ನವದೆಹಲಿ: ಕೊರೊನಾ ಆತಂಕದ ನಡುವೆಯೇ ದೆಹಲಿಯ ಆಪ್ ಸರ್ಕಾರ ಸರ್ಕಾರಿ ಶಾಲೆಗಳ ನೋಂದಣಿಗೆ ಗ್ರೀನ್ ಸಿಗ್ನಲ್ ನೀಡಿದೆ. ಈ ಸಂಬಂಧ ಸುತ್ತೋಲೆಯನ್ನು ಸರ್ಕಾರ ಹೊರಡಿಸಿದೆ.
ಕೇವಲ ಆರು ಮತ್ತು ಒಂಬತ್ತನೇ ತರಗತಿಗಳಿಗೆ ನೋಂದಣಿ ಆರಂಭವಾಗಿದ್ದು, ಎಲ್ಲ ಪ್ರಕ್ರಿಯೆ ಆನ್ಲೈನ್ ಮೂಲಕ ನಡೆಯಲಿದೆ. ಆರು ಮತ್ತು ಒಂಬತ್ತನೇ ತರಗತಿಗೆ ಅಡ್ಮಿಷನ್ ಪಡೆಯುವ ವಿದ್ಯಾರ್ಥಿಗಳಿಗೆ ನೀಡಲಾಗುವ ಕೋಡ್ ಜುಲೈ 17ರಿಂದ ಜನರೇಟ್ ಮಾಡಲಾಗುವುದು.
Advertisement
Advertisement
ಪೋಷಕರು ಶಾಲೆಗೆ ಬಂದು ಮಕ್ಕಳ ದಾಖಲಾತಿ ಪಡೆಯಲು ಸರ್ಕಾರ ನಿರ್ಬಂಧ ಹೇರಿದೆ. ಎಲ್ಲ ಪ್ರಕ್ರಿಯೆಗಳು ಆನ್ಲೈನ್ ಮೂಲಕವೇ ನಡೆಯಲಿದೆ. ಪೋಷಕರು ಶಾಲೆಗಳಿಗೆ ಬಂದ್ರೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗಲ್ಲ. ಈ ಹಿನ್ನೆಲೆ ಸರ್ಕಾರದ ಈ ಆದೇಶ ಹೊರಡಿಸಿದೆ. ಆದ್ರೆ ಶಾಲೆಗಳು ಯಾವಾಗ ಆರಂಭವಾಗುತ್ತೆ ಅನ್ನೋದನ್ನ ಸರ್ಕಾರ ತಿಳಿಸಿಲ್ಲ.
Advertisement