ಕೋಲ್ಕತ್ತಾ: ಕೊರೊನಾಗೆ ದೇಶವೇ ತತ್ತರಿಸಿ ಹೋಗುತ್ತಿದೆ. ಸೂಕ್ತ ಬೆಡ್, ಆಕ್ಸಿಜನ್ ಹಾಗೂ ಇತರೇ ವೈದ್ಯಕೀಯ ಉಪಕರಣಗಳ ಕೊರತೆ ಎದುರಿಸುತ್ತಿವೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಸೆಲೆಬ್ರಿಟಿಗಳು ಹಾಗೂ ಸಾಮಾನ್ಯ ಜನರು ಸ್ವಯಂ ಪ್ರೇರಿತರಾಗಿ ದೇಣಿಗೆ ನೀಡುತ್ತಿದ್ದಾರೆ. ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಲಿ ವೀಕ್ಷಕ ವಿವರಣೆಗಾರ ರತನ್ ಶುಕ್ಲಾ ಕೊರೊನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ್ದಾರೆ.
It is not important who you are, it is important who you are with in this time of need.#Covid19 #StayHomeStaySafe #helpindia #Dilse pic.twitter.com/W4qWYu47t9
— Laxmi Ratan Shukla (@Lshukla6) May 4, 2021
Advertisement
ಮೇ 6, 2021 ರಂದು ನನ್ನ ಹುಟ್ಟು ಹಬ್ಬವಿದೆ. ನಾನು 2021 ನೇ ಸಾಲಿನ ಐಪಿಎಲ್ ವೀಕ್ಷಕ ವಿವರಣೆಯಲ್ಲಿ ಬಂದಿರುವ ಸಂಪೂರ್ಣ ಸಂಭಾವನೆಯನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಪರಿಹಾರ ನೀಧಿಗೆ ನೀಡುತ್ತಿದೇನೆ. ಕೊರೊನಾ ವಿರುದ್ಧದ ಹೋರಾಟಕ್ಕೆ ನನ್ನ ಸಣ್ಣ ಕೊಡುಗೆ. ಕೊರೊನಾ ವಿರುದ್ಧ ಗೆಲುವು ಸಾಧಿಸೋಣ ಎಂದು ಟ್ವೀಟ್ ಮಾಡಿದ್ದಾರೆ.
Advertisement
Today, 6th May 2021, on my Birthday, am humbly Donating my entire #IPL2021 commentary fees, to the #westbengal #CHIEFMINISTERRELIEF FUND. A small contribution to fight this disastrous 2nd wave Corona Situation ,from my end for my people????WinCorona #COVID19 #StaySafe #India #LRS
— Laxmi Ratan Shukla (@Lshukla6) May 6, 2021
Advertisement
ದೇಸಿ ಕ್ರಿಕೆಟ್ ತನ್ನದೇ ಆದ ಛಾಪು ಮೂಡಿಸಿರುವ ಲಕ್ಷ್ಮಿ ರತನ್ ಶುಕ್ಲಾ 1999ರಲ್ಲಿ ಭಾರತ ಪರ 3 ಏಕದಿನ ಪಂದ್ಯಗಳನ್ನಾಡಿದ್ದಾರೆ. ಶುಕ್ಲಾ 137 ಪ್ರಥಮ ದರ್ಜೇ, 141 ಲಿಸ್ಟ್ ಎ ಹಾಗೂ 81 ಟಿ20 ಪಂದ್ಯಗಳನ್ನಾಡಿದ್ದಾರೆ. ಐಪಿಎಲ್ನಲ್ಲಿ ಕೋಲ್ಕತ್ತಾ ನೇಟ್ ರೈಡರ್ಸ್, ಸನ್ ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. 2015ರಲ್ಲಿ ಲಕ್ಷ್ಮಿ ರತನ್ ಶುಕ್ಲಾ ಸ್ಪರ್ಧಾತ್ಮಕ ಕ್ರಿಕೆಟ್ಗೆ ವಿದಾಯ ಹೇಳಿ ವೀಕ್ಷಕ ವಿವರಣೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
Advertisement