– ಜನರು ಬೈದರೂ ಅವರು ತಿರುಗಿ ಮಾತನಾಡಲಿಲ್ಲ
– ಇಂದಿರಾಗಾಂಧಿಗೆ ಜನ ಬೈದಿದ್ದರೆ ಸಂತಾನ ಇರುತ್ತಿರಲಿಲ್ಲ
ಶಿವಮೊಗ್ಗ: ದೇಶದಲ್ಲಿ ಜನರಿಂದ ಅತಿಹೆಚ್ಚು ಬೈಸಿಕೊಂಡ ಪ್ರಧಾನಿ ಎಂದರೆ ನರೇಂದ್ರ ಮೋದಿ ಆಗಿದ್ದಾರೆ. ಜನರು ಬೈದರೂ ಅವರು ತಿರುಗಿ ಮಾತನಾಡಲಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಶಿವಮೊಗ್ಗದಲ್ಲಿ ಹೇಳಿದ್ದಾರೆ.
Advertisement
ಶಿವಮೊಗ್ಗದಲ್ಲಿ ಜನಸೇವಕ ಸಮಾವೇಶದಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ದೇಶದಲ್ಲಿ ಜನರಿಂದ ಅತಿಹೆಚ್ಚು ಬೈಸಿಕೊಂಡ ಪ್ರಧಾನಿ ಎಂದರೆ ನರೇಂದ್ರ ಮೋದಿ ಅವರಾಗಿದ್ದಾರೆ. ಜನರು ಬೈದರೂ ಅವರು ತಿರುಗಿ ಮಾತನಾಡಿಲ್ಲ. ಅದೇ ಇಂದಿರಾಗಾಂಧಿ ಅವರಿಗೆ ಏನಾದ್ರೂ ಜನರು ಬೈದಿದ್ದರೇ ಅವರ ಸಂತಾನ ಉಳಿಯುತ್ತಿರಲಿಲ್ಲ ಎಂದು ಕ್ರಾಂಗ್ರಸ್ ವಿರುದ್ಧ ವಾಗ್ದಾಳಿ ನಡೆಸಿದರು.
Advertisement
Advertisement
ಕಾಂಗ್ರೆಸ್ ಮೋದಿ ಅವರ ವಿರುದ್ಧ ಅಪ ಪ್ರಚಾರ ಮಾಡುವುದರಲ್ಲೇ ತೊಡಗಿದೆ. ಕೃಷಿ ಕಾಯ್ದೆ, ಎಪಿಎಂಸಿ ಕಾಯ್ದೆ ವಿರುದ್ಧ ಅಪ ಪ್ರಚಾರ ನಡೆಸುತ್ತಿದೆ. ಸಿಎಎ, ಎನ್ಆರ್ಸಿ ವಿರುದ್ಧ ಅಪ ಪ್ರಚಾರ ನಡೆಸುತ್ತಿದೆ ಎಂದು ಕಿಡಿಕಾರಿದರು.
Advertisement
ನಿನ್ನೆಯ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ಗಮನಿಸಿದ್ದೇವೆ. ರೈತರ ಹೋರಾಟದ ಪರವಾಗಿರುವ ಅಂಶಗಳನ್ನು ಉಲ್ಲೇಖಿಸಲಾಗಿದೆ. ಸಂವಿಧಾನ ವಿರೋಧಿಯಾಗಿದ್ದರೆ ಮಾತ್ರ ತಡೆಯಬೇಕು. ಮಧ್ಯಂತರ ಆದೇಶವನ್ನು ನಾವು ಸ್ವಾಗತಿಸುತ್ತೇವೆ. ಮಸೂದೆಗಳನ್ನು ವಾಪಾಸ್ ತೆಗೆದುಕೊಳ್ಳಿ ಎಂದು ಹೇಳುತ್ತಿದ್ದಾರೆ. ಯಾವ ಅಂಶಗಳು ರೈತ ವಿರೋಧಿಯಾಗಿವೆ ತಿಳಿಸಿ. ರೈತರು ಹಾಕಿದ್ದ ಬೇಡಿಯನ್ನು ಈ ಕಾಯ್ದೆ ಮೂಲಕ ಪ್ರಧಾನಮಂತ್ರಿ ತೆಗೆಯಲು ಹೊರಟಿದ್ದಾರೆ. ಇದರಲ್ಲಿ ರೈತ ವಿರೋಧಿಯಾಗಿರುವ ಒಂದಂಶವೂ ಇಲ್ಲ. ಸುಧಾರಣೆಯನ್ನು ತಡೆಯಲು ಕೆಲವರು ಬಯಸುತ್ತಿದ್ದಾರೆ ಎಂದರು.
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿದ ಇವರು ನೂತನವಾಗಿ ಸಚಿವರಾಗುತ್ತಿರುವವರಿಗೆ ಸ್ವಾಗತಿಸುತ್ತೇನೆ. ಸಚಿವ ಸ್ಥಾನ ನೀಡುವುದು ಮುಖ್ಯಮಂತ್ರಿಯವರ ಪರಮಾಧಿಕಾರವಾಗಿದೆ. ಬಹಳ ಜನರು ಅನುಭವಿಗಳು, ಯೋಗ್ಯತೆ ಇರುವವರು, ಹಿರಿಯರು, ಉತ್ಸಾಹಿಗಳು ಸಚಿವರಾಗುವವರು ಇದ್ದಾರೆ. ಈಗ ಯೋಗ ಇರುವರಿಗೆ ಸಚಿವ ಸ್ಥಾನ ಸಿಗುತ್ತದೆ. ಯೋಗ್ಯತೆ ಇರುವವರು ಕೂಡ ಹಲವರಿದ್ದಾರೆ ಎಂದು ನುಡಿದರು.