್ಥಳದಲ್ಲಿ ಗದಗ 2ನೇ ಸ್ಥಾನ ಪಡೆದಿದೆ. ಈ ಮೂಲಕ ಹಸಿರು ಸಹ್ಯಾದ್ರಿ ತನ್ನ ಉಸಿರನ್ನೂ ದೇಶದಲ್ಲಿ ಉತ್ತುಂಗಕ್ಕೇರಿಸಿದೆ.
Advertisement
ಕೇಂದ್ರದ ಮಾಲಿನ್ಯ ನಿಯಂತ್ರಣ ಮಂಡಳಿ 131 ನಗರಗಳ ಸಮೀಕ್ಷೆ ನಡೆಸಿದ್ದು, ವಾಯುಗುಣ ಮಟ್ಟದ ಸೂಚ್ಯಂಕದ ಬುಲೆಟಿನ್ ಪ್ರಕಾರ ಮುದ್ರಣಕಾಶಿ ಗದಗ ನಗರ ದೇಶದಲ್ಲೇ 2ನೇ ಸ್ಥಾನ ಪಡೆದಿದೆ. ಜೂನ್ 15 ರಂದು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಈ ಕುರಿತು ಪ್ರಕಟನೆ ಬಿಡುಗಡೆ ಮಾಡಿದೆ. ದೇಶದ 45 ನಗರಗಳು ಸಮಾಧಾನಕರ ಹಾಗೂ 21 ನಗರಗಳು ಗಾಳಿ ಸ್ಥಿತಿ ಮಧ್ಯಮವಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ತಿಳಿಸಿದೆ.
Advertisement
Advertisement
ಗದಗದಲ್ಲಿ ಉತ್ತಮ ಗುಣಮಟ್ಟದ ಗಾಳಿ ದೊರೆಯಲು ಹಲವಾರು ಕಾರಣಗಳಿವೆ. ನಗರದಲ್ಲಿ ಇಂಗಾಲ ಕಾರ್ಬನ್ ಡೈಯಾಕ್ಸೈಡ್ ಕಡಿಮೆ ಇದೆ. ವಿಷಕಾರಿ ಹೊಗೆ ಬಿಡುವಂಥಹ ಯಾವುದೇ ಫ್ಯಾಕ್ಟರಿಗಳಿಲ್ಲ. ಸಾವಯುವ ಕೃಷಿ ಮೂಲಕ ಕೃಷಿ ಕೇತ್ರದಲ್ಲೂ ಹೆಚ್ಚು ಸಾಧನೆ ಮಾಡುತ್ತಿದೆ. ಅನೇಕ ಗಿಡಮರಗಳು, ಕೆರೆಗಳ ಅಭಿವೃದ್ಧಿ, ಮಳೆ ನೀರು ಹಿಡಿದಿಡಲು ಬಾಂದಾರ್, ಚೆಕ್ ಡ್ಯಾಮ್, ಕೃಷಿ ಹೊಂಡ, ಹೀಗೆ ನೀರಿನ ಗುಂಡಿಗಳು ಹೆಚ್ಚು ನಿರ್ಮಾಣವಾಗುತ್ತಿವೆ. ಹಸರಿಕರಣ, ಸೋಲಾರ್ ಪವರ್, ವಿಂಡ್ ಪವರ್, ಎಲೆಕ್ಟ್ರಿಕಲ್ ವಾಹನಗಳ ಬಳಕೆಗಳಿಂದ ಇಂತಹ ಗುಣಮಟ್ಟದ ಗಾಳಿ ದೊರೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ:ಮಲೆನಾಡಲ್ಲಿ ಭಾರೀ ಮಳೆ, ಮುಳುಗುವ ಭೀತಿಯಲ್ಲಿ ಹೆಬ್ಬಾಳೆ ಸೇತುವೆ, ಭೂ ಕುಸಿತ
Advertisement
ನಗರದ ತೋಂಟದಾರ್ಯ ಇಂಜನೀಯರಿಂಗ್ ಕಾಲೇಜಿನಲ್ಲಿ ನಿರಂತರ ವಾಯುಗುಣಮಟ್ಟದ ಮಾಪನ ಕೇಂದ್ರ ಅಳವಡಿಸಲಾಗಿದೆ. ಪ್ರತಿದಿನ ಇದು ಬಾರಿ ವಾಯುಗುಣಮಟ್ಟವನ್ನು ತಿಳಿಸುತ್ತದೆ. ಜೂ.15 ರಂದು ಶೇ.10 ರಷ್ಟು ಸೂಚ್ಯಂಕವನ್ನು ಮಾಪನ ಪ್ರದರ್ಶಿಸಿದೆ. ಇದೇ ಡಾಟಾವನ್ನ ಸ್ಥಳೀಯ ಪರಿಸರ ಇಲಾಖೆ ಕೇಂದ್ರ ಇಲಾಖೆಗೆ ರವಾನಿಸಿದೆ. ಕೇಂದ್ರ ಇಲಾಖೆ ಇದನ್ನು ತನ್ನ ವೆಬ್ಸೈಟ್ನಲ್ಲಿ ಹಂಚಿಕೊಂಡಿದೆ. ಇನ್ನು ಈ ಭಾಗದಲ್ಲಿ ಸಸ್ಯಕಾಶಿ ಎಂದೇ ಪ್ರಸಿದ್ಧಿ ಪಡೆದಿರೋ ಕಪ್ಪತ್ತಗುಡ್ಡ ಏಷ್ಯಾದಲ್ಲಿಯೇ ಅತಿ ಹೆಚ್ಚು ಗಾಳಿ ಬೀಸುವ ಪ್ರದೇಶ ಎಂಬ ಕೀರ್ತಿಗೆ ಪಾತ್ರವಾಗಿದೆ. ಇತ್ತೀಚಿಗೆ ಸಾಕಷ್ಟು ಗಿಡಮರಗಳನ್ನು ಬೆಳೆಸುವುದರ ಜೊತೆಗೆ ಸೋಲಾರ್ ಹಾಗೂ ಎಲೆಕ್ಟ್ರಿಕಲ್ ವಸ್ತುಗಳನ್ನು ಬಳಸುತ್ತಿರುವುದರಿಂದ ನಮ್ಮ ನಗರ ಉತ್ತಮ ಗುಣಮಟ್ಟದ ಗಾಳಿ ಹೊಂದಿದೆ. ಇಂತಹ ನಗರದಲ್ಲಿ ನಾವು ವಾಸಿಸುತ್ತಿರುವುದಕ್ಕೆ ಹೆಮ್ಮೆ ಅನಿಸುತ್ತಿದೆ ಎಂದು ಪರಿಸರ ಪ್ರೇಮಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಲಾಕ್ಡೌನ್ ಕಾರಣವೋ ಅಥವಾ ಇಲ್ಲಿನ ಹಸಿರು ಸಹ್ಯಾದ್ರಿಯ ಕಪ್ಪತ್ತಗುಡ್ಡದ ಕಾರಣವೋ ಗೊತ್ತಿಲ್ಲ. ಗದಗ ನಗರ ದೇಶದಲ್ಲಿ ಉತ್ತಮ ಗಾಳಿ ನೀಡುವದರಲ್ಲಿ ಅತ್ಯುನ್ನತ ಸ್ಥಾನವನ್ನು ಪಡೆದುಕೊಂಡಿದೆ. ಆದರೆ ಈ ಶುದ್ಧ ಗಾಳಿಯನ್ನು ನಗರದ ಜನತೆ ಅಶುದ್ಧ ಮಾಡದ ಹಾಗೆ ಇದೇ ರೀತಿ ಕಾಪಾಡಿಕೊಂಡು ಹೋಗಬೇಕು. ಪರಿಸರಕ್ಕೆ ಮಾರಕವಾದ ಚಟುವಟಿಕೆಗಳನ್ನು ನಿಲ್ಲಿಸಿ ಜಿಲ್ಲೆಗೆ ಉಸಿರಾಗಿರೋ ಹಸಿರನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋದರೆ ಸಾಕು ಎಂಬುವುದು ಪರಿಸರ ತಜ್ಞರ ಅಭಿಪ್ರಾಯವಾಗಿದೆ. ಇದನ್ನೂ ಓದಿ: ಕೆಎಲ್ಇ ಆಸ್ಪತ್ರೆಯಿಂದ ಲಸಿಕೆ ಖರೀದಿಸಿ ಯುವಕರಿಗೆ ಉಚಿತವಾಗಿ ಹಂಚಿದ ಗಣೇಶ್ ಹುಕ್ಕೇರಿ