ತಿರುವನಂತಪುರಂ: ಬೆಂಗಳೂರು ಮೂಲದ ಉದ್ಯಮಿಯೊಬ್ಬರು ಕೇರಳದ ದೇವಾಲಯವೊಂದರ ಜೀರ್ಣೋದ್ಧಾರಕ್ಕೆ 500 ಕೋಟಿ ರೂ. ದೇಣಿಗೆ ನೀಡಿದ್ದಾರೆ.
ಕೊಚ್ಚಿ ನಗರದಿಂದ ಸುಮಾರು 10 ಕಿಮೀ ದೂರದಲ್ಲಿರುವ ಎರ್ನಾಕುಲಂ ಜಿಲ್ಲೆಯ ಚೊಟ್ಟಾನಿಕ್ಕರ ಭಗವತಿ ದೇವಸ್ಥಾನಕ್ಕೆ ಭಾರೀ ದೇಣಿಗೆ ಲಭಿಸಿದ್ದು, ದೇವಾಲಯದ ನಿರ್ವಹಣೆ ಮಾಡುತ್ತಿರುವ ಕೊಚ್ಚಿಯ ದೇವಸ್ವಂ ಮಂಡಳಿ ದೇಣಿಗೆ ಪಡೆಯಲು ಕೇರಳ ಹೈಕೋರ್ಟ್ ಅನುಮೋದನೆಯನ್ನು ಪಡೆಯಲು ನಿರ್ಧರಿಸಿದೆ.
Advertisement
Advertisement
ಗಣ ಶ್ರವಣ್ (ಸ್ವಾಮಿಜಿ) ಕಂಪನಿಗಳ ಗಣ ಶ್ರವಣ್ ಅವರು ದೇವಸ್ಥಾನಕ್ಕೆ 500 ಕೋಟಿ ರೂ. ದೇಣಿಗೆ ನೀಡುತ್ತಿದ್ದು, ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ತಮ್ಮ ಜೀವನ ಹಾಗೂ ವ್ಯವಹಾರದಲ್ಲಿ ಒಳ್ಳೆಯದಾಗಿದೆ. ಆದ್ದರಿಂದ ಕಾಣಿಕೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
Advertisement
ದೇವಸ್ವಂ ಮಂಡಳಿಯ ಕಾರ್ಯದರ್ಶಿ ವಿಎ ಶೀಜಾ ಮಾತನಾಡಿ, ಈ ಕುರಿತು ಮಂಡಳಿ ಇನ್ನೂ ಅಂತಿಮ ತೀರ್ಮಾನ ಮಾಡಬೇಕಿದೆ. ಕಾನೂನು ಅಭಿಪ್ರಾಯವನ್ನು ಪಡೆಯುತ್ತಿದ್ದೇವೆ. ನಿಯಮಗಳ ಅನ್ವಯ ದೇವಸ್ಥಾನ ಅಭಿವೃದ್ಧಿಗಾಗಿ 20 ಲಕ್ಷ ರೂ. ಹೆಚ್ಚು ದೇಣಿಗೆ ಪಡೆಯಲು ಅನುಮತಿ ಪಡೆಯಬೇಕಿದೆ. ಭವಿಷ್ಯದಲ್ಲಿ ಯಾವುದೇ ಕಾನೂನು ಸಮಸ್ಯೆ ಎದುರಾಗದಂತೆ ಮಂಡಳಿ ನ್ಯಾಯಾಲಯದ ಅನುಮತಿಯನ್ನು ಪಡೆಯಲು ನಿರ್ಧರಿಸಿದೆ ಎಂದು ವಿವರಿಸಿದ್ದಾರೆ.
Advertisement
46 ವರ್ಷದ ಶ್ರವಣ್ ಅವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯರಾಗಿದ್ದು, ಸುಮಾರು 20 ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಆದರೆ ಆ ವೇಳೆ ಅವರಿಗೆ ವ್ಯವಹಾರದಲ್ಲಿ ಹೆಚ್ಚು ಲಾಭವಿರಲಿಲ್ಲ. ಕಳೆದ ನಾಲ್ಕು ವರ್ಷಗಳ ಹಿಂದೆ ಗುರುಗಳ ಸಲಹೆಯಂತೆ ಚೊಟ್ಟಾನಿಕ್ಕರ ಭಗವತಿ ದೇವಸ್ಥಾನಕ್ಕೆ ನೀಡಿದ್ದರು. ಆ ಬಳಿಕ ಅವರ ವ್ಯವಹಾರದಲ್ಲಿ ಹೆಚ್ಚಿನ ಲಾಭವನ್ನು ಪಡೆದುಕೊಂಡಿದ್ದಾರೆ.
ಸದ್ಯ ಶ್ರವಣ್ ಅವರು ಮುಂಬೈ ಮೂಲದ ಸಂಸ್ಥೆಯೊಂದಿಗೆ ಚಿನ್ನ, ವಜ್ರ ಮತ್ತು ಅಪರೂಪದ ಲೋಹಗಳ ವ್ಯಾಪಾರ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಆಭರಣದ ಮಳಿಗೆಯನ್ನು ಹೊಂದಿದ್ದಾರೆ. ಅಲ್ಲದೇ ಕಟ್ಟಣ ನಿರ್ಮಾಣ ಹಾಗು ಒಳಾಂಗಣ ವಿನ್ಯಾಸ ಕ್ಷೇತ್ರದಲ್ಲೂ ವ್ಯವಹಾರ ಮಾಡುತ್ತಿದ್ದಾರೆ.
ದಶಕಗಳಷ್ಟು ಹಳೆಯದಾದ ಚೊಟ್ಟಾನಿಕ್ಕರ ಭಗವತಿ ದೇವಸ್ಥಾನ ಕೇರಳದ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದ್ದು, ಪುರಾಣಗಳ ಹಿನ್ನೆಲೆಯನ್ನು ಹೊಂದಿದೆ. ಸದ್ಯ ದೇವಸ್ಥಾನವನ್ನು ಎರಡು ಹಂತಗಳಲ್ಲಿ ಜೀರ್ಣೋದ್ಧಾರ ಮಾಡಲು ನಿರ್ಧರಿಸಲಾಗಿದ್ದು, ಗೋಪುರ, ಮಂಟಪಗಳ ನವೀಕರಣ, ಒಳಚರಂಡಿ ಸಂಸ್ಕರಣಾ ಘಟಕ ಸೇರಿದಂತೆ ಅತಿಥಿ ಗೃಹಗಳ ನಿರ್ಮಾಣ ಕಾರ್ಯ ಮೊದಲ ಹಂತದಲ್ಲಿ ನಡೆಯಲಿದೆ. ಕುರಿತ ವಿವರವಾದ ಮಾಸ್ಟರ್ ಪ್ಲ್ಯಾನ್ ಮತ್ತು ವಿನ್ಯಾಸಗಳನ್ನು ಸಿದ್ಧಪಡಿಸಲಾಗಿದ್ದು, 2ನೇ ಹಂತದಲ್ಲಿ ದೇವಸ್ಥಾನದ ಹತ್ತಿರದ ಪ್ರದೇಶಗಳ ರಸ್ತೆ ಅಭಿವೃದ್ಧಿಯನ್ನು ಹೊಂದಿದೆ. ಇದಕ್ಕೆ ಸ್ಥಳೀಯ ಸಂಸ್ಥೆಗಳ ಅಗತ್ಯವಿದೆ ಎಂದು ವಾಸ್ತುಶಿಲ್ಪಿ ಅಜಿತ್ ಹೇಳಿದ್ದಾರೆ.