ನವದೆಹಲಿ: ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದ್ದು, ಇದೀಗ ಸೋಂಕಿತರ ಸಂಖ್ಯೆ 63 ಲಕ್ಷಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಯಲ್ಲಿ 86,821 ಮಂದಿಯಲ್ಲಿ ಮಹಾಮಾರಿ ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 63,12,585ಕ್ಕೆ ಏರಿಕೆಯಾಗಿದೆ. ಒಂದೇ ದಿನ 1,181 ಮಂದಿ ಕೊರೊನಾಗೆ ಬಲಿಯಾಗಿದೆ. ಇದುವರೆಗೂ ದೇಶದಲ್ಲಿ 98,678 ಮಂದಿ ಸಾವಿಗೀಡಾಗಿದ್ದಾರೆ. 63 ಲಕ್ಷ ಸೋಂಕಿತರ ಸಂಖ್ಯೆಯಲ್ಲಿ ,40,705 ಸಕ್ರಿಯ ಪ್ರಕರಣಗಳೀದ್ದರೆ, 52,73,202 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
Advertisement
India's #COVID19 tally crosses 63-lakh mark with a spike of 86,821 new cases & 1,181 deaths reported in last 24 hours.
Total case tally stands at 63,12,585 including 9,40,705 active cases, 52,73,202 cured/discharged/migrated & 98,678 deaths: Ministry of Health & Family Welfare pic.twitter.com/uIBUSidrCu
— ANI (@ANI) October 1, 2020
Advertisement
ದೇಶದಲ್ಲಿ ನಿನ್ನೆ ಒಂದೇ ದಿನ 14,23,052 ಮಂದಿಯನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸಲಾಗಿದೆ. ಈ ಮೂಲಕ ಇದೂವರೆಗೂ 7,56,19,781 ಮಂದಿಗೆ ಕೋವಿಡ್ 19 ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.
Advertisement
Advertisement
ಕೋವಿಡ್ 19 ಮಹಾಮಾರಿಗೆ ಭಾರತ ಮಾತ್ರವಲ್ಲ ವಿಶ್ವದ ಇತರ ರಾಷ್ಟ್ರಗಳು ಕೂಡ ತತ್ತರಿಸಿ ಹೋಗಿವೆ. ಇಡೀ ಜಗತ್ತಿನಲ್ಲಿ ಇದುವರೆಗೆ 10,18,789 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಸೋಂಕಿತರ ಒಟ್ಟು ಸಂಖ್ಯೆ 3,41,56,587ರಷ್ಟಿದ್ದು, 2,54,27,160 ಸೋಂಕಿತರು ಗುಣಮುಖರಾಗಿದ್ದಾರೆ.
COVID-19 Testing Update. For more details visit: https://t.co/dI1pqvXAsZ @MoHFW_INDIA @DeptHealthRes #ICMRFIGHTSCOVID19 #IndiaFightsCOVID19 #CoronaUpdatesInIndia #COVID19 pic.twitter.com/s89tlDAmRl
— ICMR (@ICMRDELHI) October 1, 2020