– ದಕ್ಷಿಣ ಭಾರತದಲ್ಲಿ ಚಳಿಗಾಲದಲ್ಲೂ ಜೋರು ಮಳೆ
ನವದೆಹಲಿ: ಪ್ರಸ್ತುತ ದೇಶದಲ್ಲಿ ಚಿತ್ರ-ವಿಚಿತ್ರ ಹವಾಮಾನ ಇದೆ. ಇದ್ದಕ್ಕಿದ್ದಂತೆ ಮೋಡ ಕವಿದ ವಾತಾವರಣವಿದ್ದರೆ, ನೋಡ ನೋಡ್ತಿದ್ದಂತೆ ಮಳೆ ಸುರಿದೇ ಬಿಡುತ್ತಿದೆ. ದೇಶದ ಒಂದೊಂದು ಭಾಗದಲ್ಲಿ ಒಂದೊಂದು ವೆದರ್ ಕಂಡುಬರುತ್ತಿದೆ.
Advertisement
ಕೊರೊನಾ ವೈರಸ್, ಹಕ್ಕಿಜ್ವರದ ಬಳಿಕ ಇದೀಗ ಹವಾಮಾನ ವೈಪರೀತ್ಯದ ಬಗ್ಗೆ ಆತಂಕ ಎದುರಾಗಿದೆ. ದೇಶದಲ್ಲಿ ದಿಢೀರ್ ಹವಾಮಾನ ಬದಲಾಗುತ್ತಿದೆ. ಹಿಮಾಲಯದ ತಪ್ಪಲಿನಲ್ಲಿ ಹೆಪ್ಪುಗಟ್ಟುವಂತಹ ಹಿಮ, ಉತ್ತರ ಭಾರತದಲ್ಲಿ ಚಳಿ ಜೊತೆಗೆ ಮಳೆಯಾಗುತ್ತಿದೆ. ಇನ್ನು ದಕ್ಷಿಣ ಭಾರತದಲ್ಲಿ ಚಳಿಗಾಲದಲ್ಲಿ ಕೂಡ ವರ್ಷಧಾರೆಯಾಗುತ್ತಿದೆ. ಹೀಗೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಜನ ದಿಗ್ಭ್ರಾಂತರಾಗಿದ್ದಾರೆ.
Advertisement
Advertisement
ಹಿಮಪಾತ ರಾಜ್ಯಗಳು: ಜಮ್ಮು & ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ್ ಆಗಿದ್ದು, ಹಿಮಾಲಯದಲ್ಲಿ ಭಾರೀ ತಾಪಮಾನ ಕುಸಿತದಿಂದಾಗಿ ಈ ರಾಜ್ಯಗಳಲ್ಲಿ 60 ಸೆಂ.ಮೀ ಗಿಂತ ಹೆಚ್ಚಿನ ಹಿಮಪಾತವಾಗಿದೆ.
Advertisement
ಹಿಮ &ಮಳೆ ರಾಜ್ಯಗಳು: ದೆಹಲಿ, ಪಂಜಾಬ್, ಹರ್ಯಾಣ, ಅರುಣಾಚಲ ಪ್ರದೇಶ, ರಾಜಸ್ಥಾನ. ಅರುಣಾಚಲ ಪ್ರದೇಶದಲ್ಲಿ ಹಿಮಮಿಶ್ರಿತ ಮಳೆಯಾಗಿದೆ. ಹವಾಮಾನ ಇಲಾಖೆ ಪ್ರಕಾರ, ಇಂದಿನಿಂದ ಪಶ್ಚಿಮ ಹಿಮಾಲಯನ್ ಪ್ರದೇಶದ ಮೇಲೆ ಹೊಸ ಪಾಶ್ಚಿಮಾತ್ಯ ಅಡಚಣೆ ಉಂಟಾಗುವ ಸಾಧ್ಯತೆಯಿದೆ. ಇದರ ಪರಿಣಾಮವಾಗಿ ವಾಯುವ್ಯ ಭಾರತದಲ್ಲಿ ಮುಂದಿನ 2-3 ದಿನಗಳಲ್ಲಿ ಕನಿಷ್ಠ ನಿರೀಕ್ಷಿಸಿದೆ. ಅದಾಗ್ಯೂ ನಂತರದ ಎರಡು ದಿನಗಳಲ್ಲಿ ಪಂಜಾಬ್, ಹರಿಯಾಣ, ಚಂಡೀಗಡ್, ದೆಹಲಿ ಮತ್ತು ಪಶ್ಚಿಮ ರಾಜಸ್ಥಾನದ ಕೆಲವು ಭಾಗಗಳಲ್ಲಿ ಕ್ರಮೇಣ ಹವಾಮಾನ 2-4 ರಷ್ಟು ಕುಸಿಯಲಿದೆ.
ಚಳಿಗಾಲದಲ್ಲಿ ಮಳೆ: ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರ ಪ್ರದೇಶ. ಬಂಗಾಳಕೊಲ್ಲಿಯಿಂದ ಆಗ್ನೇಯ ಮಾರುತಗಳು ಬೀಸ್ತಿರೋ ಕಾರಣ ದಕ್ಷಿಣ ಭಾರತದಲ್ಲಿ 5 ದಿನಗಳವರೆಗೆ ವ್ಯಾಪಕ ಮಳೆ. ಅದು ಗುಡುಗು ಸಹಿತ ಮಳೆ ಆಗಲಿದೆ. ಈ ಅನಿರೀಕ್ಷಿತ ಮಳೆಗೆ ಕಾರಣ ಏನಂದ್ರೆ ಚಳಿಗಾಲದಲ್ಲಿ ಸಾಮಾನ್ಯವಾಗಿ ಜನವರಿ ಮತ್ತು ಫೆಬ್ರವರಿ ಅವಧಿಯಲ್ಲಿ ಪೂರ್ವ ದಿಕ್ಕಿನಿಂದ ಗಾಳಿ ಬೀಸುವುದರಿಂದ ಆಗಾಗ ಮಳೆ ಸುರಿಯುತ್ತದೆ. ಬಂಗಾಳ ಕೊಲ್ಲಿಯ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಪ್ರಬಲವಾಗಿರೋದ್ರಿಂದ ಮಳೆಯಾಗುತ್ತಿದೆ. ರಾತ್ರಿ ಹಾಗೂ ಹಗಲು ತಾಪಮಾನ ಒಂದೇ ಆಗಿರೋದ್ರಿಂದ ಚಳಿಯ ಪ್ರಮಾಣ ಹೆಚ್ಚಿದೆ. ತಮಿಳುನಾಡಿನ ಮೀನಂಬಾಕಂನಲ್ಲಿ 100 ಮಿಲಿ ಮೀಟರ್ ಮಳೆಯಾಗಿದೆ.