ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಮಹಾಮಾರಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಆಯಾ ರಾಜ್ಯಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇತ್ತ ದೆಹಲಿಯಲ್ಲಿ ವೀಕೆಂಡ್ ಲಾಕ್ಡೌನ್ ಘೋಷಣೆ ಮಾಡಲಾಗಿದೆ.
Curfew passes to be issued to those rendering essential services. Malls, gyms, spas and auditoriums to be closed. Cinemas halls to operate at 30% capacity only. People will not be allowed to dine-in restaurants, only home deliveries permitted: Delhi CM Arvind Kejriwal pic.twitter.com/dfjCvtFFDD
— ANI (@ANI) April 15, 2021
Advertisement
ಮದುವೆಗಳಿಗೆ ಪಾಸ್ ಕಡ್ಡಾಯ ಮಾಡಲಾಗಿದೆ. ಸಿನೆಮಾ ಥಿಯೇಟರ್ಗಳಲ್ಲಿ ಶೇ.30ರಷ್ಟು ಸೀಟು ಭರ್ತಿಗೆ ಮಾತ್ರ ಅವಕಾಶ. ವಾರಾಂತ್ಯದಲ್ಲಿ ರೆಸ್ಟೋರೆಂಟ್ ಹೋಟೆಲ್, ಮಾಲ್, ಜಿಮ್ ಕಡ್ಡಾಯವಾಗಿ ಬಂದ್ ಮಾಡಲಾಗುತ್ತಿದೆ. ಅಲ್ಲದೆ ಸಿನಿಮಾ ಥೀಯೇಟರ್ ಗಳು ಕೂಡ ವಾರಾಂತ್ಯದಲ್ಲಿ ಬಂದ್ ಆಗುತ್ತಿದೆ.
Advertisement
ಟಿಕೆಟ್ ತೋರಿಸಿದರಷ್ಟೆ ಪ್ರಯಾಣಕ್ಕೆ ಅನುಮತಿ ನೀಡಲಾಗುತ್ತದೆ. ಅತ್ಯವಶ್ಯಕ ಓಡಾಟಕಷ್ಟೇ ಅವಕಾಶ ನೀಡಲಾಗುತ್ತದೆ. ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲ್ ಗಷ್ಟೇ ಅವಕಾಶ ನೀಡಲಾಗುತ್ತದೆ. ನಾಳೆ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ನೈಟ್ ಕರ್ಪ್ಯೂ ವಿಧಿಸಲಾಗುತ್ತದೆ.
Advertisement
There is no shortage of beds in hospitals in Delhi. According to the latest data, more than 5000 beds are available: Delhi CM Arvind Kejriwal on COVID19 situation pic.twitter.com/mmXG446Yke
— ANI (@ANI) April 15, 2021
Advertisement
ಈ ಸಂಬಂಧ ಸಿಎಂ ಅರವಿಂದ್ ಕೇಜ್ರಿವಾಲ್ ಮಾತನಾಡಿ, ದೆಹಲಿಯಲ್ಲಿ ಯಾವುದೇ ಬೆಡ್ ಕೊರತೆ ಇಲ್ಲ. ಒಂದೆರಡು ಆಸ್ಪತ್ರೆಗಳಲ್ಲಿ ಬೆಡ್ ಫುಲ್ ಆಗಿರಬಹುದು. ಆದ್ರೆ ಬಹುತೇಕ ಆಸ್ಪತ್ರೆಗಳಲ್ಲಿ ಬೆಡ್ ಖಾಲಿ ಇದೆ. ಸಾರ್ವಜನಿಕರು ಸಹ ಇದೇ ಆಸ್ಪತ್ರೆ ಬೇಕೆಂದು ಹಠ ಮಾಡಬಾರದು. ಅದು ನಮ್ಮನ್ನು ಸಂಕಷ್ಟಕ್ಕೆ ದೂಡುತ್ತದೆ ಎಂದರು.
ಆಸ್ಪತ್ರೆ, ರೈಲ್ವೇ ನಿಲ್ದಾಣ ಸೇರಿದಂತೆ ಮೂಲಭೂತ ಸೌಲಭ್ಯಗಳಿಗೆ ಅವಕಾಶ ಕಲ್ಪಿಸಲಾಗಿದೆ. ವೀಕೆಂಡ್ ಲಾಕ್ಡೌನ್ ವೇಳೆ ಸಂಚರಿಸುವ ಜನರು ಸ್ಥಳೀಯ ಅಧಿಕಾರಿಗಳಿಂದ ಪಾಸ್ ಪಡೆಯಬೇಕು. ವಾರಂತ್ಯದಲ್ಲಿ ಮೂಲಭೂತ ಸೌಕರ್ಯಗಳನ್ನ ಹೊರತು ಪಡಿಸಿ ಎಲ್ಲ ಚಟುವಟಿಕೆಗಳು ಬಂದ್ ಆಗಲಿವೆ. ವಾರದ ಮಾರುಕಟ್ಟೆಯಲ್ಲಿ ಜನ ಸಂದಣಿ ಕಡಿಮೆ ಮಾಡಲು ಕೆಲ ನಿಯಮಗಳನ್ನ ಜಾರಿಗೆ ತರಲಾಗುವುದು. ವಾರಂತ್ಯದಲ್ಲಿಯ ಜನ ಸಂಚಾರ ಕಡಿಮೆ ಮಾಡೋದು ನಮ್ಮ ಉದ್ದೇಶ ಎಂದು ಹೇಳಿದರು.
तेज़ी से फैलती कोरोना संक्रमण की इस नई लहर और दिल्ली में इसकी वर्तमान स्थिति पर एक महत्वपूर्ण प्रेस कॉन्फ्रेंस | LIVE https://t.co/RB21CQ0jJM
— Arvind Kejriwal (@ArvindKejriwal) April 15, 2021
ಈಗಾಗಲೇ ಮದವೆಗಳು ದಿನ ನಿಗದಿ ಆಗಿರುತ್ತೆ. ವೀಕೆಂಡ್ ಲಾಕ್ಡೌನ್ ನಿಂದ ನಿಮಗೆ ತೊಂದರೆ ಆಗಲಾರದು. ಮದುವೆ ಆಯೋಜಿಸುವ ಕುಟುಂಬಗಳಿಗೆ ವಿಶೇಷ ಪಾಸ್ ನೀಡಲಾಗುತ್ತದೆ. ಈ ಎಲ್ಲ ನಿರ್ಬಂಧಗಳು ನಿಮ್ಮ, ನಿಮ್ಮೆಲ್ಲರ ಕುಟುಂಬ ಸದಸ್ಯರ ಸುರಕ್ಷತೆಗಾಗಿ ತಂದಿದ್ದೇವೆ. ಈ ನಿರ್ಬಂಧಗಳಿಂದ ಕಷ್ಟ ಆಗಲಿದೆ. ಆದ್ರೂ ನೀವೆಲ್ಲರೂ ಸರ್ಕಾರದ ಜೊತೆ ಈ ನಾಲ್ಕನೇ ಅಲೆ ವಿರುದ್ಧ ಹೋರಾಟದಲ್ಲಿ ಕೈ ಜೋಡಿಸುತ್ತಿರಿ ಎಂದು ನಂಬಿದ್ದೇನೆ ಎಂದು ಸಿಎಂ ತಿಳಿಸಿದರು.