– ಕದಿಯುವಾಗ ಭಯ ಆಗಲಿಲ್ಲವಂತೆ
ಲಕ್ನೋ: ನಾಲ್ವರು ವಿಗ್ರಹ ಕಳ್ಳರನ್ನ ಲಕ್ನೋ ಪೊಲೀಸರು ಬಂಧಿಸಿದ್ದು, ಕಳ್ಳತ ಮಾಡಿದ್ದ ಮೂರ್ತಿಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಕಳ್ಳತನ ಮಾಡಿದ ನಂತರ ನಮ್ಮಲ್ಲಿ ಒಂದು ರೀತಿಯ ದೇವರ ಭಯ ಶುರವಾಯ್ತು. ಹಾಗಾಗಿ ಕದ್ದ ಯಾವ ದೇವರ ವಿಗ್ರಹಗಳನ್ನ ಮಾರಾಟ ಮಾಡಲಿಲ್ಲ ಎಂದು ಕಳ್ಳರು ಪೊಲೀಸರ ಮುಂದೆ ಹೇಳಿದ್ದಾರೆ.
Advertisement
ರಘುವೀರ್ ಪಾಂಡೆ, ರಾಹಿಲ್, ಅಬ್ದುಲ್ ಶಾಮಿಲ್ ಮತ್ತು ಶರಾಫತ್ ಮಿಯಾ ಬಂಧಿತರು. ಲಕ್ನೋ ಪಿಜಿಐ ಕ್ಷೇತ್ರದಲ್ಲಿ ಮೂರು ವಿಗ್ರಹಗಳ ಕಳ್ಳತನ ನಡೆದಿತ್ತು. ಎಲ್ಲ ಕಳ್ಳತನದಲ್ಲಿ ಸಾಮ್ಯತೆ ಇದ್ದಿದ್ದರಿಂದ ಒಂದೇ ಗ್ಯಾಂಗ್ ಎಂಬುದನ್ನ ಅರಿತ ಪೊಲೀಸರು ಕೆಲವೇ ದಿನಗಳಲ್ಲಿಯೇ ಪ್ರಕರಣ ಭೇದಿಸಿದ್ದಾರೆ. ಬಂಧಿತರಿಂದ ಚಿನ್ನಭರಣ, ನಗದು ಮತ್ತು ಹಲವು ದೇವರ ವಿಗ್ರಹಗಳನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
Advertisement
Advertisement
ನವೆಂಬರ್ 24ರಿಂದ ಡಿಸೆಂಬರ್ 20ರವರೆಗೆ ನನ್ನ ಸಹಚರರ ಜೊತೆ ಸೇರಿ ನ್ಯಾಯಾಧೀಶ ಶ್ರೇಯಸ್ ನಿರಂಜನ್ ಮನೆಯಿಂದ ನಗದು, ಚಿನ್ನಾಭರಣ, ಹಿತ್ತಾಳೆ ಮತ್ತು ಕೆಲ ದೇವರ ವಿಗ್ರಗಹಳನ್ನ ಕಳ್ಳತನ ಮಾಡಿದೆ. ನಿವೃತ್ತ ಅಧಿಕಾರಿಯೊಬ್ಬರ ಮನೆಯಲ್ಲಿ 8 ಲಕ್ಷ ರೂ ಸೇರಿದಂತೆ ಚಿನ್ನಾಭರಣ ಸಹ ಕಳ್ಳತನ ಮಾಡಿದೆ. ವೃಂದಾವನದ ಕಾಲೋನಿಯಲ್ಲಿ ಕಳ್ಳತನ ಮಾಡಿದೆ ಎಂದು ಪ್ರಮುಖ ಆರೋಪಿ ರಘುವೀರ್ ಪಾಂಡೆ ಪೊಲೀಸರ ಮುಂದೆ ಹೇಳಿದ್ದಾನೆ.