– ಎಲ್ಲರಿಗೂ ಆರೋಗ್ಯ ತಪಾಸಣೆ, ಕ್ವಾರಂಟೈನ್
ಬೆಂಗಳೂರು: ಲಾಕ್ ಡೌನ್ ಬಳಿಕ ಗುರುವಾರ ದೆಹಲಿಯಿಂದ ಪ್ರಯಾಣಿಕರನ್ನು ಹೊತ್ತು ಬೆಂಗಳೂರಿಗೆ ವಿಶೇಷ ರೈಲು ಬಂದಿದ್ದು, ಇಂದು ಮತ್ತೊಮ್ಮೆ ದೆಹಲಿಯಿಂದ ಸಿಲಿಕಾನ್ ಸಿಟಿಗೆ ರೈಲು ಬಂದಿದೆ.
ಗುರುವಾರ ರಾತ್ರಿ ನವದೆಹಲಿಯಿಂದ ಬೆಂಗಳೂರಿನ ಕಡೆ ಹೊರಟಿದ್ದ ಶ್ರಮಿಕ್ ಎಕ್ಸ್ ಪ್ರೆಸ್ ಇಂದು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದೆ. ಈ ಮೂಲಕ ರೈಲು ಸಂಚಾರ ಆರಂಭಗೊಂಡ ಬಳಿಕ ಎರಡನೇ ವಿಶೇಷ ರೈಲು ಬೆಂಗಳೂರಿಗೆ ಬಂದಿದೆ. ಎರಡನೇ ಹಂತದಲ್ಲಿ ದೆಹಲಿಯಿಂದ 601 ಜನ ಪ್ರಯಾಣಿಕರು ಬೆಂಗಳೂರಿಗೆ ಬಂದಿದ್ದಾರೆ.
Advertisement
Advertisement
ಇಂದು ಬೆಳಗ್ಗೆ 6.40ಕ್ಕೆ ಬೆಂಗಳೂರು ಕೆಎಸ್ಆರ್ ರೈಲ್ವೆ ನಿಲ್ದಾಣ ತಲುಪಿದ್ದು, ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ರೈಲ್ವೆ ನಿಲ್ದಾಣದಲ್ಲಿ ಎಲ್ಲಾ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಿದ್ದಾರೆ. ಅಲ್ಲದೆ ಅಧಿಕಾರಿಗಳು ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಿದ್ದಾರೆ. ಇದನ್ನೂ ಓದಿ: ನಾವು ಏನಾದ್ರು ತಿಂದ್ರೆ ತಾನೆ ಮಗುವಿಗೆ ಹಾಲು ಕೊಡಲು ಸಾಧ್ಯ: ತಾಯಂದಿರ ಕಣ್ಣೀರು
Advertisement
ದೆಹಲಿಯಿಂದ ರೈಲಿನಲ್ಲಿ ಆಗಮಿಸುವ ಪ್ರಯಾಣಿಕರು ಕಡ್ಡಾಯ ಕ್ವಾರಂಟೈನ್ಗೆ ಒಳಪಡಬೇಕು. ಹೀಗಾಗಿ ಪ್ರಯಾಣಿಕರು ಇಚ್ಚಿಸುವ ಬೆಂಗಳೂರಿನ ವಿವಿಧ ಸ್ಟಾರ್ ಹೊಟೇಲ್, ಹಾಸ್ಟೆಲ್ ಮತ್ತು ಪಿಜಿಗಳಲ್ಲಿ ಕ್ವಾರಂಟೈನ್ ಗೆ ವ್ಯವಸ್ಥೆ ಮಾಡಲಾಗಿದೆ. ಇತ್ತ ಪೊಲೀಸರು ಪ್ರಯಾಣಿಕರ ಕುಟುಂಬಸ್ಥರು ಮತ್ತು ಯಾರನ್ನೂ ರೈಲ್ವೆ ನಿಲ್ದಾಣದ ಒಳಗೆ ಬಿಡದ ಬ್ಯಾರಿಕೇಡ್ ಹಾಕಿ ಭದ್ರತೆ ಕೈಗೊಂಡರು. ಗುರುವಾರ ನಡೆದ ಗೊಂದಲ ಮತ್ತು ಗಲಾಟೆ ಮರುಕಳಿಸದಂತೆ ಪೊಲೀಸರು ಇಂದು ಎಚ್ಚರಿಕೆ ವಹಿಸಿದ್ದರು.
Advertisement
ದೆಹಲಿಯಿಂದ ಬಂದ ಬಹುತೇಕ ಪ್ರಯಾಣಿಕರು 3 ಸ್ಟಾರ್ ಹೋಟೆಲ್ ಗಳ ಆಯ್ಕೆ ಮಾಡಿದ್ದಾರೆ. ಸುಮಾರು 6 ಬಿಎಂಟಿಸಿ ಬಸ್ ಗಳಲ್ಲಿ ಕ್ವಾರಂಟೈನ್ಗೆ ಕಳುಹಿಸಿದ್ದಾರೆ. ಇದನ್ನೂ ಓದಿ: ‘ಕ್ವಾರಂಟೈನ್ ಆಗಲು ನಾವು ಇಲ್ಲಿ ಬರ್ಬೇಕಿತ್ತಾ’- ದಿಲ್ಲಿಯಿಂದ ಬಂದವ್ರ ಆಕ್ರೋಶ
ಗುರುವಾರ ಬೆಳಗ್ಗೆ 6.40ರ ಸುಮಾರಿಗೆ ಬೆಂಗಳೂರು ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ದೆಹಲಿಯಿಂದ ಮೊದಲ ವಿಶೇಷ ರೈಲು ಆಗಮಿಸಿತ್ತು. ಕೇಂದ್ರ ಸರ್ಕಾರ ದೇಶಾದ್ಯಂತ 30 ವಿಶೇಷ ರೈಲು ಸಂಚಾರ ಆರಂಭಿಸಲು ಅವಕಾಶ ಮಾಡಿಕೊಟ್ಟಿತ್ತು. ಹೀಗಾಗಿ ಮಂಗಳವಾರ ರಾತ್ರಿ ದೆಹಲಿಯಿಂದ ಬೆಂಗಳೂರಿಗೆ ವಿಶೇಷ ರೈಲು ಹೊರಟಿತ್ತು. ರೈಲಿನಲ್ಲಿ ಸುಮಾರು 1,000 ಪ್ರಯಾಣಿಕರು ಆಗಮಿಸಿದ್ದು, ಎಲ್ಲರನ್ನೂ ಕ್ವಾರಂಟೈನ್ ಒಳಪಡಿಸಲು ಸಿದ್ಧತೆ ನಡೆಸಲಾಗುತ್ತು. ಈ ವೇಳೆ ಪ್ರಯಾಣಿಕರು ಕ್ವಾರಂಟೈನ್ ಆಗಲು ಇಲ್ಲಿ ಬರಬೇಕಿತ್ತಾ ಎಂದು ಪ್ರಶ್ನಿಸಿ ತಮ್ಮ ಆಕ್ರೋಶ ಹೊರಹಾಕಿದ್ದರು. ಇದರಲ್ಲಿ ಕ್ವಾರಂಟೈನ್ ಒಪ್ಪದೆ 19 ಮಂದಿ ದೆಹಲಿಗೆ ವಾಪಾಸ್ ಆಗಿದ್ದರು.