ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಕಳೆದ 24 ಗಂಟೆಯಲ್ಲಿ 52,972 ಮಂದಿಯಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 18,03,696ಕ್ಕೆ ಏರಿಕೆಯಾಗಿದೆ.
Advertisement
ಭಾನುವಾರ ಒಂದೇ ದಿನ 771 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ದೇಶದಲ್ಲಿ 5,79,357 ಸಕ್ರಿಯ ಪ್ರಕರಣಗಳಿದ್ದು, 1,186,203 ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ ಇದೂವರೆಗೂ 38,135 ಮಂದಿ ಹೆಮ್ಮಾರಿ ಕೊರೊನಾ ವೈರಸ್ಗೆ ಬಲಿಯಾಗಿದ್ದಾರೆ.
Advertisement
Single-day spike of 52,972 positive cases & 771 deaths in India in the last 24 hours.
India's COVID19 tally rises to 18,03,696 including 5,79,357active cases, 1,186,203 cured/discharged/migrated & 38,135 deaths: Health Ministry pic.twitter.com/OKfjsgwyC9
— ANI (@ANI) August 3, 2020
Advertisement
ಮಹಾರಾಷ್ಟ್ರ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಅತೀ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಜೊತೆಗೆ ಅಸ್ಸಾಂ ಮತ್ತು ಕರ್ನಾಟಕ ರಾಜ್ಯದಲ್ಲಿಯೂ ಸೋಂಕು ವೇಗವಾಗಿ ಹರಡುತ್ತಿದೆ. ಭಾರತದಲ್ಲಿ ಚೇತರಿಕೆ ಪ್ರಮಾಣ ಹೆಚ್ಚಾಗುತ್ತಿದ್ದು, ಶೇ.65.8 ರಷ್ಟು ಮಂದಿ ಗುಣಮುಖರಾಗುತ್ತಿದ್ದಾರೆ. ಸದ್ಯ ದೇಶದಲ್ಲಿ ಅನ್ಲಾಕ್ 3.O ನಡೆಯುತ್ತಿದೆ.