– ಸೋಂಕಿತರು ಹೋಮ್ ಐಸೋಲೇಟ್ ಆಗಿರಲಿಲ್ಲ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೂರನೇ ಅಲೆಯಲ್ಲಿ ಸೋಂಕು ಹೆಚ್ಚಾಗಲು ಜನರ ನಿರ್ಲಕ್ಷ್ಯವೇ ಕಾರಣ ಎಂದು ಸರ್ಕಾರ ನಡೆಸಿದ ಸಮೀಕ್ಷಾ ವರದಿ ಹೇಳಿದೆ.
Advertisement
ದೆಹಲಿಯಲ್ಲಿ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಸ್ವಯಂ ಸೇವಕರಿಂದ ಸಮೀಕ್ಷೆಯೊಂದನ್ನು ನಡೆಸಲಾಗಿತ್ತು. ಪಶ್ಚಿಮ ದೆಹಲಿಯಲ್ಲಿ ನಡೆಸಿದ ಸಮೀಕ್ಷೆಯ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ.
Advertisement
Advertisement
ಸುಮಾರು 58 ಲಕ್ಷ ಮಂದಿ ಒಳಗೊಳ್ಳುವ ಸಮೀಕ್ಷೆ ನಡೆಸಿದ್ದ ರಾಜ್ಯ ಸರ್ಕಾರ, ಕೊರೊನಾ ಸೋಂಕಿತರ ಮೇಲೆ ಕಣ್ಣಿಟ್ಟಿತ್ತು. ಸೋಂಕು ಹೆಚ್ಚಾಗಲು ಜನರ ಹಾಗೂ ಕೊರೊನಾ ಸೋಂಕಿತರ ನಿರ್ಲಕ್ಷ್ಯವೇ ಕಾರಣ ಎಂದು ಈ ಸಮೀಕ್ಷೆಯಲ್ಲಿ ತಿಳಿಸಲಾಗಿದೆ.
Advertisement
ಕೊರೊನಾ ನಿಮಯಗಳ ಉಲ್ಲಂಘನೆಯಾಗಿರುವುದು ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ. ಹೋಮ್ ಐಸೂಲೇಷನ್ ನಲ್ಲಿ ಇರಬೇಕಿದ್ದ ಹಲವು ಸೋಂಕಿತರು ಮನೆಯಲ್ಲಿ ಇರಲಿಲ್ಲ, ಇನ್ನು ಕೆಲವರು 17 ದಿನದ ಬದಲಿಗೆ 10 ದಿನಗಳು ಮಾತ್ರ ಕ್ವಾರಂಟೈನ್ ಆಗಿದ್ದರು ಎಂಬುದು ಸಮೀಕ್ಷೆ ವೇಳೆ ತಿಳಿದಿದೆ.
ಹಲವು ಸೋಂಕಿತ ವ್ಯಕ್ತಿಗಳು ಪಾರ್ಕ್ಗೆ ವ್ಯಾಯಾಮ ಮಾಡಲು, ಹಾಲು, ತರಕಾರಿ ಖರೀದಿಸಲು ಮಾರುಕಟ್ಟೆಗೆ ಹೋಗಿದ್ದಾರೆ. ಅಲ್ಲದೆ ಮತ್ತಷ್ಟು ಸೋಂಕಿತರು ನೊಯ್ಡಾದಲ್ಲಿರುವ ಕಚೇರಿಗಳಿಗೆ ತೆರಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗೆ ನಿಯಮಗಳ ಉಲ್ಲಂಘನೆಯಿಂದ ದೆಹಲಿಯಲ್ಲಿ ಡೆಡ್ಲಿ ವೈರಸ್ ಮತ್ತೆ ಪುಟಿದೆದ್ದಿದೆ ಎನ್ನಲಾಗಿದೆ.